ಕನ್ನಡ ಜನ್ಮ ಭೂಮಿ ಯುವಸೇನೆ ಸಂಘಟನೆ ಲಾಂಛನ ಬಿಡುಗಡೆ ಹಾಗೂ ಕಲ್ಯಾಣ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒತ್ತಾಯಿಸಿ ಹೋರಾಟ

ಕನ್ನಡ ಜನ್ಮ ಭೂಮಿ ಯುವಸೇನೆ ಸಂಘಟನೆ ಲಾಂಛನ ಬಿಡುಗಡೆ ಹಾಗೂ ಕಲ್ಯಾಣ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒತ್ತಾಯಿಸಿ ಹೋರಾಟದ ಕುರಿತು ಪತ್ರಿಕಾ ಗೋಷ್ಠಿ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ, ಕನ್ನಡ ಜನ್ಮ ಭೂಮಿ ಯುವಸೇನೆ ಸಂಘಟನೆ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಚಾಂದಪಾಶಾ ಮುಲ್ಲಾ ಹಾಗೂ ಪದಾಧಿಕಾರಿಗಳಿಂದ ಸುದ್ದಿಘೋಷ್ಠಿ ಹಮ್ಮಿಕೊಂಡಿದ್ದು ಇರುತ್ತದೆ.

ಈ ಸಂಘಟನೆಯು ಅಸ್ತಿತ್ವಕ್ಕೆ ಬರುತ್ತಿದ್ದು. ಸಂಘಟನೆಯು ಕರ್ನಾಟಕ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳೊಂದಿಗೆ ರಾಜ್ಯಾದ್ಯಾಂತ ನಾಡು- ನುಡಿ, ನೆಲ-ಜಲ, ಬಾಷೆ, ಉದ್ಯೋಗ, ಸಮಗ್ರ ಸಮಸ್ಯೆಗಳಿಗಾಗಿ ಹೋರಾಟಕ್ಕೆ ಸಿದ್ಧವಾಗಿದೆ. ಮತ್ತು ಶೀಘ್ರವೇ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಘಟಕಗಳನ್ನು ರಚನೆ ಮಾಡುವುದರ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ತಯಾರಾಗಿರುತ್ತೇವೆ, ಮತ್ತು ಕನ್ನಡಕ್ಕಾಗಿ ಶ್ರಮಿಸುವ ಸಾಹಿತಿಗಳು, ಲೇಖಕರು, ಕವಿಗಳು ಮತ್ತು ಶಾಲೆಗಳು ಹಾಗೂ ಕನ್ನಡದ ರಾಜ ಮನೆತನಗಳ ಬಗ್ಗೆ ವಿಶೇಷವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ನಮ್ಮದಾಗಿರುತ್ತದೆ.

ಕಲ್ಯಾಣ ಕರ್ನಾಟಕದ ಮೂಲಭೂತ ಸಮಸ್ಯೆಗಳಾದ, ಬಡತನದಿಂದ, ಶೈಕ್ಷಣಿಕವಾಗಿ ಹಿಂದುಳಿದಿದ್ದು. ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿಯೂ ಸಹ ಹಿಂದೆ ಉಳಿದಿದ್ದು ಇರುತ್ತದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅನೇಕ ರಾಜ ಮನೆತನಗಳು ಆಳಿದ ಇತಿಹಾಸವಿದೆ. ಸರ್ಕಾರವು ಇಂತಹ ವಿಷಯಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಬೇಕು.

ಹಾಗೂ ಕಲ್ಯಾಣ ಕರ್ನಾಟಕದ ಭಾಗದ ಯಾದಗಿರಿ ಜಿಲ್ಲೆಯ, ಸುರಪುರ ಸಂಸ್ಥಾನದ ಸಮಗ್ರ ಅಧ್ಯಯನಕ್ಕಾಗಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು, ಹಾಗೂ ರಾಷ್ಟ್ರೀಯ ಹಬ್ಬಗಳ ಪ್ರಯುಕ್ತ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅನೇಕ ರಾಜ ಮನೆತನಗಳು ಸ್ಥಬ್ದ ಚಿತ್ರಗಳನ್ನು ಮೆರವಣಿಗೆ ಮಾಡಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.

ಅದಲ್ಲದೇ, ಕಲಬುರಗಿ ವಿಮಾನ ನಿಲ್ದಾಣಕ್ಕೆ ಕನ್ನಡಿಗರ ಶ್ರೇಷ್ಠ ರಾಜ ಮನೆತನವಾದ ರಾಷ್ಟ್ರಕೂಟರ ಮಹಾನ ಪರಾಕ್ರಮಿ ರಾಜ ಅಮೋಘವರ್ಷ ನೃಪತುಂಗರವರ ಹೆಸರಿಡುವಂತೆ ಒತ್ತಾಯಿಸಿ ಸಂಘಟನೆ ಹೋರಾಟ ಮಾಡುತ್ತಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ  ನಡೆದ ಪತ್ರಿಕಾ ಗೋಷ್ಠಿಯಲ್ಲಿ ಚಾಂದಪಾಶಾ ಮುಲ್ಲಾ
ಅಧ್ಯಕ್ಷರು: ಕನ್ನಡ ಜನ್ಮ ಭೂಮಿ ಯುವಸೇನೆ, ಕಲ್ಯಾಣ ಕರ್ನಾಟಕ ಯಾದಗಿರಿ ತಿಳಿಸಿದರು.

City Today News 9341997936