
ಶ್ರೀ ಸಾಯಿ ಕಲಾ ಟ್ರಸ್ಟ್ ವತಿಯಿಂದ ಬನಶಂಕರಿಯ ಸುಚಿತ್ರ ಫಿಲಂ ಸಿಟಿ ಸಭಾಂಗಣದಲ್ಲಿ ಕರುನಾಡ ತಾರೆ ಪ್ರಶಸ್ತಿ ಸಮಾರಂಭವು ಅದ್ಧೂರಿಯಾಗಿ ನೆರವೇರಿತು. 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ 25ಕ್ಕೂ ಹೆಚ್ಚು ಗಣ್ಯ ವ್ಯಕ್ತಿತ್ವಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ಮಾಪಕ ಕೃಷ್ಣೆಗೌಡ, ಹಿರಿಯ ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ, ಯಶೋಮತಿ ರವಿ ಬೆಳಗೆರೆ, ಹಾಸ್ಯ ಕಲಾವಿದ ಮೈಸೂರು ರಮಾನಂದ್, ಗಾಯಕ ಶಶಿಧರ್ ಕೋಟೆ ಮತ್ತು ನಟಿ ಬಿಂದ್ರಾ ಬನವಾಡಿ ಮುಖ್ಯ ಅತಿಥಿಗಳಾಗಿ ಹಾಜರಿದ್ದು ಸಮಾರಂಭಕ್ಕೆ ವಿಶೇಷಭಾರ ನೀಡಿದರು.
ಸಾಯಿ ಕಲಾ ಟ್ರಸ್ಟ್ ಅಧ್ಯಕ್ಷೆ ಸವಿತಾ ಗೌಡ, ನಟ ಸ್ಮೈಲ್ ಶಿವು ಜೊತೆಗೆ ಅನೇಕ ಗಣ್ಯರು ಪಾಲ್ಗೊಂಡಿದ್ದ ಈ ವೇದಿಕೆ, ಕನ್ನಡ ಸಂಸ್ಕೃತಿ ಮತ್ತು ಸಾಧಕರ ಸಾಧನೆಗಳನ್ನು ಗೌರವಿಸುವ ಸಾಂಸ್ಕೃತಿಕ ಆಚರಣೆಯಾಗಿ ತೇಲಿಬಂದಿತು.
City Today News 9341997936

You must be logged in to post a comment.