ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತಯರ ಮತ್ತು ಸಹಾಯಕಿಯರ ಸಂಘ (ರಿ), ರಾಜ್ಯ ಸಮಿತಿ ಬೆಂಗಳೂರು ವತಿಯಿಂದ “ಬೆಂಗಳೂರು ಚಲೋ ಚಳುವಳಿ”

“ಬೆಂಗಳೂರು ಚಲೋ ಚಳುವಳಿ”

ದಿನಾಂಕ 28-01-2025ನೇ ಮಂಗಳವಾರ ಬೆಳಿಗ್ಗೆ : 10–30ಕ್ಕೆ

ಐ.ಸಿ.ಡಿ.ಎಸ್. ಯೋಜನೆ ಪ್ರಾರಂಭವಾಗಿ 50 ವರ್ಷಆಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರು ನಗರದ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ

ದೇಶದಲ್ಲಿ ಮಹಿಳೆಯರು, ಮಕ್ಕಳು, ಗರ್ಭಿನಿಯರು, ಬಾಣಂತಿಯರು, ಕಿಶೋರಿಯರು ಎದುರಿಸಿರುತ್ತಿರುವ ಅಪೌಷ್ಟಿಕತೆ ರಕ್ತಹೀನತೆ, ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕುವ ಹಿನ್ನೆಲೆಯಲ್ಲಿ 1975 ಅಕ್ಟೋಬರ್ 2ರಂದು ಪ್ರಾರಂಭಿಸಲಾದ ಸಮಗ್ರಶಿಶು ಅಭಿವೃದ್ಧಿಯೋಜನೆಯ (ಐ.ಸಿ.ಡಿ.ಎಸ್) ಪರಿಣಾಮಕಾರಿಯಾಗಲು ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದೇವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ (ಐ.ಸಿ.ಡಿ.ಎಸ್) ಯೋಜನೆಯಲ್ಲಿ 3 ರಿಂದ 6ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಪೂರಕ ಪೌಷ್ಠಿಕ ಆಹರ ವಿತರಣೆ ಮಕ್ಕಳಿಗೆ ಚುಚ್ಚು ಮದ್ದು ಕೊಡಿಸುವುದು. ಭಾಗ್ಯಲಕ್ಷ್ಮೀ ಅರ್ಜಿ ಹಾಗೂ ಮಾತೃವಂದನಾ ಅರ್ಜಿಯನ್ನು ಫಲಾನುಭವಿಗಳಿಗೆ ನೀಡುವುದು. ಬಿ.ಎಲ್.ಓ. ಕೆಲಸ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಪೋಷಣ್ ಟ್ರ್ಯಾಕರ್‌ನಲ್ಲಿ ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರ, ತೂಕ ಮತ್ತು ಎತ್ತರವನ್ನು ನಮೂದಿಸರುತ್ತಿದ್ದೇವೆ. ಈ ಹಿಂದೆ 2020, 21, 22ನೇ ಸಾಲಿನಲ್ಲಿ ಕರೋನ ವಾರಿಯರ್ಸ್ಗಳಾಗಿ ಜೀವದ ಹಂಗುತೋರೆದು ಅರೋಗ್ಯ ಇಲಾಕೆಯವರ ಜೊತೆ ಕೆಲಸ ನಿರ್ವಹಿಸಿದ್ದೇವೆ. ಆ ಸಂದರ್ಭದಲ್ಲಿ ಕರೋನ ವೈರಸ್‌ಗೆ ತುತ್ತಾಗಿ ತಂಬಾ ಕಾರ್ಯಕರ್ತೆಯರು ಮರಣ ಹೊಂದಿದ್ದು ಅವರು ಕುಟುಂಬಗಳು ಬೀದಿಗೆ ಬಂದಿರುತ್ತವೆ.

ಹೀಗೆ ನಮ್ಮ ಕೆಲಸದ ಜೊತೆಗೆ ಇತರೆ ಇಲಾಖೆಗಳ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು 50 ವರ್ಷಗಳಿಂದ ಕೆಲಸ ನಿರ್ವಸಿಕೊಂಡು ಬರುತ್ತಿದ್ದೇವೆ ಅದರು ನಮಗೆ ಕನಿಷ್ಠ ಕೂಲಿಯನ್ನು ನೀಡುತ್ತಿಲ್ಲ ಗೌರವಧನದ ಆದರದಲ್ಲಿ ಮಹಿಳೆಯರನ್ನು ಹೀಗೆ ದುಡಿಸಿಕೊಳ್ಳುತ್ತಿರುವುದು ಖಂಡಿಸಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ (ಐ.ಸಿ.ಡಿ.ಎಸ್) ಯೋಜನೆಯ 50 ನೇ ವರ್ಷ ಸುವರ್ಣಮಹೋತ್ಸವವನ್ನು ಅರ್ಥಪೂರ್ವಕವಾಗಿ ಆಚರಿಸಲು ಸರ್ಕಾರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.

ಮುಖ್ಯ ಬೇಡಿಕೆಗಳು:

1) ಅಂಗನವಾಡಿ ಕಾರ್ಯಕರ್ತೆಯರಿಗೆ 25,000-00 ರೂ ಹಾಗೂ ಅಂಗನವಾಡಿ ಸಹಾಯಕಿಯರಿಗೆ 12,000-00 ಸಾವಿರ ರೂ. ಕನಿಷ್ಠ ವೇತನವನ್ನು ನಿಗದಿಮಾಡಬೇಕು.

2) ಕಾರ್ಯಕರ್ತೆಯರನ್ನು ಸಿ.ದರ್ಜೆ ಎಂದು ಮತ್ತು ಸಹಾಯಕಿಯರನ್ನು ಡಿ. ದರ್ಜೆ ಸರ್ಕಾರಿ ನೌಕರರೆಂದು ಪರಿಗಣಿಸಿ, ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ನಮ್ಮ ಕರ್ನಾಟಕದಲ್ಲಿಯೂ ಜಾರಿ ಮಾಡಿ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಮತ್ತು ಬಿ.ಪ್ರೇಮ-ರಾಜ್ಯಾಧ್ಯಕ್ಷರು
ಜಯಲಕ್ಷ್ಮಿ ಬಿ.ಆ‌ರ್-ಗೌರವ ಅಧ್ಯಕ್ಷರು
ವಿಶಾಲಾಕ್ಷಿ-ರಾಜ್ಯ ಖಜಾಂಚಿ
ನಿರ್ಮಲ ಬಿ.ಎಸ್-ರಾಜ್ಯ ಉಪಾಧ್ಯಕ್ಷರು
ಶಾಂತ-ರಾಜ್ಯ ಸಹ ಕಾರ್ಯದರ್ಶಿ
ಭಾರತಿ ಎನ್.ಪಿ-ರಾಜ್ಯ ಸಲಹೆಗಾರರು,
ಎಲ್ಲಾ ಜಿಲ್ಲೆಯ ಮತ್ತು ತಾಲ್ಲೂಕುಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಮಾಡಲಿರುವ ಧರಣಿ ಸತ್ಯಾಗ್ರಹಕ್ಕೆ ಎಲ್ಲರನ್ನು ಬೆಂಗಳೂರಿಗೆ ಕರೆತನ್ನಿ ಯಶಸ್ವಿಗೊಳಿಸಿ ಎಂದು ಉಮಾಮಣಿ- ರಾಜ್ಯ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.


City Toda News
9341997936

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಕೆ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿನ ವಿವರ:

1. ರಾಜ್ಯದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ 2ವರ್ಷಗಳಿಂದ ಖಾಲಿ ಇದ್ದು ಅವರುಗಳು ಕೇಂದ್ರದ ಕರ್ತವ್ಯಗಳನ್ನು ಮಾಡಲು ತುಂಬಾ ತೊಂದರೆಯಾಗುತ್ತಿದೆ ಆದ ಕಾರಣ ತಾವುಗಳು ತಕ್ಷಣವೇ ಖಾಲಿ ಹುದ್ದೆಯನ್ನು ಭರ್ತಿಮಾಡಬೇಕಾಗಿ ಕೇಳಿಕೊಳ್ಳುತ್ತೇವೆ.

2. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆ & ಸಹಾಯಕಿಯರಿಗೆ ಕನಿಷ್ಠ ವೇತನ ಕೊಡಬೇಕಾಗಿ ಕೇಳಿಕೊಳ್ಳುತ್ತೇವೆ ಮತ್ತು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ 6ನೇ ವೇತನವನ್ನು ಜಾರಿಮಾಡಿಸಿಕೊಡಬೇಕು.

3. ಅಂಗನವಾಡಿ ಕಾರ್ಯಕರ್ತೆಯರ & ಸಹಾಕಿಯರ ಮುಂಬಡ್ತಿಯ ಸ್ಥಾನ ಪಲ್ಲಟ (ವರ್ಗಾವಣೆ) ಇವುಗಳಿಗೆ ಸರ್ಕಾರದ ಮಾನದಂಡ 3ಕಿ.ಮಿ. ವ್ಯಾಪ್ತಿ ಇದ್ದು ಆದರೆ ತಾಲ್ಲೂಕ್‌ಗಳಲ್ಲಿ ಇವುಗಳ ಸಮಸ್ಯೆಯನ್ನು ಹೇಳುತ್ತಾರೆ ಆದಕಾರಣ ಯೋಜನೆಯ ವ್ಯಾಪ್ತಿ ಒಳಗೆ 3 ಕಿ.ಮೀ. ಎಂದು ಆದೇಶವನ್ನು ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.

4. ಸರ್ಕಾರ ವಿತರಿಸಿರುವ ಮೊಬೈಲ್‌ಗಳ ಕರೆನ್ಸಿ ಮುಗಿದಿದ್ದು ತಾಲ್ಲೂಕ್‌ಗಳಲ್ಲಿ ಸ್ವಂತ ಕರೆನ್ಸಿಯಲ್ಲಿ ಕರ್ತವ್ಯ ನಿರ್ವಹಿಸಲು ಒತ್ತಾಯಸುತ್ತಾರೆ ಇದು ನಮಗೆ ಸಾದ್ಯವಾಗುವುದಿಲ್ಲ

5. ರಾಜ್ಯದಲ್ಲಿ ನಿವೃತ್ತಿ ಆದ ಕಾರ್ಯಕರ್ತೆ & ಸಹಾಯಕಿಯರಿಗೆ ಎನ್.ಪಿ.ಎಸ್. ಹಣವನ್ನು 2-3 ತಿಂಗಳಲ್ಲಿ ಅವರ ಖಾತೆಗೆ ಹಣವನ್ನು ಕೊಡಿಸುವ ವ್ಯವಸ್ಥೆ ಮಾಡಿಕೊಡಬೇಕು ನಿವೃತ್ತಿ ಆದವರಿಗೆ ಹಣಬರುವುದು ತುಂಬ ತಡವಾಗುತ್ತಿದೆ ಈ ಅವಧಿಯಲ್ಲಿ ಕೆಲವು ಕಾರ್ಯಕರ್ತೆಯರು ಮತ್ತು ಸಹಯಾಕಿಯರು ಕಾಯಿಲೆಗಳಿಂದ ಮರಣ ಹೊಂದಿದ್ದಾರೆ. ಅವರುಗಳಿಗೆ ಹಣವಿಲ್ಲದೇ ತುಂಬ ತೊಂದರೆ ಆಗುತ್ತದೆ.

6. ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು ಅಲ್ಲಿಯವರೆಗೆ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಭರಿಸಬೇಕು.

7. ರಾಜ್ಯದಲ್ಲಿ ಬಿಸಿಊಟ ತಯಾರಿಸಲು ಕೊಡುವ ಗ್ಯಾಸ್‌ ಸಿಲಿಂಡರನ್ನು ಏಕರೂಪದಲ್ಲಿ ಇಲಾಖೆಯವರೇ ತುಂಬಿಸಿಕೊಡಬೇಕು.

8. ರಾಜ್ಯದ ಕೆಲವು ಜಿಲ್ಲೆ ತಾಲ್ಲೂಕ್‌ಗಳಲ್ಲಿ 10 ತಿಂಗಳಿಂದ ಬಾಡಿಗೆ ಹಣ, ಮೊಟ್ಟೆ ಹಣ ವಿದ್ಯುತ್ ಬಿಲ್ ಸಿಲಿಂಡರ್ ತುಂಬಿಸಲು ಹಣ ಸಾದಿಲ್‌ವಾರು 2 ವರ್ಷಗಳಿಂದ ಕೊಟ್ಟಿರುವುದಿಲ್ಲ. ಇದರಿಂದ ಕಾರ್ಯಕರ್ತೆಯರಿಗೆ ಕರ್ತವ್ಯ ನಿರ್ವಹಿಸಲು ತುಂಬಾ ತೊಂದರೆ ಆಗುತ್ತದೆ ಆದ ಕಾರಣ ತಾವುಗಳು ಇದನ್ನು ಸರಿಪಡಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.

9. ರಾಜ್ಯದ ಕೆಲವು ತಾಲ್ಲುಕಿನಲ್ಲಿ ಅಂಗನವಾಡಿ ಕೇಂದ್ರಗಳ ಸ್ವಚ್ಛತೆಗೆ ಕೊಡುವ ಸಾದಿಲ್‌ವಾರು 83 ರೂ.ಗಳನ್ನು ಆದೇಶ ಇಲ್ಲದ ಕಾರಣ ಕಡಿತಗೊಳಿಸಿದ್ದಾರೆ ಇದನ್ನು ಸರಿಪಡಿಸಿಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಮೇಲ್ಖಂಡ ವಿಷಯಗಳನ್ನೊಲಗೊಂಡ ಮನವಿ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಸಂಘದ ವತಿಯಿಂದ ಬಿ.ಪ್ರೇಮ್ -ರಾಜ್ಯಾಧ್ಯಕ್ಷರು, ಜಯಲಕ್ಷ್ಮಿ ಬಿ.ಆರ್.-ಗೌರವ ಅಧ್ಯಕ್ಷರು, ಉಮಾಮಣಿ-ರಾಜ್ಯ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಸ್ವತಂತ್ರ ಸಂಘಟನೆ, ವಿಶಾಲಾಕ್ಷಿ-ರಾಜ್ಯ ಖಜಾಂಚಿ, ನಿರ್ಮಲ ಬಿ.ಎಸ್.-ರಾಜ್ಯ ಉಪಾಧ್ಯಕ್ಷರು, ಶಾಂತ-ರಾಜ್ಯ ಸಹ ಕಾರ್ಯದರ್ಶಿ ಮತ್ತು ಭಾರತಿ ಎನ್.ಪಿ.-ರಾಜ್ಯ ಸಲಹೆಗಾರರು ಗಳ ಉಪಸ್ತಿತಿಯಲ್ಲಿ ನೀಡಲಾಯಿತು.

City Today News 9341997936