ಕರ್ನಾಟಕ ರೈತ ಕೂಲಿ ಸಂಘ, ರಾಜ್ಯ ಸಮಿತಿ ಪದಾಧಿಕಾರಿಗಳ ಆಯ್ಕೆ

ದಿನಾಂಕ: 22-08-2023ರಂದು ಕರ್ನಾಟಕ ರೈತ ಕೂಲಿ ಸಂಘ, ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆಯನ್ನು ರಾಜ್ಯಾಧ್ಯಕ್ಷರಾದ ಪೆದ್ದೂರು ವೆಂಕಟರಾಮ್ ರವರ ಅಧ್ಯಕ್ಷತೆಯಲ್ಲಿ, ಬಾಬ್‌ಬಾಗ್ ಮೈದಾನದಲ್ಲಿ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ರಾಜ್ಯವ ರೈತ ಕೂಲಿ ಜನರ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ, ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲು ಸಭೆ ತೀರ್ಮಾಸಿ ಸಂಘಟನೆಯನ್ನು ರಾಜ್ಯದಲ್ಲಿ ಮತ್ತಷ್ಟು ಬಲಗೊಳಿಸಬೇಕೆನ್ನುವ ಉದ್ದೇಶದೊಂದಿಗೆ ರಾಜ್ಯ ಸಮಿತಿಗೆ ಈ ಕೆಳಕಂಡ ಪದಾಧಿಕಾರಿಗಳನ್ನು ಸಭೆಯ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು,

ಪದಾಧಿಕಾರಿಗಳ ವಿವರ

1. ಬೆಂಗಳೂರಿನ ಕೆ.ಆರ್.ಪುರದ ನಿವಾಸಿಯಾದ ಶ್ರೀ ಎನ್.ಗಂಗಾಧರಯ್ಯರವರು (ನಿವೃತ್ತ ಕಾರ್ಯಪಾಲಕ ಅಭಿಯಂತರರು) ಇವರನ್ನು ಕರ್ನಾಟಕ ರೈತ ಕೂಲಿ ಸಂಘದ ರಾಜ್ಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. 2. ಬೆಂಗಳೂರಿನ ವಿಜಯ್ ಆನಂದ್‌ ಕುಮಾರ್ ಇವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು  ಪೆದ್ದೂರು ವೆಂಕಟರಾಮ್‌, ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.

City Today News 9341997936