
ಸದರಿ ಭ್ರಷ್ಟಾಚರ ಹಗರಣ ನಡೆದ 2019 -2020ಅವಧಿಯಲ್ಲಿ ಮುಖ್ಯಮಂತ್ರಿ ಗಳಾಗಿದ್ದವರು ಮಾನ್ಯ ಯಡಿಯೂರುಪ್ಪನವರು ಮತ್ತು ಸದರಿ ಮಂಡಳಿ ವ್ಯಾಪ್ತಿಗೆ ಸೇರಿದ ಸಹಕಾರ ಇಲಾಖೆಗೆ ಮತ್ತು ಗೃಹ ಇಲಾಖೆಗೆ ಸಚಿವರಾಗಿದ್ದವರು, ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಹಾವೇರಿ ಲೋಕಸಭಾಕ್ಷೇತದ ಬಿ.ಜೆ.ಪಿ ಸಂಸದರಾದ ಮಾನ್ಯ ಬಸವರಾಜ್ ಬೊಮ್ಮಾಯಿಯವರು.
ಸದರಿ ಮಂಡಳಿಯ ಅಂದಿನ ಎಂ.ಡಿ. ಆಗಿದ್ದ ಐ.ಎ.ಎಸ್ ಅಧಿಕಾರಿ ಕರೀಗೌಡರವರು ಸದರಿ ಮಂಡಳಿಗೆ ಸೇರಿದ ಆಂದ್ರಬ್ಯಾಂಕಿನಲ್ಲಿ ಇಟ್ಟಿದ್ದ 100 ಕೋಟಿ ನಿಶ್ಚಿತ ಠೇವಣಿ ಹಣವನ್ನು ಕಾನೂನು ಬಾಹಿರವಾಗಿ ಅಂದಿನ ಸಿಂಡಿಕೇಟ್ ಬ್ಯಾಂಕ್ (ಇಂದು ಕೆನರಾ ಬ್ಯಾಂಕ್) ಉತ್ತರಹಳ್ಳಿ ಶಾಖೆಗೆ ವರ್ಗಾಯಿಸುವಂತೆ 18/11/2019ರಂದು ಆದೇಶಿಸಿದ್ದರು.
20/1/2020 ರಂದು ಸದರಿ ಕರೀಗೌಡರು ಸದರಿ ಬ್ಯಾಂಕಿನಲ್ಲಿ ಈ ಕುರಿತು ವಿಚಾರಿಸಿದಾಗ ಬ್ಯಾಂಕಿನವರು 100 ಕೋಟಿ ಪೈಕಿ 52 ಕೋಟಿ ನಿಶ್ಚಿತ ಠೇವಣಿ ಸರ್ಟಿಪೀಕೇಟ್ ಅಸಲಿಯಾಗಿದೆ ಯೆಂದು ಉಳಿದ 48 ಕೋಟಿ ನಿಶ್ಚಿತ ಠೇವಣಿ ಸರ್ಟಿಪೀಕೇಟ್ ನಕಲಿ ಎಂದು ತಿಳಿಸಿರುತ್ತಾರೆ.
22/1/2020 ರಂದು ಸದರಿ ಮಂಡಳಿಯ ಸದರಿ ಎಂ.ಡಿ. ಯವರು ಈ ಕುರಿತು ಸದರಿ ಬ್ಯಾಂಕಿನವರ ವಿರುದ್ಧ ದೂರು ಸಲ್ಲಿಸಿ ಎಫ್ ಐ ಆರ್ ಆಗಿದ್ದು ನಂತರ ಅಂದಿನ ಗೃಹಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿಯುವರ ಸದರಿ ಪ್ರಕರಣವನ್ನು ಸಿ ಸಿ ಬಿ ಗೆ ವರ್ಗಾಯಿಸಿದ್ದು, ಇದೀಗ ಚಾರ್ಜ್ ಶೀಟ್ ಆಗಿದ್ದು ಬೆಂಗಳೂರಿನ 65- 4ನೇ ಹೆಚ್ಚುವರಿ ಸಿ ಎಂ ಎಂ ಕೋರ್ಟ ನಲ್ಲಿ ವಿಚಾರಣೆ ಹಂತದಲ್ಲಿರುತ್ತದೆ. ವಿಚಾರಣೆ ಆಮೆಗತಿಯಲ್ಲಿ ನಡೆಯುತ್ತಿದ್ದೆ.
ಹಕ್ಕೋತ್ತಾಯಗಳು:
1) ಸದರಿ ಪ್ರಕರಣವನ್ನು ಕೂಡಲೇ ತ್ವರಿತ ನ್ಯಾಯಾಲಯ( ಪಾಸ್ಟ್ ಟ್ರಾಕ್)ಕ್ಕೆ ವರ್ಗಾಯಿಸಿ
2) ಸದರಿ ಭ್ರಷ್ಟಾಚಾರಕ್ಕೆ ಮುಖ್ಯ ಹೊಣೆಗಾರರಾಗಿರುವ ಸದರಿ ಮಂಡಳಿಯ ಅಂದಿನ ಎಂ.ಡಿ. ಐ ಎ ಎಸ್ ಅಧಿಕಾರಿ ಕರೀಗೌಡರನ್ನು ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಬೇಕು.
3) ಅಂದಿನ ಸಹಕಾರಿ ಇಲಾಖೆಯ ಸಚಿವರು, ಮತ್ತು ಹಾಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಸಂಸದರಾಗಿರುವ ಬಸವರಾಜ ಬೊಮ್ಮಾಯಿಯುವರಿಗೆ ಈ ಹಗರಣದ ನೈತಿಕ ಹೊಣೆ ಇದ್ದು ಅವರನನ್ನು ಸಹ ವಿಚಾರಣೆಗೆ ಗುರಿಪಡಿಸಿ ಎಲ್ಲ ತಪ್ಪಿಸ್ಥರಿಗೆ ಶಿಕ್ಷೆ ವಿಧಿಸಬೇಕು.
4) ಸದರಿ 48 ಕೋಟಿ ಸರ್ಕಾರದ ಹಣ ವಸೂಲಾತಿಗಾಗಿ ಎಲ್ಲಾ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು.
5) ಪ್ರಸ್ತುತ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಜರುಗಿರುವ ಭ್ರಷ್ಟಾಚಾರ ಹಗರಣದ ಕುರಿತು ಪೊಲೀಸ್ ಇಲಾಖೆ ಮತ್ತು ಸರ್ಕಾರದ ಕ್ರಮಗಳನ್ನು ತ್ವರಿತಗೊಳಿಸಿ ಈ ಎಲ್ಲ ಅಪರಾಧಿಗಳಿಗೆ ಕಠಿಣಶಿಕ್ಷೆ ವಿಧಿಸುವಂತೆ ಆಗ್ರಹಿಸುತ್ತೇವೆ.
6) 2013ರಲ್ಲಿ ಹೊರಡಿಸಲಾಗಿರುವ ಸರ್ಕಾರಿ ಆದೇಶದಂತೆ ನಿಗಮ ಮತ್ತು ಮಂಡಳಿಗಳ ಠೇವಣಿಗಳನ್ನು ಸರ್ಕಾರದ ಖಜಾನೆಯಲ್ಲಿ ಮಾತ್ರ ಇಡಬೇಕು ಎಂದು ಡಾ।। ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ,ರಾಜ್ಯ ಸಮಿತಿ-ಬೆಂಗಳೂರು ವತಿಯಿಂದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಲಾಯಿತು.
ಪತ್ರಿಕಾ ಗೋಷ್ಠಿ ಯಲ್ಲಿ ಶ್ರೀಧರ ಕಲಿವೀರ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಸದರಿ ಒಕ್ಕೂಟ, ಎಂ ಗೋವಿಂದರಾಜು, ರಾಜ್ಯ ಕಾರ್ಯಧ್ಯಕ್ಷರು ಸದರಿ ಒಕ್ಕೂಟ,ರಾಜಗೋಪಾಲ ಡಿ, ರಾಜ್ಯ ಕಾಯಾಧ್ಯಕ್ಷರು ಸದರಿ ಒಕ್ಕೂಟ ಮತ್ತು ಎ.ಗೋಪಾಲ,ರಾಜ್ಯ ಕಾರ್ಯದರ್ಶಿ ಸದರಿ ಒಕ್ಕೂಟ, ಉಪಸ್ಥಿತರಿದ್ದರು.
City Today News 9341997936

You must be logged in to post a comment.