*ಕಲಬುರಗಿಯಲ್ಲಿ ಫೆಬ್ರವರಿ 25ರಂದು ಕೋಲಿ ಸಮಾಜದ ಬೃಹತ್‌ ರಾಜ್ಯಮಟ್ಟದ ಸಮಾವೇಶ*

ಬೆಂಗಳೂರು:ಪಸ್ ಕ್ಲಬ್ ಸಭಾಂಗಣದಲ್ಲಿ ಕಲಬುರಗಿ ಕೋಲಿ ಸಮಾಜದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಹಾಗೂ ಸಮಾಜವನ್ನು ಸಂಘಟಿಸಲು ಫೆಬ್ರವರಿ 25ರಂದು ಕಲಬುರಗಿಯ ನೂತನ ವಿದ್ಯಾಲಯ (ಎನ್.ವಿ.) ಮೈದಾನದಲ್ಲಿ ಕೋಲಿ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ .ಇದರ ಕುರಿತು ಕೋಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು ಕೋಲಿ ಸಮುದಾಯದ ಸಾಯಿಬಣ್ಣ ಬೋರಬಂಡಾ, ಶರಣಪ್ಪ ನಾಟೀಕಾರ, ರಮೇಶ್ ಎನ್.ನಾಟೀಕಾರ, ಬಸವರಾಜ್ ಎಸ್ ಹರವಾಳ, ಸುನೀಲ್ ಭಾವಿಕಟ್ಟಿ, ಶಶಿಕಿರಣ, ಶರಣುಮಂದ್ರವಾಡ, ಚಂದ್ರಶೇಖ‌ರ್ ಭಂಕಲಗಿ, ಉದಯಕುಮಾ‌ರ್ ಕಮಕನೂರು ಉಪಸ್ಥಿತರಿದ್ದರು.

ಸುದ್ದಿಗೋಷ್ಠಿ ಉದ್ದೇಶಿಸಿ ಕೋಲಿ ಸಮಾಜದ ಮುಖಂಡರು, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಖಾತೆ ಸಚಿವರ ಎನ್.ಎಸ್.ಭೋಸರಾಜು, ಕನ್ನಡ ಮತ್ತು ಸಂಸ್ಕಂತಿ ಖಾತೆ ಸಚಿವ ಶಿವರಾಜ ತಂಗಡಗಿ, ಕಲಬುರಗಿ ಲೋಕಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ನಾಗೇಂದ್ರ. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ಸಿಂಗ್. ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ, ಶಾಸಕರಾದ ಎಂ.ವೈ.ಪಾಟೀಲ್ ಹಾಗೂ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಕೋಲಿ ಸಮಾಜದ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾವೇಶಕ್ಕೂ ಮುನ್ನ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಸಭೆಗಳನ್ನು ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಕಲಬುರಗಿ ನಗರದಲ್ಲಿ ಕೈಗೊಳ್ಳುವ ಪೂರ್ವಭಾವಿ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ 31 ಜಿಲ್ಲೆಗಳ ಕೋಲಿ ಸಮಾಜದ ಮುಖಂಡರು ಪಾಲ್ಗೊಂಡು ಸಮಾವೇಶದ ಯಶಸ್ಸಿಗಾಗಿ ತಮ್ಮ ಸಲಹೆಗಳನ್ನು ನೀಡಲಿದ್ದಾರೆ. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು. ಸಮಾಜಕ್ಕೆ ನ್ಯಾಯಯುತವಾಗಿ ಲಭಿಸಬೇಕಾಗಿರುವ ಎಲ್ಲ ಸೌವಲತ್ತುಗಳನ್ನು ಒದಗಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸುವುದು, ಕೋಲಿ ಸಮಾಜಕ್ಕೆ ಮೀನುಗಾರಿಕೆ ಉದ್ಯಮದಲ್ಲಿ ಶೇ.90ರಷ್ಟು ಮೀಸಲಾತಿ ನೀಡುವಂತೆ ತಾಕೀತು ಮಾಡುವುದು ಸಮಾವೇಶದ ಪ್ರಮುಖ ಆಶಯ ಆಗಿರಲಿದೆ ಎಂದು ನುಡಿದರು. ಮೂರು ದಶಕಗಳ ಪ್ರಮುಖ ಬೇಡಿಕೆಯಾಗಿರುವ ಹಿಂದುಳಿದ ಕೋಲಿ, ಕಬ್ಬಲಿಗ ಸಮುದಾಯ 38 ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಆಗ್ರಹಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯಲು ಜೊತೆಗೆ, ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ಕುರಿತು ಸಮಾವೇಶದಲ್ಲಿ ಒತ್ತಡ ಹೇರಲಾಗುವುದು. ಈಗಾಗಲೇ ರಾಜ್ಯದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಈ ಕುರಿತು ವ್ಯಾಪಕ ಚರ್ಚೆ ಸಹ ನಡೆದಿದೆ ಎಂದು ಕಮಕನೂರ ಪ್ರಸ್ತಾಪಿಸಿದರು. ಈ ಸಮಾವೇಶ ರಾಜಕೀಯ ಸಮಾವೇಶ ಅಲ್ಲ. ಇದೊಂದು ಸಮಾಜದ ಸಮಾವೇಶವಾಗಿದ್ದು, ಎಲ್ಲ ಪಕ್ಷಗಳ ನಮ್ಮ ಸಮಾಜದ ನಾಯಕರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

City Today News 9341997936