
ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ(ರಿ.466) ಇಲ್ಲಿ ನಡೆದಿರುವ ಕೆಲವು ಬ್ಯಾಂಕಿನ ವಹಿವಾಟುಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಈ ಕೆಳಕಂಡ ಕೆಲವು ಅಂಶಗಳನ್ನು ಕರ್ನಾಟಕ ಸರ್ಕಾರದ ಆದ್ಯ ಗಮನಕ್ಕೆ ತರಲು ಬಯಸುತ್ತೇನೆ.
1. ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ(ರಿ.466)ಯಲ್ಲಿ ಪ್ರಸ್ತುತ ಅಧ್ಯಕ್ಷರು ಹುದ್ದೆ, ಹಿರಿಯ ಉಪಾಧ್ಯಕ್ಷರ ಹುದ್ದೆ, ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ಖಜಾಂಚಿ ಹುದ್ದೆಗಳು ಪದಾಧಿಕಾರಿಗಳ ವಯೋನಿವೃತ್ತಿಯಿಂದ ಸುಮಾರು ಒಂದು ವರ್ಷದಿಂದ ಖಾಲಿಯಾಗಿರುತ್ತವೆ. ಸದರಿ ಹುದ್ದೆಗಳಿಗೆ ಉಪ ಚುನಾವಣೆ ಮೂಲಕ ಭರ್ತಿಮಾಡಲು ಮಾನ್ಯ ಸಹಕಾರ ಸಂಘಗಳ ಉಪ ನಿಬಂಧಕರು ಮತ್ತು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 4ನೇ ವಲಯ ಬೆಂಗಳೂರು ನಗರ ಜಿಲ್ಲೆ ರವರು ಸಹಕಾರ ಇಲಾಖೆಯ ಒಬ್ಬ ಅಧಿಕಾರಿ ಶ್ರೀ ಎನ್. ಚಂದ್ರ ಶೇಖರ್ ರವರನ್ನು ಚುನಾವಣೆಯ ರಿಟರ್ನಿಂಗ್ ಅಧಿಕಾರಿಯಾಗಿ ನೇಮಕ ಮಾಡಿ ಶ್ರೀ ರಾಜಕುಮಾರ.ಎಸ್. ಬೆವಿಕಂ ಉಪಾಧ್ಯಕ್ಷರು ರವರನ್ನು ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿಯ ಹುದ್ದೆಯಲ್ಲಿ ಕಲ್ಯಾಣ ಸಂಸ್ಥೆಯ ಖಾಲಿ ಇರುವ ಪದಾಧಿಕಾರಿಗಳ ಚುನಾವಣೆಯಾಗುವವರೆಗೆ ಕಾರ್ಯ ನಿರ್ವಹಿಸಲು ಅನುಮೋದನೆ ನೀಡಲಾಗಿರುತ್ತದೆ (ಅನುಬಂಧ-1).
2. ಅದರಂತೆ, ಮುಖ್ಯ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಕಾವೇರಿ ಭವನ ಶಾಖೆ, ಬೆಂಗಳೂರು-09ರವರು ಶ್ರೀ ರಾಜಕುಮಾರ.ಎಸ್. ರವರನ್ನು ದಿನಾಂಕ 10.06.2024ರಿಂದ ಕಲ್ಯಾಣ ಸಂಸ್ಥೆಯ ಬ್ಯಾಂಕಿನ ವಹಿವಾಟು ಮಾಡಲು ಅನುಮೋದನೆ ನೀಡಿರುತ್ತಾರೆ.
3. ಮುಂದುವರೆದಂತೆ, ಶ್ರೀಯುತ ಪಿ.ಆರ್.ಗವಿಕುಮಾರ್ ರವರು ಶ್ರೀ ರಾಜಕುಮಾರ.ಎಸ್. ಬೆವಿಕಂ ಉಪಾಧ್ಯಕ್ಷರು ರವರನ್ನು ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಆದೇಶಿಸಿರುವುದನ್ನು ಪ್ರಶ್ನಿಸಿ ದಾವೆ ಹೂಡಿರುತ್ತಾರೆ [ದಾವೆ ಸಂಖ್ಯೆ WP 16832/2024 (ಅನುಬಂಧ-2) ] ಈ ದಾವೆಯಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿರುತ್ತದೆ ಹಾಗೂ ಸದರಿ ದಾವೆಯ ಅಂತಿಮ ಆದೇಶವು ಬಾಕಿ ಇರುತ್ತದೆ. ಹೀಗಾಗಿ ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಬ್ಯಾಂಕಿನ ವಹಿವಾಟು ಮಾಡಲು ಯಾವುದೇ ಪದಾಧಿಕಾರಿಗಳಿಗೂ ಅಧಿಕಾರವಿರುವುದಿಲ್ಲ.
4. ಆದರೆ, ಶ್ರೀಯುತ ಮೋಹನ್ ಕುಮಾರ್‌ರವರು ಸ್ವಯಂ ಘೋಷಿತ ಅಧ್ಯಕ್ಷ ಎಂದು ಮತ್ತು ಶ್ರೀಯುತ ಪಿ.ಆರ್.ಗವಿಕುಮಾರ್ ರವರು ಸ್ವಯಂ ಘೋಷಿತ ಪ್ರಭಾರ ಪ್ರಧಾನ ಕಾರ್ಯದರ್ಶಿ ಎಂದು ದಿನಾಂಕ 27.06.2024ರಂದು ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಅಧಿಕಾರವನ್ನು ದುರ್ಬಳಸಿ ದಿನಾಂಕ 01.07.2024ರಂದು ಸಭೆ ಕರೆದಿರುತ್ತಾರೆ. ಸದರಿ ಸಭೆಯಲ್ಲಿ ಕಲ್ಯಾಣ ಸಂಸ್ಥೆಯ ಕೇವಲ 05 ಪದಾಧಿಕಾರಿಗಳು ಹಾಜರಿದ್ದು, ಅಂದರೆ, ಶ್ರೀಯುತ ಮೋಹನ್ ಕುಮಾರ್(ಸ್ವಯಂ ಘೋಷಿತ ಅಧ್ಯಕ್ಷ), ಶ್ರೀಯುತ ಪಿ.ಆರ್.ಗವಿಕುಮಾರ್(ಸ್ವಯಂ ಘೋಷಿತ ಪ್ರಭಾರ ಪ್ರಧಾನ ಕಾರ್ಯದರ್ಶಿ), ಶ್ರೀಯುತ ಮಂಜುನಾಥ್ (ಸೆಸ್ಕ್ ನ ಉಪಾಧ್ಯಕ್ಷರು), ಶ್ರೀಯುತ ಗುಂಜಿಕರ್ (ಹೆಸ್ಕಾಂನ ಉಪಾಧ್ಯಕ್ಷರು) ಮತ್ತು ಶ್ರೀಯುತ ಬಿ.ಆರ್. ಬುದ್ಧ (ಜೆಸ್ಕಾಂನ ಉಪಾಧ್ಯಕ್ಷರು) ಮಾತ್ರವೇ ಹಾಜರಿದ್ದು, ಕಲ್ಯಾಣ ಸಂಸ್ಥೆಯ ಬೈಲಾ ನಿಯಮ ಉಲ್ಲಂಘಿಸಿ ನಿರ್ಣಯ ತೆಗೆದುಕೊಂಡು ಸಭೆಯ ನಡವಳಿಯನ್ನು ಮಾಡಿರುತ್ತಾರೆ.
5. ದಿನಾಂಕ 01.07.2024 ರಂದು ನಡೆಸಿದ ಸಭೆಯ ನಡಾವಳಿಗಳು ಕಲ್ಯಾಣ ಸಂಸ್ಥೆಯ ಬೈಲಾ ನಿಯಮಗಳ ವಿರುದ್ದವಾಗಿರುತ್ತದೆ ಮತ್ತು ಸದರಿ ನಡಾವಳಿಗಳು ಊರ್ಜಿತವಾಗಿಲ್ಲವೆಂದು ತಿಳಿಸುತ್ತಾ, ಶ್ರೀ ಜಯರಾಮ್ ಸಂಘಟನ ಕಾರ್ಯದರ್ಶಿರವರನ್ನು ಖಜಾಂಚಿ ಎಂದು ಪರಿಗಣಿಸುವುದೂ ಸಹ ಬೈಲಾ ನಿಯಮ ವಿರುದ್ದವಾಗಿರುತ್ತದೆಂದು ದಿನಾಂಕ 16.07.2024 ರಂದು ಮಾನ್ಯ ಸಹಕಾರ ಸಂಘಗಳ ಉಪ ನಿಬಂಧಕರು ಮತ್ತು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 4ನೇ ವಲಯ ಬೆಂಗಳೂರು ನಗರ ಜಿಲ್ಲೆ ರವರು ಹಿಂಬರಹ ನೀಡಿರುತ್ತಾರೆ (ಅನುಬಂಧ-3).
6. ಆದರೂ ಸಹ, ಈ ಅನಧೀಕೃತ/ಕಾನೂನು ಬಾಹಿರ ಸಭೆಯ ನಡವಳಿಕೆಯಂತೆ ಶ್ರೀಯುತ ಜಯರಾಮ್, ಶ್ರೀಯುತ ಪಿ.ಆರ್.ಗವಿಕುಮಾರ್ ಮತ್ತು ಶ್ರೀಯುತ ಮೋಹನ್ ಕುಮಾರ್ ರವರು ಊರ್ಜಿತವಲ್ಲದ ದಾಖಲೆಗಳನ್ನು (ದಿನಾಂಕ 01.07.2024ರಂದು ಕಲ್ಯಾಣ ಸಂಸ್ಥೆಯ ಕೇವಲ 05 ಜನ ಪದಾಧಿಕಾರಿಗಳು ತೆಗೆದುಕೊಂಡಿರುವ ನಿರ್ಣಯದ ಪ್ರಕಾರ) ಪರಿಗಣಿಸಿ, ಸದರಿ ದಾಖಲೆಗಳ ಸತ್ಯಸತ್ಯತೆಯನ್ನು ತಿಳಿಯಲು ಪ್ರಯತ್ನಿಸದೇ ಶ್ರೀ ರಮಾನಾಯ್ಡು, ಮುಖ್ಯ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಕಾವೇರಿ ಭವನ ಶಾಖೆ, ಬೆಂಗಳೂರು-09ರವರು ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ(ರಿ.466)ಯ ಬ್ಯಾಂಕಿನ ಖಾತೆಗಳಲ್ಲಿ ಆರ್ಥಿಕ ವಹಿವಾಟುಗಳನ್ನು ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ (ಅನುಬಂಧ-4 ಬ್ಯಾಂಕ್ ಖಾತೆಗಳ ವಿವರಣ ಪಟ್ಟಿ).
7. ಆದೂದರಿಂದ, ಊರ್ಜಿತವಲ್ಲದ ಪದಾಧಿಕಾರಿಗಳು ಸಲ್ಲಿಸಿರುವ ಚೆಕ್‌ನ್ನು ಪರಿಗಣಿಸಿ, ಕಾನೂನು ಬಾಹಿರವಾಗಿ ಮಾಡಿರುವ ಬ್ಯಾಂಕಿನ ವಹಿವಾಟಿನಿಂದ ಆಗಿರುವ ಆರ್ಥಿಕ ಅವ್ಯವಹಾರಕ್ಕೆ ಸಹಕರಿಸಿರುವ ಕಾವೇರಿಭವನ ಶಾಖೆಯ ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ
ಶ್ರೀ ರಮಾನಾಯ್ಡುರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತಾ ಹಾಗೂ ಸೂಕ್ತ ನಿರ್ದೇಶನ ನೀಡಿ ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ (ರಿ.466)ಯ ಸುಮಾರು 10,000 ಸಾವಿರ ಜನ ಸದಸ್ಯರಿಗೆ ನ್ಯಾಯ ಒದಗಿಸಬೇಕೆಂದು ವಲಯ ವ್ಯವಸ್ಥಾಪಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಆಡಳಿತ ಶಾಖೆ), ಆರ್.ಬಿ.ಓ-5, ಕೆ.ಜಿ.ರಸ್ತೆ, ಬೆಂಗಳೂರು ರವರಲ್ಲಿ ಸುಮಾರು ಸಾರಿ ಮೌಖಿಕವಾಗಿ ಹಾಗೂ ಪತ್ರದ ಮುಖೇನ ಕೋರಲಾಗಿರುತ್ತದೆ (ಅನುಬಂಧ-5) ಆದರೆ ಈ ವಿಷಯ ಕುರಿತು ಭಾರತೀಯ ಸ್ಟೇಟ್ ಬ್ಯಾಂಕಿನ ಉನ್ನತಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
8. ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ(ರಿ.466)ಯಲ್ಲಿ ಖಾಲಿಯಿರುವ ಅಧ್ಯಕ್ಷರು ಹುದ್ದೆ, ಹಿರಿಯ ಉಪಾಧ್ಯಕ್ಷರ ಹುದ್ದೆ, ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ಖಜಾಂಚಿ ಹುದ್ದೆಗಳ ಪದಾಧಿಕಾರಿಗಳನ್ನು ಉಪ ಚುನಾವಣೆ ಮೂಲಕ ಭರ್ತಿ ಮಾಡಲು ಶ್ರೀ ಎನ್. ಚಂದ್ರಶೇಖರ್ ಚುನಾವಣೆಯ ರಿಟರ್ನಿಂಗ್ ಅಧಿಕಾರಿಯವರು ಅಧಿಸೂಚನೆಯನ್ನು ಹೊರಡಿಸಿರುತ್ತಾರೆ (ಅನುಬಂಧ-6).
9. ಉಪ ಚುನಾವಣೆಯ ಅಧಿಸೂಚನೆಯನ್ನು ಪ್ರಶ್ನಿಸಿ, ಶ್ರೀಯುತ ಮೋಹನ್ ಕುಮಾರ್, ಸ್ವಯಂ ಘೋಷಿತ ಅಧ್ಯಕ್ಷರು ಕವಿಮಂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಕೇಂದ್ರ ಕಾರ್ಯನಿರ್ವಾಹಕ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಕುರಿತು ಬೆಂಗಳೂರಿನ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ (ದಾವೆ ಸಂಖ್ಯೆ WP 20689/2024) ಹೂಡಿರುತ್ತಾರೆ. ಈ ದಾವೆಯಲ್ಲಿ ಮಾನ್ಯ ಉಚ್ಛ ನ್ಯಾಯಾಲಯವು ದಿನಾಂಕ 23.08.2024 ರಂದು “the petitioner shall not take any major policy decision” ಎಂದು ಮಧ್ಯಾಂತರ ಆದೇಶ ಹೊರಡಿಸಿರುತ್ತದೆ ಮತ್ತು ದಿನಾಂಕ 09.09.2024ರಂದು “The petitioner is permitted to operate the Bank Accounts only for the purpose of payment of salary and statutory payments. Howeveŗ the petitioner is restrained from utilizing the funds for any other purposes” ಎಂದು ಮಧ್ಯಾಂತರ ಆದೇಶ ಹೊರಡಿಸಿರುತ್ತದೆ (ಅನುಬಂಧ-7).
10. ಸದರಿ ಮಾನ್ಯ ಉಚ್ಛನ್ಯಾಯಾಲಯದ ಮಧ್ಯಾಂತರ ಆದೇಶಗಳನ್ನು ಉಲ್ಲಂಘಿಸಿ, ಶ್ರೀಯುತ ಮೋಹನ್ ಕುಮಾರ್ ಸ್ವಯಂ ಘೋಷಿತ ಅಧ್ಯಕ್ಷರು ಮತ್ತು ಶ್ರೀಯುತ ಪಿ.ಆರ್.ಗವಿಕುಮಾರ್ ಸ್ವಯಂ ಘೋಷಿತ ಪ್ರಧಾನ ಕಾರ್ಯದರ್ಶಿರವರು ಮತ್ತು ಶ್ರೀ ಜಯರಾಮ್, ಸಂಘಟನಾ ಕಾರ್ಯದರ್ಶಿ/ಸ್ವಯಂ ಘೋಷಿತ ಖಜಾಂಚಿರವರು ಸದರಿ ಮಾನ್ಯ ಉಚ್ಛನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕಲ್ಯಾಣ ಸಂಸ್ಥೆಯ ಖಾತೆಗಳಿಂದ ಬ್ಯಾಂಕಿನಲ್ಲಿ ಆರ್ಥಿಕ ಅವ್ಯವಹಾರಗಳು ಅಂದರೆ, Self Cheque ಮುಖಾಂತರ ಸುಮಾರು 5.00 ಲಕ್ಷಗಳ ಮೇಲ್ಪಟ್ಟು Cash withdraw ಮಾಡಿಕೊಳ್ಳುತ್ತಿರುವುದು, Jewellary ಅಂಗಡಿಗಳಿಗೆ ಮತ್ತು ಇನ್ನಿತರ ಬೇರೆ ವ್ಯಕ್ತಿಗಳ ಹೆಸರಿನಲ್ಲಿ Cheque ಗಳ ಮುಖಾಂತರ ಹಣ ಪಾವತಿಸುತ್ತಿರುವುದು only for the purpose of payment of salary and statutory payments ಗಳ ವಿರುದ್ಧವಾಗಿದ್ದು ಕಾನೂನು ಬಾಹಿರವಾಗಿರುತ್ತದೆ (ಅನುಬಂಧ-4 ಬ್ಯಾಂಕ್ ಖಾತೆಗಳ ವಿವರಣ ಪಟ್ಟಿ).
11. ಸದರಿ ಬ್ಯಾಂಕಿನ ಅವ್ಯವಹಾರ ಮಾಡಲು ಶ್ರೀ ರಮಾನಾಯ್ಡು, ಮುಖ್ಯ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಕಾವೇರಿ ಭವನ ಶಾಖೆ, ಕಾವೇರಿ ಭವನ, ಬೆಂಗಳೂರು-09 ರವರೂ ಸಹ ಮಾನ್ಯ ಉಚ್ಛನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಶ್ರೀಯುತ ಮೋಹನ್ ಕುಮಾರ್ ರವರ ಜೊತೆಗೆ ಶಾಮಿಲ್ ಆಗಿ ಸಹಕರಿಸಿರುತ್ತಾರೆ. ಇದರಿಂದ, ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ(ರಿ.466)ಯ ಸದಸ್ಯರೆಲ್ಲರಿಗೂ ಅನ್ಯಾಯವಾಗುತ್ತಿರುತ್ತದೆ.
12. ಕವಿಕಂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಸದಸ್ಯರುಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಮೈಸೂರಿನ ಹೂಟಗಳ್ಳಿ ಗ್ರಾಮದಲ್ಲಿ ಸುಮಾರು 180 X 200 ಅಡಿಗಳ ಜಾಗವನ್ನು ಮಂಜೂರು ಮಾಡಿರುತ್ತದೆ. ಸದರಿ ಜಾಗದಲ್ಲಿ ಕಲ್ಯಾಣ ಸಂಸ್ಥೆಯ ಹಿಂದಿನ ಪದಾಧಿಕಾರಿಗಳು ಸಂಬಂಧಪಟ್ಟ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ದಿಂದ ಪರವಾನಿಗೆ ಪಡೆಯದೇನೆ ಸುಮಾರು 17 ಕೋಟಿ ವೆಚ್ಚದ ಸಮುಧಾಯ ಭವನ ನಿರ್ಮಾಣ ಮಾಡುತ್ತಿದ್ದು ಈಗಾಗಲೇ ಸುಮಾರು 08 ಕೋಟಿಯಷ್ಟು ಹಣ ಖರ್ಚುಮಾಡಿರುತ್ತಾರೆ ಸದರಿ ವಿಷಯ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ದಿಂದ ಸದರಿ ನಿರ್ಮಾಣ ಮಾಡುತ್ತಿರುವ ಸಮೂದಾಯ ಭವನದ ಕಟ್ಟಡವನ್ನು ಸ್ಥಗಿತಗೊಳಿಸಲು ಸೂಚನೆ ನೀಡಿರುವುದನ್ನು ಗಮನಕ್ಕೆ ಬಂದಿರುತ್ತದೆ. ಈ ವಿಷಯ ಕುರಿತು ಮುಂದಿನ ದಿನಗಳಲ್ಲಿ ಕಲ್ಯಾಣ ಸಂಸ್ಥೆಯ ಸದಸ್ಯರುಗಳಿಗೆ ಅನ್ಯಾಯವಾಗಿದ್ದರೆ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಮಕೈಗೊಂಡಿರುವ ಹಿಂದಿನ ಪದಾಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ.
ಮೇಲೆ ತಿಳಿಸಿರುವ ಎಲ್ಲಾ ಅವ್ಯವಹಾರಗಳನ್ನು ಕರ್ನಾಟಕ ಸರ್ಕಾರದ ಗಮನವನ್ನು ಸೆಳೆಯುತ್ತಾ ಕೂಡಲೇ ಈ ಕೆಳಕಂಡ ಕ್ರಮಗಳನ್ನು ಜರುಗಿಸಿ ಕಲ್ಯಾಣ ಸಂಸ್ಥೆಯ ಸದಸ್ಯರುಗಳಿಗೆ ನ್ಯಾಯ ಒದಗಿಸಬೇಕೆಂದು ಮಾನ್ಯ ಕರ್ನಾಟಕ ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ.
1. ಮೇಲಿನ ಎಲ್ಲಾ ಅವ್ಯವಹಾರಗಳನ್ನು ತಡೆಯಿಡಿಯಲು ಹಾಗೂ ಕಲ್ಯಾಣ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಲು ಮಾನ್ಯ ಉಚ್ಚ ನ್ಯಾಯಾಲಯದಿಂದ ಮೇಲೆ ತಿಳಿಸಿರುವ ದಾವೆಗಳಲ್ಲಿ ಅಂತಿಮ ಆದೇಶ ಹೊರಡಿಸುವವರೆಗೆ ಸರ್ಕಾರದಿಂದ ಒಬ್ಬ ವಿಶೇಷ ಅಧಿಕಾರಿ/ ಆಡಳಿತಾಧಿಕಾರಿಯನ್ನು ಕೂಡಲೇ ನೇಮಕ ಮಾಡಲು ಕೋರಲಾಗಿದೆ.
2. ಮೇಲಿನ ಎಲ್ಲಾ ಅವ್ಯವಹಾರಗಳನ್ನು ವಿಶೇಷ ತನಿಖೆ ಮಾಡಲು ಕೂಡಲೇ ಸರ್ಕಾರದಿಂದ ಒಬ್ಬ ವಿಶೇಷ ಅಧಿಕಾರಿಯನ್ನು ನೇಮಕ ಮಾಡಲು ಕೋರಲಾಗಿದೆ.
3. ಮೇಲೆ ತಿಳಿಸಿರುವ ಬ್ಯಾಂಕಿನ ಎಲ್ಲಾ ಅವ್ಯವಹಾರಗಳನ್ನು ಮಾಡಲು ಸಹಕರಿಸಿರುವ
ಶ್ರೀ ರಮಾನಾಯ್ಡು, ಮುಖ್ಯ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಕಾವೇರಿ ಭವನ ಶಾಖೆ, ಕಾವೇರಿ ಭವನ, ಬೆಂಗಳೂರು-09 ರವರ ಮೇಲೆ ತನಿಖೆ ನಡೆಸಿ ಶಿಸ್ತಿನ ಕ್ರಮ ಜರುಗಿಸಬೇಕೆಂದು ಕೋರಲಾಗಿದೆ.
ಮೇಲೆ ತಿಳಿಸಲಾದ ವಿಷಯಗಳನ್ನು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮುನಿರಾಜು (ನಿ),ಸಹ ಕಾರ್ಯದರ್ಶಿ, ಕ. ವಿ. ಮಂ.sc/st ಕಲ್ಯಾಣ ಸಂಸ್ಥೆ, ಕೇಂದ್ರ ಸಮಿತಿ, ಬೆಂಗಳೂರು ರವರು ತಿಳಿಸಿದರು.
City Today News 9341997936

You must be logged in to post a comment.