ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೆ ಎಸ್ ಆರ್ ಟಿ ಸಿ ಆರೋಗ್ಯ ಯೋಜನೆಯು ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರಾದ ಶ್ರೀರಾಮಲಿಂಗ ರೆಡ್ಡಿ, ಶ್ರೀ ವಿ ಅನ್ಬು ಕುಮಾರ್ ಐಎಎಸ್ ಕೆ ಎಸ್ ಆರ್ ಟಿ ಸಿ ಯ ಮ್ಯಾನೇಜಿಂಗ್ ಡೈರೆಕ್ಟರ್ ರವರಿಂದ ಅಧಿಕೃತವಾಗಿ ಚಾಲನೆ

ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ
ಕೆ ಎಸ್ ಆರ್ ಟಿ ಸಿ ಆರೋಗ್ಯ ಯೋಜನೆಯು ಇಂದು ದಿನಾಂಕ 6 ಜನವರಿ 2025 ರಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರಾದ ಶ್ರೀರಾಮಲಿಂಗ ರೆಡ್ಡಿ, ಶ್ರೀ ವಿ ಅನ್ಬು ಕುಮಾರ್ ಐಎಎಸ್
ಕೆ ಎಸ್ ಆರ್ ಟಿ ಸಿ ಯ ಮ್ಯಾನೇಜಿಂಗ್ ಡೈರೆಕ್ಟರ್ ರವರು ಅಧಿಕೃತವಾಗಿ ಚಾಲನೆ ನೀಡಿದರು

ಇದು ಕೆ ಎಸ್ ಆರ್ ಟಿ ಸಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯಾಗಿದೆ.
ಪ್ರಸ್ತುತವಾಗಿ ಕೆ ಎಸ್ ಆರ್ ಟಿ ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 33,000 ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಮತ್ತು ಅವರ ಅವಲಂಬಿತರಿಗೆ ಈ ಸೌಲಭ್ಯವು ದೊರೆಯಲಿದ್ದು.

ಇದರ ಅಂಗವಾಗಿ ರಾಜ್ಯದ್ಯಂತ 220ಕ್ಕೂ ಹೆಚ್ಚು ಪ್ರಮುಖ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ ಇದರ ಅಂಗವಾಗಿ ಇಂದು ವಿಧಾನಸೌಧದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ರವರು ಚಾಲನೆ ನೀಡಿದರು
ವಾಸನ್ ಕಣ್ಣಿನ ಆಸ್ಪತ್ರೆಯು ಕರ್ನಾಟಕದ್ಯಂತ 17 ಶಾಖೆಗಳನ್ನು ಹೊಂದಿದ್ದು ಬೆಂಗಳೂರಿನಲ್ಲಿ ಒಂಬತ್ತು ಶಾಖೆ ಮತ್ತು ಬೆಂಗಳೂರಿನ ಹೊರತುಪಡಿಸಿ ಒಂಬತ್ತು ಶಾಖೆಗಳು ಪ್ರಸ್ತುತದಲ್ಲಿ ಕಾರ್ಯನಿರ್ವಹಿಸುತ್ತಿದೆ ಕೆ ಎಸ್ ಆರ್ ಟಿ ಸಿ ಯ ಆರೋಗ್ಯ ಯೋಜನೆಯು ನಮ್ಮ ಕರ್ನಾಟಕದ ಅತ್ಯಂತ ಕಾರ್ಯನಿರ್ವಹಿಸುತ್ತಿರುವ ವಾಸನ್ ಕಣ್ಣಿನ ಆಸ್ಪತ್ರೆಯಲ್ಲಿ ಈ ನಗದು ರಹಿತ ಸೌಲಭ್ಯವು ಲಭ್ಯವಿದೆ.

City Today News 9341997936