ಕೆ ಎಸ್ ಆರ್ ಟಿ ಸಿ ಗೆ Arogya World Healthy Work Place-2023 ಪ್ರಶಸ್ತಿ

ದಿನಾಂಕ:08.12.2023 ಹೋಟೆಲ್‌ ಲಲಿತ್ ಅಶೋಕ್, ಬೆಂಗಳೂರು
Arogya World India Trust ಸ್ಥಾಪಿಸಿರುವ Healthy work place ಪ್ರಶಸ್ತಿಯು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅನುಷ್ಠಾನಗೊಳಿಸಿರುವ ಅತ್ಯುತ್ತಮ ಕಾರ್ಮಿಕ ಕಲ್ಯಾಣ ಉಪಕ್ರಮಕ್ಕಾಗಿ ಲಭಿಸಿರುತ್ತದೆ.

Arogya World India Trust ಸಂಸ್ಥೆಯು 2022ನೇ ಸಾಲಿನ ಪ್ರತಿಷ್ಠಿತ ಸಂಯುಕ್ತ ರಾಷ್ಟ್ರಗಳ ಪ್ರಶಸ್ತಿಯನ್ನು (UN Award) ಪಡೆದಿದ್ದು, ಒಂದು ರಾಷ್ಟ್ರೀಯ ಮಟ್ಟದ ಲಾಭ ರಹಿತ ಆರೋಗ್ಯ ಸಂಸ್ಥೆಯಾಗಿದೆ. ಇದು ಸಾರ್ವಜನಿಕರಿಗೆ ಆರೋಗ್ಯ ಹಾಗೂ ಜೀವನ ಶೈಲಿ ಬದಲಾವಣೆ ಬಗ್ಗೆ ಅರಿವು ಮೂಡಿಸುತ್ತಿದ್ದು, ಆರೋಗ್ಯಕರ ಜೀವನವನ್ನು ನಡೆಸಲು ಹಾಗೂ ಸಾಂಕ್ರಾಮಿಕ ರೋಗವನ್ನು ಹರಡದಂತೆ ತಡೆಯುವಲ್ಲಿ ಪರಿಣಾಮಕಾರಿಯಾಗಿ ಶ್ರಮಿಸುತ್ತಿದೆ.

Arogya World India Trust ಸ್ಥಾಪಿಸಿರುವ ಪ್ರಶಸ್ತಿಯು ನಿಗಮಕ್ಕೆ ಲಭಿಸಿರುವುದು, ನಿಗಮವು ತನ್ನ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಅನುಷ್ಠಾನಗೊಳಿಸಿರುವ ಪರಿಣಾಮಕಾರಿ ಕ್ರಮಗಳು ಹಾಗೂ ಅವರಿಗಾಗಿ ನೀಡುವ ಪ್ರಾಮುಖ್ಯತೆಗಾಗಿ ಸಾಕ್ಷಿಯಾಗಿದೆ.

ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವರು Arogya World India Trust ಸ್ಥಾಪಿಸಿರುವ Healthy Work Place 2023 ರ ಪ್ರಶಸ್ತಿಯನ್ನು ಶ್ರೀಮತಿ ಶ್ರಬಾಣಿ ಬ್ಯಾನರ್ಜಿ, India Head, Arogya World ಹಾಗೂ ಡಾ. ಸುಶೀಲಾ Board Member, Arogya World ರವರು ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿರುವ ಉಪಕ್ರಮಗಳಿಗಾಗಿ ಕೆ ಎಸ್ ಆರ್ ಟಿ ಸಿ ಗೆ ಪ್ರದಾನ ಮಾಡಿದರು. ಶ್ರೀ ಜಗದೀಶ್‌ ಕುಮಾರ್‌ ಪ್ರಾಂಶುಪಾಲರು, ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ ಹಾಗೂ ಶ್ರೀ ಚಂದ್ರಶೇಖರ್‌ ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು ವಿಭಾಗ ಕೆ.ಎಸ್. ಆರ್.ಟಿ.ಸಿ ರವರು ನಿಗಮದ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

City Today News 9341997936