ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಪುಸ್ತಕ
ಸ್ಕಾಲರ್‌ಶಿಪ್ ಅಪ್ಟಿಟ್ಯೂಡ್ ಟೆಸ್ಟ್ ದಿನಾಂಕ ಪ್ರಕಟ

ಬೆಂಗಳೂರು: ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಉದ್ದೇಶದಿಂದ ಬಾಲ್ಕ್ (BALC) ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆ ಮಹತ್ವದ ಕಾರ್ಯಕ್ರಮವನ್ನು ಘೋಷಿಸಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ನಂತರ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಬೇಕು? ಭವಿಷ್ಯದಲ್ಲಿ ಯಾವ ವೃತ್ತಿ ಮಾರ್ಗ ಹಿಡಿಯಬೇಕು? ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸ್ಪಷ್ಟ ದಿಕ್ಕು ತೋರಿಸುವ ಪ್ರಯತ್ನವಾಗಿ ‘ವೃತ್ತಿ ಮಾರ್ಗದರ್ಶನ’ ಪುಸ್ತಕವನ್ನು ಉಚಿತವಾಗಿ ವಿತರಿಸಲು ಮುಂದಾಗಿದೆ.
ಸಂಸ್ಥೆ ವಿಶೇಷವಾಗಿ ಸಿದ್ಧಪಡಿಸಿರುವ ಸುಮಾರು 25,000 ಪ್ರತಿಗಳ ಈ ಪುಸ್ತಕದಲ್ಲಿ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಲಭ್ಯವಿರುವ ವಿವಿಧ ನವೀನ ಕೋರ್ಸ್‌ಗಳು, ಭವಿಷ್ಯದ ಉದ್ಯೋಗಾವಕಾಶಗಳು, ಕೌಶಲ್ಯಾಧಾರಿತ ವೃತ್ತಿ ಆಯ್ಕೆಗಳು ಹಾಗೂ ಯಶಸ್ವಿ ವೃತ್ತಿಜೀವನ ರೂಪಿಸುವ ಮಾರ್ಗಗಳನ್ನು ಸವಿವರವಾಗಿ ವಿವರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಗುರಿಗಳನ್ನು ಮನಗಂಡು ಸರಿಯಾದ ನಿರ್ಧಾರ ಕೈಗೊಳ್ಳಲು ಈ ಪುಸ್ತಕ ಸಹಾಯಕವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ (Student ID Card) ಪ್ರದರ್ಶಿಸಿ, ಬಾಲ್ಕ್‌ನ ವಿವಿಧ ಶಾಖೆಗಳಲ್ಲಿ ಉಚಿತವಾಗಿ ಪುಸ್ತಕವನ್ನು ಪಡೆಯಬಹುದು.
ಬೆಂಗಳೂರು ಶಾಖೆಗಳು: ಸುಂಕದಕಟ್ಟೆ, ರಾಜಾಜಿನಗರ, ಮಲ್ಲೇಶ್ವರಂ, ಬಸವನಗುಡಿ, ಜಯನಗರ, ಟೋಲ್ ಗೇಟ್, ಉಲ್ಲಾಳ ರಸ್ತೆ, ಕೆಂಗೇರಿ ಉಪನಗರ, ಕೋಣನಕುಂಟೆ ಕ್ರಾಸ್, ಕೇಂಬ್ರಿಡ್ಜ್ ಲೇಔಟ್, ನೆಲಮಂಗಲ, ಯಲಹಂಕ, ದೇವನಹಳ್ಳಿ.
ಇತರೆ ಶಾಖೆಗಳು: ಹುಣಸೂರು, ಚನ್ನರಾಯಪಟ್ಟಣ, ರತ್ನಪುರಿ.
ಇದೇ ವೇಳೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಉತ್ತೇಜಿಸಲು ‘ಸ್ಕಾಲರ್‌ಶಿಪ್ ಅಪ್ಟಿಟ್ಯೂಡ್ ಟೆಸ್ಟ್’ (SAT) ಪರೀಕ್ಷೆಯ ದಿನಾಂಕವನ್ನೂ ಪ್ರಕಟಿಸಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾರ್ಚ್ 22, 2026 ರಂದು ನಡೆಯಲಿದೆ.
ಪರೀಕ್ಷೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಅನುಕೂಲದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಬರೆಯಬಹುದು. ಪರೀಕ್ಷೆಯ ಫಲಿತಾಂಶ ಅದೇ ದಿನ ಸಂಜೆ ಪ್ರಕಟಿಸಲಾಗುವುದು. ಅರ್ಹ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಳಲ್ಲಿ ಬಳಸಿಕೊಳ್ಳಲು ಅವಕಾಶ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ: 88844 98884
ಜಾಲತಾಣ: http://www.balcdigiskill.com
City Today News 9341997936

You must be logged in to post a comment.