ಕ್ರೈಸ್ತ ಸಮುದಾಯಕ್ಕೆ ನೀಡುವ ಅನುದಾನದಲ್ಲಿ ಆಗುತ್ತಿರುವ ವಂಚನೆ

ರಾಜ್ಯ ಸರ್ಕಾರವು ಕ್ರೈಸ್ತ ಸಮುದಾಯಕ್ಕೆ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ಚರ್ಚ್ ಮತ್ತು ಇನ್ನಿತರ ಕಾರ್ಯಗಳಲ್ಲಿ ಸರಿಯಾಗಿ ಬಳಕೆಯಾಗುತ್ತಿಲ್ಲ . ಅಲ್ಪಸಂಖ್ಯಾತ ಇಲಾಖೆಯಲ್ಲಿ ಮಧ್ಯವರ್ತಿಗಳ ( ದಲ್ಲಾಳಿಗಳ ) ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಚರ್ಚ್‌ಗಳ ವಿಷಯದಲ್ಲಿ ನ್ಯಾಯವಾಗಿ ಸಿಗಬೇಕಾದ ಅನುದಾನ ಸಿಗುತ್ತಿಲ್ಲ . ಕಾರಣ ಇಲ್ಲಿ ಪರ್ಸೆಟಿಜ್ ರೂಪದಲ್ಲಿ ಮಧ್ಯವರ್ತಿಗಳು ತುಂಬಾ ಮೋಸ ಮಾಡುತ್ತಿದ್ದು , ಈಗಾಗಲೇ ಕೆಲವರ ಮೇಲೆ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳಲಾಗಿದೆ . ಇಂತಹವರ ಮೇಲೆ ನಿಗಾ ಇಡಬೇಕು ಮತ್ತು ಇದರ ಜೊತೆಗೆ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ಇವರ ಜೊತೆಗೆ ಶಾಮಿಲಾಗಿ ಕೈ ಜೋಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದದ್ದು , ಇವರ ವಿರುದ್ಧವಾಗಿ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ಆಗ್ರಹಿಸುತ್ತೇವೆ . ಮತ್ತು ಕೂಡಲೇ ಇವರನ್ನು ವೃತ್ತಿಯಿಂದ ವಜಾಗೊಳಿಸಬೇಕು . ಹಾಗೂ ಇಂತಹ ಪರಿಸ್ಥಿತಿಯನ್ನು ಸರಿಮಾಡಬೇಕಾದರೆ ಪ್ರತಿ ಜಿಲ್ಲೆಯಲ್ಲಿಯೂ ಸಿಡಿಸಿ ಸದಸ್ಯರನ್ನು ಶೀಘ್ರವಾಗಿ ನೇಮಿಸಬೇಕು . ಹಾಗೂ ಕ್ರೈಸ್ತರ ಅಭಿವೃದ್ಧಿ ನಿಗಮ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ .
– ಪ್ರಜ್ವಲ್ ಸ್ವಾಮಿ
ಸಂಸ್ಥಾಪಕ ಅಧ್ಯಕ್ಷರು
ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ನವ್ಯ ರಮೇಶ್, ಶಾಂತಕುಮಾರ್, ದೇವರಾಜ್, ಬೆಂಜಮಿನ್ ಮೆಂಡಿಸ್ ಮತ್ತು ಜಯ ಸೂರ್ಯ ಉಪಸ್ತಿತರಿದ್ದರು
City Today News
9341997936

You must be logged in to post a comment.