ಗಣೇಶ ಚತುರ್ಥಿ ಅಂಗವಾಗಿ ನವಶಕ್ತಿ ಪೀಠದಲ್ಲಿ ಭವ್ಯ ಸನ್ಮಾನ-ಅಹಿಂದ, ಸೂಫಿ ಸಂಘಟನೆಗಳ ನಾಯಕರು ಒಟ್ಟಾಗಿ ಸಲ್ಲಿಸಿದ ಗೌರವ.

ಗಣೇಶ ಚತುರ್ಥಿ ಅಂಗವಾಗಿ ನವಶಕ್ತಿ ಪೀಠದಲ್ಲಿ ಸನ್ಮಾನ ಕಾರ್ಯಕ್ರಮ

ಬೆಂಗಳೂರು, ಬನಶಂಕರಿ:
ಗಣೇಶ ಚತುರ್ಥಿ ಪ್ರಯುಕ್ತ ನವಶಕ್ತಿ ಪೀಠದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಡಾ. ಶ್ರೀ ಶ್ರೀ ಬಾಗವಾನ್ ವಿಷ್ಣು ದತ್ತ ನವಶಕ್ತಿ ಪೀಠಂ (ರಿ) ಮುಖ್ಯ ಪೀಠಾಧಿಪತಿಗಳನ್ನು ಗೌರವಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು, ಮಾಹಿತಿ ಹಕ್ಕು ಮತ್ತು ಮಾನವ ಹಕ್ಕುಗಳ ಇಲಾಖೆಯ ಉಪಾಧ್ಯಕ್ಷ ಡಾ. ಯೂನಸ್ ಜೋನ್ಸ್, ಖ್ಯಾತ ನಟ, ಸಾಹಸ ನಿರ್ದೇಶಕ,ನಿರ್ಮಾಪಕ ಹಾಗೂ ಅಹಿಂದ ಸಂಚಾಲಕರು ಮತ್ತು ಅಧ್ಯಕ್ಷ ಸೂಫಿ ವಲಿಬಾ ಖಾದ್ರಿ,ಕರ್ನಾಟಕ ರಾಜ್ಯ ಹಾಗೂ ಕರ್ನಾಟಕ ಸೂಫಿ ಸಂತರ ಸಂಸ್ಥೆ (ರಿ) ಭಾಗವಹಿಸಿ ಒಟ್ಟಾಗಿ ಪೀಠಾಧಿಪತಿಗಳಿಗೆ ಗೌರವ ಸಲ್ಲಿಸಿ ಸನ್ಮಾನಿಸಿದರು.

City Today News 9341997936