ಮಂತ್ರಾಲಯ ಶ್ರೀಗಳಿಂದ “ತಪ್ತ ಮುದ್ರಾ ಧಾರಣೆ”- 17-7-2024

ಮಂತ್ರಾಲಯ ಶ್ರೀಗಳಿಂದ “ತಪ್ತ ಮುದ್ರಾ ಧಾರಣೆ” 17-7-2024
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಷಾಢ ಶುದ್ಧ ಪ್ರಥಮ “ಏಕಾದಶಿ” ಪ್ರಯುಕ್ತ  17-7-2024 ಬುಧವಾರದಂದು ಜಗದ್ಗುರು ಶ್ರೀಮನ್ ಮದ್ವಾಚಾರ್ಯಮೂಲ ಮಹಾಸಂಸ್ಥಾನದೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿ ಗಳಾದ ಪರಮ ಪೂಜ್ಯ 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮನ್ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ,ಶ್ರೀ ಸುದರ್ಶನ ಹೋಮದೊಂದಿಗೆ ತಾವು ತಪ್ತ ಮುದ್ರ ಧಾರಣೆಯನ್ನು ಸ್ವೀಕರಿಸಿ ತದನಂತರ ಶ್ರೀಮಠದ ಶಿಷ್ಯರಿಗೆ ಬೆಳಗ್ಗೆ 7:30 ರಿಂದ ರಾತ್ರಿ 9:30 ವರೆಗೆ ನಿರಂತರವಾಗಿ ತಪ್ತ ಮುದ್ರ ಧಾರಣೆಯನ್ನು ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರಿಂದ ಉಪನ್ಯಾಸ ಮಾಲಿಕೆಯು ನೆರವೇರಲಿದೆ, ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

City Today News 9341997936