
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ನೀಡುತ್ತಿರುವ ‘ ಗೊರುಚ ಶರಣ ಪ್ರಶಸ್ತಿ ‘ ಮತ್ತು ‘ ಗೊರುಚ ಜಾನಪದ ಪ್ರಶಸ್ತಿ ‘ ಪ್ರದಾನ ಸಮಾರಂಭ ಇದೇ ದಿನಾಂಕ 18.5.2022 ರ ಬುಧವಾರದಂದು ಚಿತ್ರದುರ್ಗದ ತ.ರಾ.ಸು. ರಂಗಮಂದಿರ , ಮದಕರಿ ನಾಯಕ ವೃತ್ತದಲ್ಲಿ ಬೆಳಗ್ಗೆ 11.00 ಕ್ಕೆ ನಡೆಯುತ್ತದೆ .

ಚಿತ್ರದುರ್ಗದ ಜಗದ್ಗುರು ಪೂಜ್ಯ ಡಾ . ಶ್ರೀ ಶಿವಮೂರ್ತಿ ಮುರುಘಾ ಶರಣರ ಮಹಾಸ್ವಾಮಿಗಳ ನೇತೃತ್ವದಲ್ಲಿ , ಚಿತ್ರದುರ್ಗದ ಶಾಸಕರಾದ ಶ್ರೀ ತಿಪ್ಪಾರೆಡ್ಡಿ ಅವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಎಸ್ . ಮನ್ನಿಕೇರಿ , ಭಾ.ಆ.ಸೇ. ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ . ಪರಿಷತ್ತಿನ ಅಧ್ಯಕ್ಷರಾದ ಪ್ರೊ . ಮಲೆಯೂರು ಗುರುಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ . ದತ್ತಿ ದಾನಿಗಳೂ , ಪರಿಷತ್ತಿನ ಗೌರವ ಸಲಹೆಗಾರರಾದ ನಾಡೋಜ ಡಾ . ಗೊ.ರು. ಚನ್ನಬಸಪ್ಪರವರು ಉಪಸ್ಥಿತರಿರುತ್ತಾರೆ .

2021 ರ ಸಾಲಿಗೆ ಶ್ರೀ ಜಿ.ಎ. ಶಿವಲಿಂಗಯ್ಯ , ಶ್ರೀ ಜೀನಹಳ್ಳಿ ಸಿದ್ಧಲಿಂಗಪ್ಪ , ಡಾ . ವಿಜಯಾದೇವಿ ಮತ್ತು ಡಾ . ಎನ್.ಎನ್ . ಚಿಕ್ಕಮಾದು ಅವರು ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ . ‘ ಗೊರುಚ ಶರಣ ಪ್ರಶಸ್ತಿ ಮತ್ತು ಗೊರುಚ ಜಾನಪದ ಪ್ರಶಸ್ತಿಗಳಿಗೆ ತಲಾ 25,000 / ರೂಪಾಯಿಗಳು ಮತ್ತು ಗ್ರಂಥ ಪ್ರಶಸ್ತಿಗೆ ತಲಾ 10,000 / -ರೂಪಾಯಿಗಳ ಗೌರವಧನದೊಂದಿಗೆ ಪ್ರಶಸ್ತಿ ಫಲಕ ನೀಡಲಾಗುತ್ತದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಎಸ್.ಬಿ. ಅಂಗಡಿ ಪ್ರಧಾನ ಕಾರ್ಯದರ್ಶಿಯವರು ತಿಳಿಸಿದರು
ಪತ್ರಿಕಾ ಗೋಷ್ಠಿಯಲ್ಲಿ ಎಸ್.ಬಿ.ಅಂಗಡಿ, ಬಸವರಾಜ ಕುರುವ ಮತ್ತು ಹೊಣ್ಣಲಿಂಗಯ್ಯ ನವರು ಉಪಸ್ತಿತರಿದ್ದರು
City Today News
9341997936

You must be logged in to post a comment.