ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ ಗಿರೀಶ್ ರವರು ಭಾಗವಹಿಸಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ನಲ್ಲಿರುವ 4 ವಿಭಾಗಗಳಲ್ಲಿ ಭಾಗವಹಿಸಿ 4ರಲ್ಲೂ ಚಿನ್ನದ ಪದಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ

ದೀಕ್ಷಾ ಗಿನ್ನೀಸ್ ಗಿರೀಶ್  ಪದವಿಪೂರ್ವ ಕಾಲೇಜಿನ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಕ್ರೀಡಾ ಕೂಟದ ಪದಕಗಳ ವಿಜೇತೆ

ಇತ್ತೀಚೆಗೆ ಹಾಸನ ಜಿಲ್ಲೆಯ ಹಾಸನಾಂಬ ಒಳಾಂಗಣ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜಿನ ಜಿಮ್ನಾಸ್ಟಿಕ್ ಕ್ರೀಡಾ ಕೂಟದಲ್ಲಿ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ ಗಿರೀಶ್ ರವರು ಭಾಗವಹಿಸಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ನಲ್ಲಿರುವ 4 ವಿಭಾಗಗಳಲ್ಲಿ ಭಾಗವಹಿಸಿ 4ರಲ್ಲೂ ಚಿನ್ನದ ಪದಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ, ಟೇಬಲ್ ವೋಲ್ಟ್ – ಪ್ರಥಮ, ಅನ್‌ಇವನ್ ಬಾರ್ ಪ್ರಥಮ, ಬ್ಯಾಲೆನ್ಸಿಂಗ್ ಬೀಮ್ ಪ್ರಥಮ ಮತ್ತು ಪ್ಲೋರ್ ಎಕ್ಸಸೈಸ್- ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಗ್ರಾಹಿಣಿಯಗಿದ್ದಾರೆ. ಹಾಗೂ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.

ಇವರು ಚಂದ್ರಶೇಖರ್ ಜಿಮ್ನಾಸ್ಟಿಕ್ ಅಕಾಡೆಮಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ತರಬೇತುದಾರರಾದಂತಹ ಚಂದ್ರಶೇಖರ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ ಎಂದು ಎಂ. ಗಿರೀಶ್ ಕುಮಾರ್ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.

City Today news 9341997936