“ಜಿ.ಟಿ. ದೇವೇಗೌಡರಿಂದ ಚಾಲನೆ” ಬಾಂಧವ್ಯ ಸಾಮಾಜಿಕ ಸೇವೆಗೆ ವೇದಿಕೆ

ಏಪ್ರಿಲ್ 14ರಂದು ಬಾಂಧವ್ಯ ಸಾಮಾಜಿಕ ಸೇವಾ ಕಾರ್ಯಕ್ರಮ

ಬೆಂಗಳೂರು: ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ವತಿಯಿಂದ ಏಪ್ರಿಲ್ 14ರಂದು ಬಸವೇಶ್ವರನಗರದ ಇಂಜಿನಿಯರ್ಸ್ ಅಕಾಡೆಮಿಯಲ್ಲಿ ‘ಬಾಂಧವ್ಯ’ ಸಾಮಾಜಿಕ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಂಘಟನೆಯ ಗೌವರ್ನರ್ ಕೆ.ಆರ್. ಉಮೇಶ್ ಮಾತನಾಡಿ, ಅಲಯನ್ಸ್ ಕ್ಲಬ್ ದೇಶದಾದ್ಯಂತ ಲಕ್ಷಾಂತರ ಸದಸ್ಯರನ್ನು ಹೊಂದಿದ್ದು, ಭಾರತ, ಪಾಕಿಸ್ತಾನ, ನೇಪಾಳ, ದುಬೈ, ಯುಕೇ ಹಾಗೂ ಇಂಡೋನೇಷ್ಯಾ ಸೇರಿದಂತೆ 22ಕ್ಕೂ ಹೆಚ್ಚು ದೇಶಗಳಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಬೆಳಿಗ್ಗೆ 9 ಗಂಟೆಗೆ ಬಸವೇಶ್ವರನಗರದ ಇಂಜಿನಿಯರ್ಸ್ ಅಕಾಡೆಮಿಯಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಜಿ.ಟಿ. ದೇವೇಗೌಡ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ, ವೈದ್ಯಕೀಯ ನೆರವು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ವನಜಾದೇವಿ ಪುಟ್ಟಸ್ವಾಮಿ, ಸತ್ಯ ಪ್ರಶಾಂತ್, ನಾಗೇಶ್ ಪಾಟೀಲ್, ನಿರ್ಮಲಾ ಆನಂದ್, ರಾಮರಾಜು ಮತ್ತು ಪುನೀತ್ ಪ್ರಕಾಶ್ ಉಪಸ್ಥಿತರಿದ್ದರು.

City Today News 9341997936