ಡಾ. ಜಿ. ಅಂಬರೀಷ್ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯಿಂದ ರಾಜ್ಯ ಜಂಟಿ ಕಾರ್ಯದರ್ಶಿ ಹುದ್ದೆ

ಬೆಂಗಳೂರು, ಜುಲೈ 21, 2025: ಬ್ರಾಹ್ಮಣ ಸಮುದಾಯದ ಹಿತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆ, ಡಾ. ಜಿ. ಅಂಬರೀಷ್ ಅವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ 2025–2026ನೇ ಸಾಲಿನ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ನೇಮಕವು 2025ರ ಏಪ್ರಿಲ್ 30ರಿಂದ ಒಂದು ವರ್ಷ ಅವಧಿಗೆ ಅಥವಾ ಮುಂದಿನ ಆದೇಶವರೆಗೆ ಜಾರಿಯಾಗಲಿದೆ.

ಮಹಾಸಭೆಯು ಇನ್ನಷ್ಟು ಸದೃಢ ಮತ್ತು ಬಲಿಷ್ಠ ಸಂಸ್ಥೆಯಾಗಿ ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ, ರಾಜ್ಯದಾದ್ಯಂತ ವಿಪ್ರ ಸಮುದಾಯಕ್ಕೆ ತಮ್ಮ ಅಮೂಲ್ಯ ಸೇವೆಯನ್ನು ನೀಡಬೇಕೆಂದು ಮಹಾಸಭೆಯ ಅಧ್ಯಕ್ಷ ಎಸ್. ರಘುನಾಥ್ ಅವರು ಆಶಿಸಿದ್ದಾರೆ. ಮಹಾಸಭೆಯ ಯೋಜನೆಗಳು ಹೆಚ್ಚಿನ ಸಂಖ್ಯೆಯ ವಿಪ್ರರಿಗೆ ಲಾಭವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.

City Today News 9341997936