07.07.2024ರ ಭಾನುವಾರದಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ “ಮರೆಯಾದ ಛಲವಾದಿ ಚೇತನಗಳ ಚಿರಸ್ಮರಣ ಕಾರ್ಯಕ್ರಮ”

ಇತ್ತೀಚಿನ ಕಾಲಘಟ್ಟದಲ್ಲಿ ನಮ್ಮ ಸಮುದಾಯದ ವಿವಿಧ ಕ್ಷೇತ್ರದ ಮುತ್ಸದಿಗಳು ನಮ್ಮನ್ನು ಅಗಲಿರುವುದು ತಮಗೆ ತಿಳಿದಿರುವ ವಿಷಯವಾಗಿದೆ. ದಿವಂಗತರ ಕುಟುಂಬಸ್ಥರನ್ನು ಆಹ್ವಾನಿಸಿ, ದಿನಾಂಕ: 07.07.2024ರ ಭಾನುವಾರದಂದು ಬೆಂಗಳೂರಿನ ವಸಂತನಗರದಲ್ಲಿರುವ “ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ”ಮರೆಯಾದ ಛಲವಾದಿ ಚೇತನಗಳ ಚಿರಸ್ಮರಣ ಕಾರ್ಯಕ್ರಮ”ದಲ್ಲಿ ಶ್ರೀ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮಿಜೀ ರವರ
ದಿವ್ಯ ಸಾನಿಧ್ಯದಲ್ಲಿ ರಾಜ್ಯದ ಅನೇಶ ಛಲವಾದಿ ಸಮುದಾಯದ ಗಣ್ಯರು ಮತ್ತು ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೊಮ್ಮಗರಾದ ಆನಂದರಾಜ್ ಅಂಬೇಡ್ಕರ್ ರವರ ಅಮೃತ ಹಸ್ತದಿಂದ ದಿವಂಗತರ ಕುಟುಂಬಸ್ಥರನ್ನು ಆಹ್ವಾನಿಸಿ ಗೌರವಿಸುವ ಈ ಕಾರ್ಯಕ್ರಮಕ್ಕೆ ಬಾಬಾ ಸಾಹೇಬರ ಅಭಿಮಾನಿಗಳು, ಸಮುದಾಯ ಚಿಂತಕರು, ಸಮುದಾಯ ಪ್ರೇಮಿಗಳು, ಬಾಬಾ ಸಾಹೇಬರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ತಾವುಗಳು ಕಾರಣೀಭೂತರಾಗಬೇಕೆಂದು ಎಸ್. ಜಯಕಾಂತ್ ಚಾಲುಕ್ಯ ರಾಜ್ಯಾಧ್ಯಕ್ಷರು ಸಂವಿಧಾನ ಬಳಗ ಕೆಪಿಸಿಸಿ ಉಪಾಧ್ಯಕ್ಷರು (ಎಸ್.ಸಿ ನಿಭಾಗ) “ಸಂವಿಧಾನ ಬಳಗ”ವು ಛಲವಾದಿ ಸಮುದಾಯದ ಪರವಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ವಿನಂತಿಸಿದರು. ಗೋಷ್ಠಿ ತಳ್ಳಿ ಸಮುದಾಯದ ಪ್ರಮುಖರುಗಳು ಉಪಸ್ಥಿತರಿದ್ದರು.

City Today News 9341997936