5ಕೆ ಅಡ್ವಕೆಸಿ ರನ್‌ನಿಂದ ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ವಿವಿಧ ವಿಭಾಗದಲ್ಲಿ ಓಟ ಆಯೋಜನೆ

ಬೆಂಗಳೂರು, ಶನಿವಾರ, ನವೆಂಬರ್ 23, 2024: ದೇಶದ ಮುಂಚೂಣಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಯಾಗಿರುವ ‘ಲೈಫ್ ಈಸ್ ಕಾಲಿಂಗ್’ ಸಂಸ್ಥೆಯು ತನ್ನ 11ನೇ ಆವೃತ್ತಿಯ ‘ಥಂಪ್!’ ಬೆಂಗಳೂರು ಹಾಫ್ ಮ್ಯಾರಥಾನ್ ಮತ್ತು 10ಕೆ ಓಟವನ್ನು ಡಿಸೆಂಬರ್ 1, 2024ರ ಭಾನುವಾರ ಆಯೋಜಿಸಿದೆ. ನಾಯಂಡಹಳ್ಳಿಯ ರಿಂಗ್ ರಸ್ತೆಯಲ್ಲಿ ಪಿಇಎಸ್ ಕಾಲೇಜಿನ ಹಿಂಭಾಗ ನೈಸ್ ಟೋಲ್ ಪ್ಲಾಜಾ ಬಳಿ ಓಟ ಆರಂಭವಾಗಲಿದೆ. ಆರೋಗ್ಯ, ಫಿಟ್‌ನೆಸ್ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪ್ರೋತ್ಸಾಹ ನೀಡಲು ‘ಸೆಲೆಬ್ರೇಶನ್ ರನ್ ಸೀರೀಸ್’ ಅಡಿ ಸಂಸ್ಥೆಯು ಓಟವನ್ನು ಆಯೋಜಿಸಿದೆ.
ಬೆಳಿಗ್ಗೆ 5.30ಕ್ಕೆ ಓಟ ಆರಂಭವಾಗಲಿದೆ. ಸ್ಪರ್ಧಾ ವಿಭಾಗದಲ್ಲಿ 32ಕೆ ರನ್, 21.1 ಕಿ.ಮೀ. ಹಾಫ್ ಮ್ಯಾರಥಾನ್, 10 ಕಿ.ಮೀ. ಓಟಗಳು ಇರಲಿವೆ. 16 ವರ್ಷ ಮೇಲ್ಪಟ್ಟವರು ಇವುಗಳಲ್ಲಿ ಭಾಗವಹಿಸಬಹುದು. ಸ್ಪರ್ಧೆರಹಿತ ವಿಭಾಗದಲ್ಲಿ 5 ಕಿ.ಮೀ. ಓಟ/ನಡಿಗೆ ಇರಲಿದೆ. 11 ವರ್ಷ ಮೇಲ್ಪಟ್ಟವರು ಇದರಲ್ಲಿ ಭಾಗವಹಿಸಬಹುದು.

ಡಿ.1ರಂದು ಆಚರಿಸಲ್ಪಡುವ ವಿಶ್ವ ಏಡ್ಸ್ ದಿನದಂದೇ ಈ ವರ್ಷದ ಬೆಂಗಳೂರಿನ ಅತಿದೊಡ್ಡ ‘5ಕೆ ಅಡ್ವಕೆಸಿ ರನ್’ ಆಯೋಜಿಸಲ್ಪಟ್ಟಿರುವುದು ವಿಶೇಷವಾಗಿದೆ. ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್ ಮತ್ತು ಚಾಂಪಿಯನ್ ಇನ್ ಮಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿತವಾಗಿರುವ ಈ ಓಟದ ಮೂಲಕ ಎಚ್ ಐವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಓಟಗಾರರು ಭಾನುವಾರ ಬೆಳಿಗ್ಗೆ ನೈಸ್ ಎಕ್ಸ್‌ಪ್ರೆಸ್ ರಸ್ತೆಯ ಟೋಲ್ ಪ್ಲಾಜಾ ಬಳಿ ಸೇರಿ ಓಟ ಆರಂಭಿಸಲಿದ್ದಾರೆ. ಎಚ್‌ಐವಿ/ಏಡ್ಸ್ ಪೀಡಿತರ ನೆರವಿಗೆ ಶ್ರಮಿಸುತ್ತಿರುವ ಸಂಸ್ಥೆಗಳು ಇದರಲ್ಲಿ ಉಚಿತವಾಗಿ ಭಾಗವಹಿಸಬಹುದು. ‘ಥಂಪ್! ಸೆಲೆಬ್ರೇಶನ್ ಬೆಂಗಳೂರು ಹಾಫ್ ಮ್ಯಾರಥಾನ್’ನಲ್ಲಿ ಈ ಕೆಳಗಿನ ವಿಭಾಗಗಳು ಇರಲಿವೆ:
32ಕೆ ರನ್:
ដ 5.30
21.1ಕ್ಕೆ ಹಾಫ್ ಮ್ಯಾರಥಾನ್:
ដ 5.30
108 림:
ដ 5.30
5ಕೆ ರನ್/ವಾಕ್ (ಸ್ಪರ್ಧೆರಹಿತ):
ដ 7.00
56+4 ಕಾರ್ಪೊರೇಟ್ ರಿಲೇ:
ដ 6.30
ಈ ವರ್ಷದ ಓಟಕ್ಕೆ ನಂದಿ ಇನ್ ಫ್ರಾಸ್ಟ್ರಕ್ಟರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ತನ್ನ ಸುಂದರ ಎಕ್ಸ್‌ಪ್ರೆಸ್‌ವೇ ರಸ್ತೆಯನ್ನು ಒದಗಿಸಿದೆ. ರೇಡಿಯೋ ಇಂಡಿಗೋ ಅಧಿಕೃತ ರೇಡಿಯೋ ಪಾರ್ಟ್ನರ್, ಟೂರ್ ಡಿ ಮಲ್ನಾಡ್ ಸೈಕ್ಲಿಂಗ್ ಪಾರ್ಟ್ನರ್, ಥಾಟ್ ಫೋಕಸ್ ಟೆಕ್ನಾಲಜೀಸ್ ಸಂಸ್ಥೆಯು ತಂತ್ರಜ್ಞಾನ ಪಾಲುದಾರರಾಗಿವೆ. ಬೆಂಗಳೂರು ಆಸ್ಪತ್ರೆ ಮತ್ತು ಸ್ಪೆಕ್ಟಂ ಫಿಸಿಯೋ ಸಂಸ್ಥೆಗಳು ವೈದ್ಯಕೀಯ ನೆರವು ಹಾಗೂ ಅಕ್ಷಯಕಲ್ಪ ಸಂಸ್ಥೆಯು ಸಾವಯವ ರಿಫ್ರೆಶ್‌ಮೆಂಟ್‌ಗಳನ್ನು ಒದಗಿಸಲಿದೆ. ಬ್ರೂಕ್ಸ್ ಸಂಸ್ಥೆಯು ಓಟದ ಪಾಲುದಾರನಾಗಿದ್ದು, ಹಟ್ಟಿ ಕಾಪಿ ಸಂಸ್ಥೆಯು ಓಟಗಾರರಿಗೆ ಕಾಫಿ ಒದಗಿಸುವ ಮೂಲಕ ನೆರವಾಗಲಿವೆ. 10ಕೆ ಓಟವನ್ನು ಹೊಸಚಿಗುರು ಫಾರ್ಮ್ ಪ್ಲಾಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಪ್ರಾಯೋಜಿಸಿದೆ.
http://www.eventzalley.com ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.
City Today News 9341997936

You must be logged in to post a comment.