ಸಂಕಷ್ಟ ವರ್ಷವಾದ ಈ ಸಾಲಿನಲ್ಲಿ (2023-24) ಕರ್ನಾಟಕ ರಾಜ್ಯ ಮಾಹೆಯಾನ ಬಿಡಬೇಕಾದ ನೀರಿನ ಪ್ರಮಾಣದ ಬಗ್ಗೆ ಉದ್ಭವಿಸಿರುವ ವಿವಾದ

ಸಂಕಷ್ಟ ವರ್ಷವಾದ ಈ ಸಾಲಿನಲ್ಲಿ (2023-24) ಕರ್ನಾಟಕ ರಾಜ್ಯ ಮಾಹೆಯಾನ ಬಿಡಬೇಕಾದ ನೀರಿನ ಪ್ರಮಾಣದ ಬಗ್ಗೆ ಉದ್ಭವಿಸಿರುವ ವಿವಾದದ ಬಗ್ಗೆ ಕರ್ನಾಟಕ ಇಂಜಿನಿಯರ್ಸ್ ಫೋರಂ ಮತ್ತು ಕರ್ನಾಟಕ ಇಂಜಿನಿಯರ್ಸ್ ಅಕಾಡೆಮಿಗಳ ವತಿಯಿಂದ ನಡೆಸಲಾದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:

ಪ್ರಸ್ತುತ: ಸಾಲು’ (2023-24), ಮುಂಗಾರು ಮಳೆ ರಾಜ್ಯಕ್ಕೆ ವಿಳಂಬವಾಗಿ ಪ್ರವೇಶಿಸಿದ್ದು, ಮಳೆಯ ಪ್ರಮಾಣವು ಇದುವರೆಗೂ ವಾಡಿಕೆ ಮಳೆಗಿಂತ ಅಲ್ಪ ಪ್ರಮಾಣದಲ್ಲಿ ಇದ್ದು, ರಾಜ್ಯದ ಕಾವೇರಿ ಕಣಿವೆಯಲ್ಲಿನ ನಾಲ್ಕು ಪ್ರಮುಖ ಜಲಾಶಯಗಳ ನೀರಿನ ಶೇಖರಣೆ ಕಡಿಮೆಯಾಗಿದೆ(94.152ಟಿ.ಎಂ.ಸಿ). ಈ ಕಾರಣದಿಂದಾಗಿ ಈ ವರ್ಷ ನೀರಿನ ಅಭಾವ ವರ್ಷ”ವೆಂದು ಘೋಷಿಸಲು ಸೂಕ್ತವಾಗಿದೆ ಎಂದು ತಿಳಿಸಿದರು.

18-02-2018ರ ಸರ್ವೋಚ್ಚ ನ್ಯಾಯಲಯದ ತೀರ್ಪಿನಂತೆ ಪ್ರತಿ ತಿಂಗಳು ಬಿಳಿಗುಂಡ್ಲು ಜಲ ಮಾಪನ ಕೇಂದ್ರದಲ್ಲಿ ರಾಜ್ಯಕ್ಕೆ ನಿಗಧಿಪಡಿಸಿದ ಪ್ರಮಾಣದ ನೀರನ್ನು “ಅನುಪಾತದ ಆಧಾರದಲ್ಲಿ ನಿಗಧಿಪಡಿಸಿರುವ ವಿಧಾನ “ಅವೈಜ್ಞಾನಿಕ ಹಾಗೂ ಸರಿಯಿರುವುದಿಲ್ಲ” ಎಂದು ಅಭಿಪ್ರಾಯಪಟ್ಟಿರುತ್ತಾರೆ. ಸರ್ವೋಚ್ಛ ನ್ಯಾಯಲಯ ರಾಜ್ಯಕ್ಕೆ ಹತ್ತು ಟಿ.ಎಂ.ಸಿ ಹೆಚ್ಚುವರಿ ನೀರನ್ನು ನೀರಾವರಿಗಾಗಿ, 4.75 ಟಿ.ಎಂ.ಸಿ ಬೆಂಗಳೂರು ನಗರಕ್ಕೆ ಕುಡಿಯಲು ಕೊಟ್ಟಿರುತ್ತಾರೆ. ಈ 4.75 ಟಿ.ಎಂ.ಸಿ ನೀರನ್ನು ಬಳಸಲು ಜಲಾಶಯದಲ್ಲಿ 24 ಟಿ.ಎಂ.ಸಿ ನೀರಿನ ಶೇಖರಣೆಯ ಅಗತ್ಯವಿರುತ್ತದೆ. ಇದಲ್ಲದೆ ಕಾವೇರಿ ನ್ಯಾಯಧೀಕರಣ 17.15 ಟಿ.ಎಂ.ಸಿ ನೀರನ್ನು “ಉಳಿದ ನೀರಿನ” ಭಾಗವಾಗಿ ರಾಜ್ಯಕ್ಕೆ ನಿಗಧಿಪಡಿಸಿದೆ. ಈ 51.15 ಟಿ.ಎಂ.ಸಿ. ಹೊಸ ನೀರನ್ನು ರಾಜ್ಯದ ಜಲಾಶಯಗಳಿಂದ ಉಪಯೋಗಿಸಬೇಕಾಗಿದೆ. ತಮಿಳುನಾಡಿಗೆ 10 ಟಿ.ಎಂ.ಸಿ ಭೂ ಜಲವನ್ನು ಉಪಯೋಗಿಸಲು ಸೂಚಿಸಿರುತ್ತದೆ.

ತಮಿಳುನಾಡಿಗೆ ಸೂಚಿಸಿದ ಭೂ ಜಲ ಯಾವಾಗ ಬಳಸಲು ಸೂಚಿಸಿರುವುದಿಲ್ಲ. ಕಾವೇರಿ ಕೊಳ್ಳದ ಜಲ ಸಮ್ಯಸೆಗೆ ಸೂಕ್ತ: ಪರಿಹಾರವನ್ನು ಒದಗಿಸಬೇಕಾದಲ್ಲಿ ತಮಿಳುನಾಡು 10 ಟಿ.ಎಂ.ಸಿ ಭೂ ಜಲವನ್ನು ಸಮಾನವಾಗಿ ಮುಂಗಾರಿನ ನಾಲ್ಕು ತಿಂಗಳಲ್ಲಿ ಬಳಸಿದ್ದಲ್ಲಿ ಕುರುವ ಭತ್ತಕ್ಕೆ ನೀರು ಲಭ್ಯವಾಗಲಿದ್ದು ಆ ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಸಿಗುವುದರ ಜೊತೆಗೆ ಕರ್ನಾಟಕ ರಾಜ್ಯಕ್ಕೂ ಮಳೆಗಾಲದಲ್ಲಿ ಬಿಳಿಗುಂಡ್ಲುವಿಗೆ ಬಿಡುವ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿ ಆ ನೀರನ್ನು ಹಿಂಹಾರು ಋತುವಿನಲ್ಲಿ ಹೆಚ್ಚಾಗಿ ಕೊಡಲು ಜಲಾಶಯಗಳಲ್ಲಿ ನೀರಿನ ಲಭ್ಯತೆ ಇರುವುದರಿಂದ ಬಿಡಲು ಅನುಕೂಲವಾಗುತ್ತದೆ, ಈ ಸಲಹೆಯನ್ನು ಪರಿಗಣಿಸಿ ರಾಜ್ಯ ಜೂನ್‌ನಿಂದ ಜನವರಿವರೆಗೂ ಬಿಡಬೇಕಾದ ನೀರಿನ ಪ್ರಮಾಣವನ್ನು ಕಾವೇರಿ ಪ್ರಾಧಿಕಾರ ಹೊಸದಾಗಿ ನಿಗಧಿಪಡಿಸಬೇಕಾಗುತ್ತದೆ ಎಂದು ಸಲಹೆ ನೀಡಿರುತ್ತಾರೆ.

ಕಾವೇರಿ ನ್ಯಾಯಾಧೀಕರಣ ಕಂಡಿಕೆ 1 ರಿಂದ 18 ಪುಟ 207, 208 ವ್ಯಾಲ್ಯಂ 5ರಲ್ಲಿ ಸೂಚಿಸಿದಂತೆ ಕ್ರಮವಾಗಿ ಕಬಿನಿ ಜಲಾಶಯ, ಕೆರ್‌ಸ್‌ ಜಲಾಶಯ, ಕಬಿನಿ ಹಾಗೂ ಕೆಆರ್‌ಸ್‌ ಕೆಳಭಾಗದ ಜಲಾನಯನ ಪ್ರದೇಶದಿಂದ (25 ಸಾವಿರ ಚದರ ಕೀಲೋ ಮೀಟರ್ ವಿಸ್ತೀರ್ಣ) ಲಭ್ಯವಿರುವ ನೀರಿನ ಪ್ರಮಾಣ ಕ್ರಮವಾಗಿ 60 ಟಿ.ಎಂ.ಸಿ. 52 ಟಿ.ಎಂಸಿ ಮತ್ತು 80 ಟಿ.ಎಂ.ಸಿ ಎಂದು ಸೂಚಿಸಿರುತ್ತಾರೆ. ಇದೇ ಆಧಾರದ ಮೇಲೆ ಉಚ್ಛನ್ಯಾಯಲಯ ನಿಗಧಿಪಡಿಸಿರುವ 177.25 ಟಿ.ಎಂ.ಸಿ ನೀರನ್ನು ರಾಜ್ಯ ಸರ್ಕಾರ ಹರಿಸಬೇಕಾದ್ದಲ್ಲಿ ನೀರಿನ ಪ್ರಮಾಣ: ಕಬಿನಿಯಿಂದ 48 ಟಿ.ಎಂ.ಸಿ(27%), ಕೆಆರ್‌ಸೆಯಿಂದ 50ಟಿ.ಎಂ.ಸಿ(28) .ಹಾಗೂ ಕಬಿನಿ ಹಾಗೂ ಕೆಆರ್‌ಸ್ ಕೆಳಭಾಗದ ಜಲಾನಯನ ಪ್ರದೇಶದಿಂದ 80ಟಿ.ಎಂ.ಸಿ(45) ನೀರು ಲಭ್ಯವಿರಬೇಕಾಗುತ್ತದೆ.

ಮೇಲೆ ವಿವರಿಸಲಾದ ಮೂರು ಮೂಲಗಳಿಂದ ಲಭ್ಯವಿರುವ ನೀರಿನ ಪ್ರಮಾಣದಲ್ಲಿ, ಕಬಿನಿ ಮತ್ತು ಕೆಆರ್‌ಸ್‌ ಡ್ಯಾಂನಿಂದ ಬಿಡಲಾಗುವ ನೀರಿಗೆ ಆತೋಟಿ ಮತ್ತು ಮಾವನ ಸಾಧ್ಯವಿದೆ, ಆದರೆ ಈ ಎರಡು ಹಣೆಕಟ್ಟಿನ ಕೆಳಭಾಗದ ಜಲಾನಯನ ಪ್ರದೇಶದಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣದ ಬಗ್ಗೆ, 2007-08ರಿಂದ 2022-23ರವರೆಗಿನ ಮಾಹಿತಿ ಪ್ರಕಾರ ನೀರಿನ ಲಭ್ಯತೆ ವಿಶ್ವಾಸರ್ಹವಲ್ಲ, ಹೀಗಾಗಿ ಈ 80 ಟಿ.ಎಂ.ಸಿ ನೀರನ್ನು ಬಿಡುವ ಹೊಣೆ ರಾಜ್ಯ ಸರ್ಕಾರದ ಮೇಲೆ ಹೇರುವುದು ಉಚಿತವಲ್ಲವೆಂದು ಅಭಿಪ್ರಾಯಪಟ್ಟಿರುತ್ತಾರೆ. ರಾಜ್ಯ ಸರ್ಕಾರಕ್ಕೆ ಕಬಿನಿ ಮತ್ತು ಕೆಆರ್‌ಸ್‌ ಡ್ಯಾಂನಿಂದ ಬಿಡಬೇಕಾದ ನೀರಿನ ಪ್ರಮಾಣಕ್ಕೆ ಮಾತ್ರ ರಾಜ್ಯವನ್ನು ಹೊಣೆಗಾರನ್ನನಾಗಿ ಮಾಡಬಹುದು ಈಗಾಗಲೇ ನಿಗಧಿ ಪಡಿಸಿರುವ ನೀರಿನ ಪ್ರಮಾಣವನ್ನು ಮಾರ್ಪಡಿಸಿ ಕಬಿನಿ ಮತ್ತು ಕೆಆರ್‌ ಕಣಿಕಟ್ಟುಗಳಿಂದ ಮಾತ್ರ ಹರಿಸಲು ಹೊಸ ಪ್ರಮಾಣವನ್ನು ನಿಗಧಿಪಡಿಸಬೇಕೆಂದು ಸೂಚಿಸಿರುತ್ತಾರೆ.

ಕರ್ನಾಟಕ ಸರ್ಕಾರ ಕಾವೇರಿ ಪ್ರಾಧಿಕಾರವನ್ನು ಸಂಕಷ್ಟ ವರ್ಷಗಳು ಬಂದಾಗ ಆ ವರ್ಷದ ಹಿಂಗಾರು ಮಳೆ ತರುವಾಯ “ಸಂಕಷ್ಟ ವರ್ಷ” ಎಂದು ಘೋಷಿಸುವುದರ ಜೊತೆಗೆ “ಸಂಕಷ್ಟದ ಪ್ರಮಾಣವನ್ನು ಶೇಖಡವಾರು ಘೋಷಿಸಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯಗಳಿಗೆ ಸೂಕ್ತ ಪರಿಹಾರವನ್ನು ಸೂಚಿಸಲು ಒತ್ತಾಯಿಸಬೇಕೆಂದು ಕೋರಿರುತ್ತಾರೆ.

ಪ್ರತಿ ಸಂಕಷ್ಟದ ವರ್ಷ ವಿವಾದವು ಉಚ್ಚನ್ಯಾಯಲಯದ ಮೆಟ್ಟಿಲನ್ನು ಏರುವುದನ್ನು ತಪ್ಪಿಸಲು “ಪರ್ಯಾಯ ಜಲ ವಿವಾದ ಇರ್ತ್ಯಥಕ್ಕೆ ರಾಷ್ಟ್ರ ವಿಪತ್ತು ನಿಧಿಯನ್ನು” ಹಣದ ರೂಪದಲ್ಲಿ ಸಂಕಷ್ಟಕ್ಕೆ ಒಳಗಾದ ರಾಜ್ಯದ ರೈತರಿಗೆ ನೀಡವಂತಹ ಹೊಸ ವ್ಯವಸ್ಥೆಯನ್ನು ಮತ್ತು ಸೂಕ್ತ ನೀತಿಯನ್ನು ರೂಪಿಸಲು ಸರ್ವೋಚ್ಛ ನ್ಯಾಯಲಯದ ಮೂಲಕ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಲು ಆಗ್ತಾಯಿಸಿರುತ್ತಾರೆ.

ಕ್ಷೀಣಿಸುತ್ತಿರು ರಾಜ್ಯದ ಜಲ ಸಂಪನ್ಮೂಲಗಳನ್ನು ಸದ್ವಿನಿಯೋಗ ಪಡಿಸಲು “ಉಚ್ಛ ತಾಂತ್ರಿಕ ಸಮಿತಿಯನ್ನು ನೇಮಿಸಿ “ರಾಷ್ಟ್ರದ ಎಲ್ಲಾ ನದಿಗಳ ಮುಖಜ ಭೂಮಿಯಲ್ಲಿ ಡೆಲ್ಟಾ)” ಉಪಯೋಗಿಸಲು ಯೋಗ್ಯವಾದ ಭೂ ಜಲದ ಪ್ರಮಾಣವನ್ನು ಕಾಲಮಿತಿಯೊಳಗೆ ನಿಗಧಿಪಡಿಸುವಂತೆ ಕೋರಿದಲ್ಲಿ ಕಾವೇರಿ, ಕೃಷ್ಣ, ಗೋದಾವರಿ: ಮುಖಜ ಭೂಮಿಗಳಲ್ಲಿ ಲಭ್ಯವಾಗ ಬಹುದಾದ ಹೆಚ್ಚುವರಿ ಭೂ ಜಲದ ನೀರು ರಾಜ್ಯಕ್ಕೂ ಸಿಗಲಿದ್ದು ಅನುಕಾಲವಾಗಲಿದೆ. ಆದುದ್ದರಿಂದ ಈ ಪ್ರಯತ್ನ ಕೂಡಲೇ ಮಾಡಲು ಕೋರಿರುತ್ತಾರೆ.

ರಾಜ್ಯ ಸರ್ಕಾರ ನಿರ್ಮಿಸಲು ಯೋಚಿಸಲು “ಮೇಕೆದಾಟು ಜಲವಿದ್ಯುತ್‌ ಯೋಜನೆ”ಗೆ ತಮಿಳು ಸರ್ಕಾರದ ಆಕ್ಷೇಪಣೆ ಇದೆ. ಈ ಪ್ರಸ್ತಾವನೆ ಉಚ್ಛನ್ಯಾಯಲಯದ ಮುಂದೆ ಬಂದಿದೆ ಈ ಯೋಜನೆ ಪೂರ್ಣಗೊಂಡಲ್ಲಿ ಇದರಲ್ಲಿ ಶೇಖರಣೆಯಾಗುವ 65 ಟಿ.ಎಂ.ಸಿ ನೀರು ಎರಡು ರಾಜ್ಯಗಳಿಗೂ ಉಪಯೋಗವಾಗಲಿದ್ದು “ಸಂಕಷ್ಟ ವರ್ಷದಲ್ಲಿ ಈ ಯೋಜನೆಯ ಉಪಯುಕ್ತತೆ ವೇದ್ಯವಾಗುತ್ತದೆ”. ಹೀಗಾಗಿ ಈ ಯೋಜನೆಗೆ ಉಚ್ಛನ್ಯಾಯಲಯವು ತಮಿಳುನಾಡು ಸರ್ಕಾರದ ಆಕ್ಷೇಪಣೆಯನ್ನು ಬದಿಗೊತ್ತಿ ಯೋಜನೆಗೆ ಒಪ್ಪಿಗೆ ಸೂಚಿಸಲು ಕೋರುವಂತೆ ಒತ್ತಾಯಿಸಿರುತ್ತಾರೆ.

ತಮಿಳುನಾಡು ಉಪಯೋಗಿಸುವ “ಭೂ ಜಲದ ಮಾಹಿತಿಯನ್ನು” ಪ್ರತಿ ತಿಂಗಳು ಕಾವೇರಿ ಕಣಿವೆಯ ರಾಜ್ಯಗಳ ಜೊತೆಗೆ ಹಂಚಿಕೊಳ್ಳಬೇಕೇಂದು ಕಾವೇರಿ ಪ್ರಾಧಿಕಾರವನ್ನು ಕೋರಲು ಸೂಚಿಸಿರುತ್ತಾರೆ. ಇದರ ಜೊತೆಗೆ ಕಾವೇರಿ ಕಣಿವೆಯ ಎಲ್ಲಾ ಜಲಮಾಪನ ಕೇಂದ್ರಗಳ ಮಾಹಿತಿಯನ್ನು ಪ್ರತಿ ತಿಂಗಳು ಎಲ್ಲಾ ರಾಜ್ಯಗಳು ವಿನಿಮಯ ಮಾಡಿಕೊಳ್ಳುವಂತೆ ಕಾವೇರಿ ಪ್ರಾಧಿಕಾರವನ್ನು ಕೋರಲು ಅಧ್ಯಕ್ಷರು, ಕರ್ನಾಟಕ ಸೀನಿಯರ್ ಇಂಜಿನಿಯರ್ಸ್ ಫೋರಂ ಮತ್ತು ಕರ್ನಾಟಕ ಇಂಜಿನಿಯರ್ಸ್ ಅಕಾಡೆಮಿಗಳ ವತಿಯಿಂದ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಮನವಿ ಮಾಡಿರುತ್ತಾರೆ.

City Today News 9341997936

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು . ನಮ್ಮ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ . ಈ ಪರಿಸ್ಥಿತಿಯಲ್ಲಿ ನೀರು ಬಿಡಲು ನಿರ್ವಹಣಾ ಮಂಡಳಿ , ನಿರ್ವಹಣಾ ಪ್ರಾಧಿಕಾರ ಸೂಚಿಸಿದರೆ ಕರ್ನಾಟಕ ರಾಜ್ಯಾದ್ಯಂತ ತೀವ್ರ ಹೋರಾಟ ಅನಿವಾರ್ಯ – ವಾಟಾಳ್ ನಾಗರಾಜ್

ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ . ತಮಿಳುನಾಡಿನವರು ಪ್ರತಿ ಸಾರಿಯೂ ನಮ್ಮ ನೀರನ್ನು ಕಬಳಿಸಲು ಸರ್ವ ಪ್ರಯತ್ನಪಡುತ್ತಿದ್ದಾರೆ . ನಿರ್ವಹಣಾ ಪ್ರಾಧಿಕಾರ ನಮಗೆ ಬೇಕಿರಲಿಲ್ಲ . ಕೇಂದ್ರದ ಒತ್ತಡದಿಂದ ನಿರ್ವಹಣಾ . ಪ್ರಾಧಿಕಾರ ರಚನೆಯಾಯಿತು . ನಿರ್ವಹಣಾ ಪ್ರಾಧಿಕಾರವನ್ನು ವಿರೋಧಿಸಲು ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಯಿತು . ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲವೆಂದು ವಾಟಾಳ್ ಹೇಳಿದರು .

“ ಮೇಕೆದಾಟು ” : – ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರವಾಗಿ ವಿರೋಧಿಸುತ್ತಿರುವುದು ಖಂಡನೀಯ . ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಮೇಕೆದಾಟು ಯೋಜನೆ ಆರಂಭಿಸಬಾರದೆಂದು ಹೇಳಿ ತಮಿಳುನಾಡು ತನ್ನ ಸಣ್ಣತನವನ್ನು ತೋರುತ್ತಿದ್ದಾರೆ . ಈಗ ತಮಿಳುನಾಡಿಗೆ ಕೇರಳ , ಪುದುಚೇರಿ ಬೆಂಬಲ ನೀಡುತ್ತಿರುವುದು ಸರಿಯಲ್ಲ . ಮೇಕೆದಾಟು ಕುಡಿಯುವ ನೀರಿನ ಯೋಜನೆ , ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬಾರದು . ತಮಿಳುನಾಡು ಧೋರಣೆಯನ್ನು ಮೊದಲಿನಿಂದಲೂ ನಾವು ವಿರೋಧ ಮಾಡುತ್ತಾ ಬಂದಿದ್ದೇವೆ . ಕರ್ನಾಟಕ ಸರ್ಕಾರ ತನ್ನ ದಿಟ್ಟ ನಿಲುವನ್ನು ಪ್ರದರ್ಶಿಸಬೇಕೆಂದು ವಾಟಾಳ್ ನಾಗರಾಜ್ ತಿಳಿಸಿದರು .

ಹಿಂದಿ ಭಾಷೆ ವಿರುದ್ಧ ನಿರಂತರ ಚಳವಳಿ ನಡೆಸಲು ತೀರ್ಮಾನಿಸಿದ್ದೇವೆ . ಯಾವುದೇ ಕಾರಣಕ್ಕೂ ಹಿಂದಿ ಭಾಷೆ ಕರ್ನಾಟಕದಲ್ಲಿ ಬೇಡ , ಕನ್ನಡವೇ ಸಾರ್ವಭೌಮ , ಕನ್ನಡವೇ ರಾಷ್ಟ್ರ ಭಾಷೆ . ಯಾವುದೇ ಕೇಂದ್ರ ಕಾರ್ಯಾಲಯಗಳಲ್ಲಿ ಕರ್ನಾಟಕದಲ್ಲಿ ಹಿಂದಿ ಬೇಡ . ಬ್ಯಾಂಕುಗಳಲ್ಲಿ ವ್ಯವಹಾರ ಕನ್ನಡದಲ್ಲೇ ಇರಬೇಕು . ಬ್ಯಾಂಕಿನ ಅಧಿಕಾರಿಗಳು ಕನ್ನಡದವರೇ ಇರಬೇಕು . ಬ್ಯಾಂಕಿನ ಚೆಕ್ಕುಗಳು ಕನ್ನಡದಲ್ಲೇ ಇರಬೇಕು . ನಾವು ಈ ಬಗ್ಗೆ ತೀವ್ರವಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆಂದು ವಾಟಾಳ್ ನಾಗರಾಜ್ ತಿಳಿಸಿದರು .

ಕೇಂದ್ರ ಸರ್ಕಾರ ತೆರೆಮರೆಯಲ್ಲಿ ಹಿಂದಿ ಹೇರಲು ಹೊರಟಿದ್ದಾರೆ . ಈಗಂತೂ ಕೇಂದ್ರ ಸರ್ಕಾರ ಸಂಪೂರ್ಣ ಹಿಂದಿ ಮಯವಾಗಿದೆ . ಈ ಬಗ್ಗೆ ನಮ್ಮ ಕರ್ನಾಟಕದ ಲೋಕಸಭಾ ಸದಸ್ಯರು ಲೋಕಸಭೆಯಲ್ಲಿ ಭದ್ರವಾಗಿ ಮಾತನಾಡಬೇಕು . ನಮ್ಮ ಲೋಕಸಭಾ ಸದಸ್ಯರುಗಳು ಯಾವುದೇ ಸಮಸ್ಯೆಗಳು ಬಂದರೂ ಲೋಕಸಭೆಯಲ್ಲಿ ಮಾತನಾಡಲೇ ಇಲ್ಲ . ಕರ್ನಾಟಕದ ಸಮಸ್ಯೆಗಳು ಅಪಾರ ಇದೆ . ಹಿಂದಿ ಭಾಷೆ ಕರ್ನಾಟಕಕ್ಕೆ ಬೇಡ ಎಂಬ ಘೋಷಣೆಯನ್ನು ಲೋಕಸಭೆಯಲ್ಲಿ ನಮ್ಮ ಲೋಕಸಭಾ ಸದಸ್ಯರುಗಳು ಒಕ್ಕೊರಲಿನಿಂದ ಧ್ವನಿ ಎತ್ತ ಬೇಕು . ಕರ್ನಾಟಕದ ಗಡಿ ಭಾಗದಲ್ಲಿ ಬರಿ ಹಿಂದಿ ನಾಮಫಲಕ ಇದೆ . ಕನ್ನಡ ಇಲ್ಲವೇ ಇಲ್ಲ . ತಮಿಳುನಾಡು – ಕರ್ನಾಟಕ ಗಡಿ ಭಾಗವಾದ ಅತ್ತಿಬೆಲೆ ಹತ್ತಿರ ಸಂಪೂರ್ಣ ಹಿಂದಿ ನಾಮಫಲಕ ಇದೆ . ಇದನ್ನು ಕೂಡಲೇ ತೆಗೆಯಬೇಕು . ಇನ್ನು 15 ದಿವಸಗಳೊಳಗಾಗಿ ತೆಗೆಯದಿದ್ದರೆ ನಾವೇ ತೆಗೆಯುತ್ತೇವೆಂದು ವಾಟಾಳ್ ಎಚ್ಚರಿಸಿದರು .

City Today News

9341997936