ತಲೆಮಾರುಗಳ ದೃಷ್ಟಿ ಉಳಿಸಿದ ವಾಸನ್ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ

ತಲೆಮಾರುಗಳ ದೃಷ್ಟಿ ಉಳಿಸಿದ ವಾಸನ್ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ

ವಿರಳ ಶಿಶು ಮುತ್ತಿನಕಣ್ಣು ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸು

ಹುಬ್ಬಳ್ಳಿ, ಸೆಪ್ಟೆಂಬರ್ 15: ವಾಸನ್ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿಯ ತಜ್ಞ ವೈದ್ಯರ ತಂಡವು ಕೇವಲ ಒಂದು ವರ್ಷದ ಶಿಶುವಿನ ಝೋನುಲರ್ ಕ್ಯಾಟರಾಕ್ಟ್ (ಮುತ್ತಿನಕಣ್ಣು) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ, intraocular lens (IOL) ಪ್ರತಿಷ್ಠಾಪನೆಯ ಮೂಲಕ ದೃಷ್ಟಿಯನ್ನು ಪುನಃ ನೀಡುವಲ್ಲಿ ಮಹತ್ವದ ಸಾಧನೆ ಮಾಡಿದೆ.

ಈ ಪ್ರಕರಣವು ತಲೆಮಾರುಗಳ ವೈಶಿಷ್ಟ್ಯ ಹೊಂದಿದ್ದು, ಶಿಶುವಿನ ತಂದೆಯೂ ಸಹ ಬಾಲ್ಯದಲ್ಲೇ ಜನ್ಮಜಾತ ಮುತ್ತಿನಕಣ್ಣಿಗೆ ಒಳಗಾಗಿದ್ದರು ಮತ್ತು ಆ ಸಮಯದಲ್ಲೇ ಶಸ್ತ್ರಚಿಕಿತ್ಸೆಗೊಂಡಿದ್ದರು. ಈಗ ತಂದೆ ಮತ್ತು ಮಗು ಇಬ್ಬರೂ ದೃಷ್ಟಿ ಮರಳಿ ಪಡೆದಿದ್ದಾರೆ.

ವಾಸನ್ ಹುಬ್ಬಳ್ಳಿಯ ಆಧುನಿಕ ಮಾದರಿಯ ಆಪರೇಷನ್ ಥಿಯೇಟರ್ ನಲ್ಲಿ ಈ ಸೂಕ್ಷ್ಮ ಶಸ್ತ್ರಚಿಕಿತ್ಸೆ ನಡೆಯಿತು. ಇದಕ್ಕಾಗಿ ಅತ್ಯಾಧುನಿಕ ಮಕ್ಕಳ ಕಣ್ಣಿನ ಮೈಕ್ರೋಸ್ಕೋಪ್‌ಗಳು, ಫ್ಯಾಕೋ-ವಿಟ್ರೆಕ್ಟಮಿ ಸಿಸ್ಟಮ್ ಹಾಗೂ ಶಿಶುಗಳಿಗೆ ತಕ್ಕಂತಹ ಅನಸ್ತೀಷಿಯಾ ಮಾನಿಟರಿಂಗ್ ವ್ಯವಸ್ಥೆಗಳನ್ನು ಬಳಸಲಾಯಿತು. ಶಸ್ತ್ರಚಿಕಿತ್ಸೆಗೆ ಮುನ್ನ ಶಿಶುವಿಗೆ ಅಲ್ಟ್ರಾಸೌಂಡ್, ಕ್ಯಾರಟೊಮೆಟ್ರಿ, ಬಯೋಮೆಟ್ರಿ ಸೇರಿದಂತೆ ಸಂಪೂರ್ಣ ಪೂರ್ವಪರೀಕ್ಷೆಗಳು ನೆರವೇರಿಸಲಾಯಿತು. ಬಳಿಕ ಮಂಜುಗಡ್ಡೆಯಂತೆ ಆಗಿದ್ದ ಲೆನ್ಸ್‌ ಅನ್ನು ತೆಗೆಯಲಾಗಿದ್ದು, ಮುಡಿಸಬಹುದಾದ ಆಕ್ರಿಲಿಕ್ IOL ಪ್ರತಿಷ್ಠಾಪಿಸಲಾಯಿತು.

“ವಾಸನ್ ಹುಬ್ಬಳ್ಳಿಯ ಶಕ್ತಿ ನಮ್ಮ ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಸಮರ್ಪಿತ ತಂಡದಲ್ಲಿದೆ. ಇದರ ಮೂಲಕ ಉತ್ತರ ಕರ್ನಾಟಕದಲ್ಲಿಯೇ ವಿಶ್ವದರ್ಜೆಯ ಮಕ್ಕಳ ಕಣ್ಣಿನ ಚಿಕಿತ್ಸೆ ಲಭ್ಯವಾಗುತ್ತಿದೆ,” ಎಂದು ಶಸ್ತ್ರಚಿಕಿತ್ಸಕ ವೈದ್ಯರು ತಿಳಿಸಿದ್ದಾರೆ.


ಶಿಶು ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಅಂಬ್ಲಿಯೋಪಿಯಾ (lazy eye) ಚಿಕಿತ್ಸಾ ವಿಧಾನ ಕೈಗೊಳ್ಳಲಾಗುವುದು.

ಈ ಸಾಧನೆಯ ಮೂಲಕ ವಾಸನ್ ಹುಬ್ಬಳ್ಳಿ, ಮಕ್ಕಳ ಕಣ್ಣಿನ ಶಸ್ತ್ರಚಿಕಿತ್ಸೆಯ ಪ್ರಾದೇಶಿಕ ಕೇಂದ್ರ ಎಂಬ ತನ್ನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದೆ.

ಈ ಮಾಹಿತಿಯನ್ನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಡಾ. ಪ್ರೀತಿ ಬಿ.ಎಸ್., ಡಾ. ಚಂದ್ರಕಾಂತ್ ಪುಜಾರ್, ಡಾ. ಅಂಜನಾ ಕುರಿ, ಡಾ. ಶೃತಿಕಾ ಬಿ. ಮತ್ತು ಡಾ. ವೀಣಾ ಪಟ್ವರ್ಧನ್ ಬಿಡುಗಡೆ ಮಾಡಿದರು.


City Today News
9341997936