ದಾವಣಗೆರೆಯಲ್ಲಿ ಮೇ 7ರಿಂದ 12ರವರೆಗೆ ಅಂತರಾಷ್ಟ್ರೀಯ ಕನ್ನಡ ಸಮ್ಮೇಳನ

ಬೆಂಗಳೂರು , ಮೇ 20: ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಶ್ವ ಕನ್ನಡಿಗರ ಟ್ರಸ್ಟ್ ವತಿಯಿಂದ ದಾವಣಗೆರೆ ನಗರದಲ್ಲಿ ಮೇ 7ರಿಂದ 12ರವರೆಗೆ ಅಂತರಾಷ್ಟ್ರೀಯ ಕನ್ನಡ ಸಮ್ಮೇಳನ ನಡೆಯಲಿದೆ.

ಈ ಕುರಿತು ದಾವಣಗೆರೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾಹಿತಿ ನೀಡಿದ್ದು, ಆರು ದಿನಗಳ ಕಾಲ ನಾನಾ ಕ್ಷೇತ್ರಗಳ ಸಮ್ಮೇಳನಗಳು, ಸಾಹಿತ್ಯ ಚರ್ಚೆಗಳು, ಕಲಾ ಕಾರ್ಯಕ್ರಮಗಳು ಹಾಗೂ ಉದ್ಯೋಗ ಮೇಳ ನಡೆಯಲಿದೆ ಎಂದು ಹೇಳಿದರು.

ಸಮ್ಮೇಳನದ ವಿಶೇಷ ಕಾರ್ಯಕ್ರಮಗಳು:

ಮೇ 7: ಸಾಹಿತ್ಯ ಸಮ್ಮೇಳನ

ಮೇ 8: ಯೂಟ್ಯೂಬರ್‌ಗಳ ಸಮ್ಮೇಳನ

ಮೇ 9: ಶಿಕ್ಷಣ ಸಮ್ಮೇಳನ

ಮೇ 10: ಸಿನಿ ಸಾಹಿತ್ಯ ಮತ್ತು ಕಲಾವಿದರ ಸಮ್ಮೇಳನ

ಮೇ 11: ಕೃಷಿ ಸಮ್ಮೇಳನ

ಮೇ 12: ಉದ್ಯೋಗ ಮೇಳ


ಈ ಕಾರ್ಯಕ್ರಮಗಳನ್ನು ಬಸವಣ್ಣನವರ ವೇದಿಕೆ, ಸರ್ವಜ್ಞ ವೇದಿಕೆ ಹಾಗೂ ರಾಣಿ ಚೆನ್ನಮ್ಮ ವೇದಿಕೆ ಎಂಬ ಮೂರು ವೇದಿಕೆಗಳಲ್ಲಿ ನಡೆಸಲಾಗುವುದು. ಪ್ರತಿದಿನ ಬೆಳಿಗ್ಗೆ 10.00 ರಿಂದ ರಾತ್ರಿ 10.00 ಗಂಟೆಯವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿವೆ. ಹೊಸ ಸಾಹಿತಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೇ 7ರಂದು ನವ ಲೇಖಕರ ಮೇಳ, ಪ್ರಕಾಶಕರ ಮೇಳ ಹಾಗೂ ಸಾಮಾಜಿಕ ಬರಹಗಾರರ ಮೇಳ ಆಯೋಜಿಸಲಾಗಿದೆ.

ಮುಖ್ಯಮಂತ್ರಿಗಳ ಆಹ್ವಾನ, ಸರ್ಕಾರದ ಸಂಪೂರ್ಣ ಸಹಕಾರ
ಸಮ್ಮೇಳನದ ಯಶಸ್ಸಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಪ್ರಮುಖರು ಸಹಕಾರ ನೀಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಅವರೂ ಸಂಪೂರ್ಣ ಬೆಂಬಲ ನೀಡಲಿದ್ದಾರೆ.

ಸಾಮಾಜಿಕ ಮಾಧ್ಯಮ ತಾಣದಲ್ಲಿ ನೊಂದಣಿ ವ್ಯವಸ್ಥೆ:
ಸಮ್ಮೇಳನದಲ್ಲಿ ಭಾಗವಹಿಸಲು ವೆಬ್‌ಸೈಟ್ ಮೂಲಕ ನೋಂದಣಿ ಮಾಡುವ ವ್ಯವಸ್ಥೆ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಸಾಹಿತಿಗಳು, ಕಲಾವಿದರು, ಪತ್ರಕರ್ತರು ಮತ್ತು ಕನ್ನಡಾಭಿಮಾನಿಗಳು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ವಿಶ್ವ ಕನ್ನಡಿಗರ ಟ್ರಸ್ಟ್ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಇದೊಂದು ವಿಶಿಷ್ಟ ಸಮ್ಮೇಳನ:
ಈ ಅಂತರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ವಿಶ್ವದ ಹಲವಾರು ಕನ್ನಡ ಸಾಹಿತಿಗಳು, ಲೇಖಕರು, ಕಲಾವಿದರು, ಚಿತ್ರಪಟ ನಿರ್ದೇಶಕರು, ಕೃಷಿ ತಜ್ಞರು, ಉದ್ಯೋಗ ನಿಪುಣರು ಭಾಗವಹಿಸಲಿದ್ದಾರೆ. ಇದು ಕನ್ನಡ ಭಾಷಾ ಮತ್ತು ಸಂಸ್ಕೃತಿಯ ಮಹಾ ಉತ್ಸವವಾಗಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಮ್ಮೇಳನದ ಹೆಚ್ಚಿನ ಮಾಹಿತಿಗಾಗಿ:
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಥವಾ ವಿಶ್ವ ಕನ್ನಡಿಗರ ಟ್ರಸ್ಟ್‌ನೊಂದಿಗೆ ಸಂಪರ್ಕ ಸಾಧಿಸಬಹುದು.

City Today News 9341997936