ದಿನಾಂಕ 19/01/2024 ರಂದು ಬೆಂಗಳೂರಿನಿಂದ ಬೆಳಗಾವಿ ಮಹಾರಾಷ್ಟ್ರ ಗಡಿಯವರೆಗೆ ಅಲೆಮಾರಿ ಸಮುದಾಯದ ಸಂಘಟನೆಗಳ ಬೆಂಬಲದೊಂದಿಗೆ ಶಾಂತಿಯುತವಾಗಿ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ

ದಿನಾಂಕ 19/01/2024 ರಂದು ಬೆಂಗಳೂರಿನಿಂದ ಬೆಳಗಾವಿ ಮಹಾರಾಷ್ಟ್ರ ಗಡಿಯವರೆಗೆ ಅಲೆಮಾರಿ ಸಮುದಾಯದ ಸಂಘಟನೆಗಳ ಬೆಂಬಲದೊಂದಿಗೆ ಶಾಂತಿಯುತವಾಗಿ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿರುವ ಕುರಿತು.

Press meet held at press club of Bangalore

ದಿನಾಂಕ 19/01/2024 ರಂದು ಬೆಂಗಳೂರಿನಿಂದ ಬೆಳಗಾವಿ ಮಹಾರಾಷ್ಟ್ರ ಗಡಿಯವರೆಗೆ ಅಲೆಮಾರಿ ಸಮುದಾಯದ ಸಂಘಟನೆಗಳ ಬೆಂಬಲದೊಂದಿಗೆ ಶಾಂತಿಯುತವಾಗಿ ಬೇಡಿಕೆಗಳನ್ನ ಈಡೇರಿಸುವಂತೆ ಸಮೃದ್ಧಿ ಸೇವಾ ಸಂಸ್ಥೆಯ ವತಿಯಿಂದ ಪಾದಯಾತ್ರೆ ಗೊಳ್ಳಲಾಗಿದೆ.

ಬೆಂಗಳೂರಿನಿಂದ ಮಹಾರಾಷ್ಟ್ರಗಡಿವರೆಗೂ ಪಾದಯಾತ್ರೆ

1. ಅಲೆಮಾರಿಗಳಿಗೆ ಕರ್ನಾಟಕ ಸರ್ಕಾರದಲ್ಲಿ ಆದ್ಯತೆ ನೀಡಿ ಅಲೆಮಾರಿ ಆಯೋಗ ರಚನೆ ಮಾಡಬೇಕು.

2. ಅಲೆಮಾರಿ ಜನಾಂಗದ ವಸತಿ ರಹಿತರಿಗೆ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಅನುದಾನದಲ್ಲಿ ಕನಿಷ್ಠ ಐದು ಲಕ್ಷಗಳ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವುದು.

3. ಅಲೆಮಾರಿಗಳ ಏಳಿಗೆಗಾಗಿ ಹೆಚ್ಚಿನ ಆದ್ಯತೆ ನೀಡಿ ವಿವಿಧ ಯೋಜನೆಯಡಿ ನಿಗಮಗಳಿಗೆ ಅನುದಾನ ಹೆಚ್ಚಿಸಬೇಕು.

4. ಅಲೆಮಾರಿಗಳ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ಪಟ್ಟಿಯ ಒಂದೇ ಜಾತಿಯ ಪರ್ಯಾಯ ಪದಗಳನ್ನು ಬೇರ್ಪಡಿಸಿರುವುದರಿಂದ ರಾಜ್ಯದಲ್ಲಿ ಜಾತಿ ಗೊಂದಲಗಳ ಸಮಸ್ಯೆ ಉಲ್ಬಣವಾಗಿರುವುದನ್ನು ತಪ್ಪಿಸಲು ಜಾತಿ ಪ್ರಮಾಣ ಪತ್ರದ ಕುರಿತು ಪರ್ಯಾಯ ಪದಗಳನ್ನು ಒಂದು ಮಾಡಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು.

ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಪತ್ರ ನೀಡಿದ್ದರು ಯಾವುದೇ ಪ್ರತಿಫಲ ಸಿಕ್ಕಿರುವುದಿಲ್ಲ ಆದ್ದರಿಂದ ದಿನಾಂಕ 19/01/2024 ರಂದು ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಿಂದ ಮಹಾರಾಷ್ಟ್ರಗಡಿವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ದಯಮಾಡಿ ಈ ಒಂದು ಬೇಡಿಕೆಗಳು ಸರಿ ಇದೆ ಎಂದು ತಿಳಿದಿದ್ದು ಎಲ್ಲಾ ಸಂಘಟನೆಗಳು ನಮ್ಮ ಈ ಪಾದಯಾತ್ರೆಗೆ ಸಹಕರಿಸಿ ಎಂದು ಕೋರಿಕೊಳ್ಳುತ್ತೇನೆ ಎಂದು ಬಿ.ಹೆಚ್.ಮಂಜುನಾಥ್,ಸಂಸ್ಥಾಪಕ ಅಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ತಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News 9341997936