
ಬೆಂಗಳೂರು: ಬೆಂಗಳೂರಿನಲ್ಲಿ ದೇಶದ ಪ್ರಥಮ ಅತಿ ದೊಡ್ಡ ಬೀಚ್ ಟೌನ್ ಶಿಪ್ ಯೋಜನೆಗೆ ಚಾಲನೆ ದೊರೆತಿದೆ.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಮೀಪದ ದೊಡ್ಡ ಬಳ್ಳಾಪುರ ರಸ್ತೆಯಲ್ಲಿ ಐದು ನೂರು ಎಕರೆ ವಿಶಾಲ ಪ್ರದೇಶದಲ್ಲಿ ಈ ಬೃಹತ್ ಕೃತಕ ಬೀಚ್ ಟೌನ್ ಶಿಪ್ ನಿರ್ಮಾಣ ಆಗಲಿದೆ.
ಚಾಂಪಿಯನ್ ಇನ್ಫ್ರಾಟೆಕ್ ನ, ” ಒನ್ ಇನ್ ಮಿಲಿಯನ್” ಯೋಜನೆ ಇದಾಗಿದೆ.
ಆಕರ್ಷಕ ಸಮುದ್ರ ತೀರ ರೂಪಿಸಿ, ಅದಕ್ಕೆ ಹೊಂದಿಕೊಂಡಂತೆ ಮನೆಗಳನ್ನು ನಿರ್ಮಿಸಲಾಗುತ್ತಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾತನಾಡಿದ ಚಾಂಪಿಯನ್ ಇನ್ಫ್ರಾಟೆಕ್ ಸಂಸ್ಥೆಯ ಉಪ ನಿರ್ದೇಶಕ ಮೊಹಮ್ಮದ್ ಮಿನ್ಹಾಜ್, ಮಾಧ್ಯಮ ವರ್ಗದವರ ಕೈಗೆಟಕುವ ದರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶ್ವ ಗುಣಮಟ್ಟದ ಕೃತಕ ಬೀಚ್ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಈ ಪರಿಸರ ಸ್ನೇಹಿ ಯೋಜನೆಯಲ್ಲಿ ಎಲ್ಲಾ ಅಗತ್ಯ ಹಾಗೂ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಚಾಂಪಿಯನ್ ಇನ್ಫ್ರಾಟೆಕ್ ಸಂಸ್ಥೆಯ ಒನ್ ಇನ್ ಮಿಲಿಯನ್ ಯೋಜನೆಯ ನಿರ್ದೇಶಕ ಸುಧಾಕರ್ ರಾವ್ ಸುರಪನೇನಿ ಯೋಜನೆಯ ವಿವರ ನೀಡಿ, ಉತ್ತಮ ಹವಾಮಾನ ಹೊಂದಿರುವ ಬೆಂಗಳೂರಿನಲ್ಲಿ ಸುಂದರ ಬೀಚ್ ನಿರ್ಮಾಣ ಆಗಲಿದೆ.
ವಿಶ್ವ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿ ಈ ಕೃತಕ ಬೀಚ್ ನಿರ್ಮಾಣ ಮಾಡಲಾಗುತ್ತಿದೆ.
ಇದು ಜನರಿಗೆ ವಿಶೇಷ ಅನುಭವ ನೀಡಲಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಚಾಂಪಿಯನ್ ಇನ್ಫ್ರಾಟೆಕ್ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹಮದ್, ಮಹಿಳಾ ನಿರ್ದೇಶಕಿ ಹೇಮಾಮಾಲಿನಿ ನಿಡಮನೂರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
City Today News – 9341997936

You must be logged in to post a comment.