ನಗರದಲ್ಲಿ ‘ಇಎಲ್‍ಸಿಎ ಟೆಕ್ ಸಮ್ಮೇಳನ-2024’ ಉದ್ಘಾಟನೆ



‘ಇಎಲ್‍ಸಿಎ ಟೆಕ್ ಸಮ್ಮೇಳನ-2024’ ಉದ್ಘಾಟನೆ




ಬೆಂಗಳೂರು: ಜೂನ್ 6,
ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿನ ನವೀನ ಮತ್ತು ಗಮನಾರ್ಹ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಬಳಕೆ ಕುರಿತು ವಿಚಾರ ವಿನಿಮಯದ ಜೊತೆಗೆ ನಮ್ಮ ಕಂಪನಿಗಳು ಕೂಡ ಆ ಧಿಕ್ಕಿನಲ್ಲಿ ಸಾಗಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್(ಇಎಲ್‍ಸಿಐಎ) ವತಿಯಿಂದ ನಗರದಲ್ಲಿ ಮೊಟ್ಟ ಮೊದಲ ಬಾರಿ ‘ಇಎಲ್‍ಸಿಐಎ ಟೆಕ್ ಸಮ್ಮೇಳನ-2024’ ಆಯೋಜಿಸಲಾಗಿದೆ.

ಜೂನ್ 7ರಂದು ನಗರದ ಶಾಂಗ್ರಿ-ಲಾ ಹೊಟೇಲ್‌ನಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಗತ್ತನ್ನು ಅತಿ ವೇಗವಾಗಿ ಪ್ರವೇಶಿಸುತ್ತಿರುವ ನವೀನವಾದ ತಂತ್ರಜ್ಞಾನಗಳ ಕುರಿತು ವಿವಿಧ ಕ್ಷೇತ್ರಗಳ ನಾಯಕರ ಅಭಿಪ್ರಾಯಗಳು ಮತ್ತು ವಿಚಾರ ವಿನಿಮಯವನ್ನು ಕೇಳಿಸಿಕೊಳ್ಳುವ ಅವಕಾಶ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ದೊರೆಯಲಿದೆ. ಸಮ್ಮೇಳನಕ್ಕೆ ಬಂದವರು ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಸಕ್ರಿಯವಾಗಿ ತಮ್ಮ ವಿಚಾರ ವಿನಿಯಮ ಮಾಡಿಕೊಳ್ಳಬಹುದು. ತಂತ್ರಜ್ಞಾನ ಯಾವ ರೀತಿ ಬದಲಾಗುತ್ತಿದೆ, ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದರ ಅನುಭವವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುವ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಟಿ ಉದ್ಯಮಗಳ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅದರ ಜೊತೆಗೆ ಪಾಲುದಾರ ಸಂಸ್ಥೆಗಳು ಮತ್ತು ತಜ್ಞರು ಭಾಷಣ ಮಾಡುತ್ತಾರೆ.

*ಸಮ್ಮೇಳನ ಕುರಿತು:* ಇಎಲ್‍ಸಿಐಎ ತಂತ್ರಜ್ಞಾನ ಸಮ್ಮೇಳನ 2024 ವಿಭಿನ್ನವಾಗಿರಲಿದ್ದು, ತಂತ್ರಜ್ಞಾನ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವ ನವೀನ ತಂತ್ರಜ್ಞಾನಗಳು ಅದಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳು ಮತ್ತು ಕ್ಷೇತ್ರದ ಬೆಳವಣಿಗೆಗೆ ಇರುವ ಅವಕಾಶಗಳು ಕುರಿತು ಪ್ರಮುಖವಾಗಿ ಬೆಳಕು ಚೆಲ್ಲಲಿದೆ. ಹೊಸ ಹೊಸ ಆಲೋಚನೆಗಳು ಮತ್ತು ನಾವಿನ್ಯತೆಗಳ ಮೂಲಕ ಮಹತ್ತರ ಬದಲಾವಣೆ ಉಂಟು ಮಾಡುವ ತಂತ್ರಜ್ಞಾನ ಬಳಕೆಗೆ ಕಿಡಿ ಹೊತ್ತಿಸುವ ವಿಚಾರಗಳು ಮಂಡನೆಯಾಗಲಿವೆ. ಸಮ್ಮೇಳನದಲ್ಲಿ ಐಟಿ ವಲಯದ ಪಾಲುದಾರರಾದ ಐಇಎಸ್ಎ (ಇಂಡಿಯಾ ಎಲೆಕ್ಟ್ರಾನಿಕ್ಸ್ ಆಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್), ಐಐಐಟಿಬಿ (ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಅಫ್ ‌ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು) ಎಆರ್‌ಟಿ-ಪಾರ್ಕ್, (ಎಐ ಮತ್ತು ರೊಬೋಟಿಕ್ಸ್ ಟೆಕ್ನಾಲಜಿ ಪಾರ್ಕ್ ಐಐಎಸ್ಸಿ, ಐಎನ್‌ಕೆ ಟಾಕ್ಸ್ ಮತ್ತು ಇಎಲ್‌ಸಿಐಟಿಎ (ಎಲೆಕ್ಟ್ರಾನಿಕ್ಸ್ ಸಿಟಿ ಟೌನ್‌ಶಿಪ್ ಅಥಾರಿಟಿ) ಭಾಗವಹಿಸುತ್ತಿವೆ.

ಇಎಲ್‌ಸಿಐಎ ತಂತ್ರಜ್ಞಾನ ಸಮ್ಮೇಳನವು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಲಿದೆ.

ಇಎಲ್‌ಸಿಐಎ ಅಧ್ಯಕ್ಷರಾದ ಶ್ರೀರಾಮ್ ಕುಮಾರ್ ಅವರು ಸಮ್ಮೇಳನದ ಕುರಿತು ಮಾತನಾಡಿ, ‘ನಾವೀನ್ಯತೆ, ಸಹಭಾಗಿತ್ವ ಮತ್ತು ಅಭಿವೃದ್ಧಿ ಆಗಬೇಕು ಎನ್ನುವ ನಮ್ಮ ಗುರಿ ಮತ್ತು ಉದ್ದೇಶಕ್ಕೆ ಈ ಸಮ್ಮೇಳನ ಬಹುದೊಡ್ಡ ಹೆಜ್ಜೆ ಆಗಲಿದೆ. ನಮ್ಮ ಪಾಲುದಾರರು ಮತ್ತು ಉದ್ಯಮ ನಾಯಕರುಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಸಮ್ಮೇಳನವು ತಂತ್ರಜ್ಞಾನ ವಲಯದಲ್ಲಿ ಹೊಸ ಮೈಲುಗಲ್ಲು ನಿರ್ಮಿಸುವ ವಿಶ್ವಾಸವಿದೆ. ತಂತ್ರಜ್ಞಾನದ ಮೂಲಕ ಸಬಲವಾದ ಭವಿಷ್ಯವನ್ನು ಕಟ್ಟಲು ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ತಂತ್ರಜ್ಞಾನ ವಲಯದ ನಾಯಕರನ್ನು ಸಮ್ಮೇಳನಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ.


*ಕಾರ್ಯಕ್ರಮದ ವಿವರಗಳು:*

*ದಿನಾಂಕ: ಜೂನ್ 7, 2024*

*ಸಮಯ : ಸಂಜೆ 6: 30ರಿಂದ 9 ಗಂಟೆ*

*ಸ್ಥಳ: ಶಾಂಗ್ರಿ-ಲಾ ಹೊಟೇಲ್, ಬೆಂಗಳೂರು*

City Today News 9341997936