
ಬೆಂಗಳೂರು, ಏಪ್ರಿಲ್ 11:
ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತವಾಗಿ ಏಪ್ರಿಲ್ 12 ರಿಂದ 14 ರವರೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಶ್ರೀಮುನಿ ವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ “ನಮ್ಮ ಬೆಳೆಗೆ ನಮ್ಮದೇ ಬೆಲೆ” ಎಂಬ ನೇರ ಮಾರಾಟ ಮೇಳವನ್ನು ಆಯೋಜಿಸಿದ್ದಾರೆ.
ಈ ಮೇಳದಲ್ಲಿ ರೈತರು ನೇರವಾಗಿ ತಾವು ಬೆಳೆದ ತರಕಾರಿ, ಹಣ್ಣುಗಳು, ಅಕ್ಕಿ, ಬೇಳೆ, ಸಿಧಾನ್ಯಗಳು, ಕೊಬ್ಬರಿ, ಬೆಲ್ಲ, ಗಾಣದ ಎಣ್ಣೆ ಮುಂತಾದ ಆಹಾರ ಸಾಮಗ್ರಿಗಳನ್ನು ಮಾರಾಟ ಮಾಡಲಿದ್ದಾರೆ. ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ಸಂಪರ್ಕದ ಮೂಲಕ ನ್ಯಾಯಯುತ ಬೆಲೆಯಲ್ಲಿ ಖರೀದಿ ಸಾಧ್ಯವಾಗಲಿದೆ.
ರೈತರ ಹಿತವನ್ನು ಕಾಪಾಡುವ ಜೊತೆಗೆ ಗ್ರಾಹಕರಿಗೂ ತಾಜಾ ಮತ್ತು ರಾಸಾಯನಿಕರಹಿತ ಆಹಾರ ದೊರಕಿಸಿಕೊಡುವ ಉದ್ದೇಶವಿರುವ ಈ ಮೇಳದಲ್ಲಿ ರಾಜರಾಜೇಶ್ವರಿ ನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರೈತ ಸಂಘ ಮನವಿ ಮಾಡಿದೆ.
City Today News 9341997936

You must be logged in to post a comment.