ನೂದಿರಾ ಯೂನಿಸೆಕ್ಸ್ ಸಲೂನ್ ಕೋರಮಂಗಲದಲ್ಲಿ ತನ್ನ ಹೊಸ ಶಾಖೆ ಮತ್ತು ಮೇಕಪ್ ಅಕಾಡೆಮಿಯ ಅದ್ಧೂರಿ ಪ್ರಾರಂಭ


ಬೆಂಗಳೂರು, ಡಿಸೆಂಬರ್ 8, 2023: ಬೆಂಗಳೂರು ಮೂಲದ ಮುಂಚೂಣಿಯ ಸಲೂನ್ ಸರಣಿ ನೂದಿರಾ ಯೂನಿಸೆಕ್ಸ್ ಸಲೂನ್ ಡಿಸೆಂಬರ್ 8, 2023ರಂದು ಕೋರಮಂಗಲದಲ್ಲಿ ತನ್ನ ಹೊಸ ಶಾಖೆಯ ಹಾಗೂ ಇಂಟರ್ನ್ಯಾಷನಲ್ ಮೇಕಪ್ ಅಕಾಡೆಮಿಯ ಅದ್ಧೂರಿ ಪ್ರಾರಂಭ ಮಾಡಿದೆ.
ನೂದಿರಾ ಯೂನಿಸೆಕ್ಸ್ ಸಲೂನ್ ‍ಖ್ಯಾತ ಸೆಲೆಬ್ರಿಟಿ ಮೇಕಪ್ ಕಲಾವಿದೆ ನಾದಿರಾ ನಾಯರ್ ಅವರ ಕನಸಿನ ಕೂಸಾಗಿದ್ದು ಅವರಿಗೆ ಬ್ಯೂಟಿ ಮತ್ತು ಮೇಕಪ್ ಉದ್ಯಮದಲ್ಲಿ ಮೂರು ದಶಕಗಳ ಅನುಭವವಿದ್ದು ನಗರದಾದ್ಯಂತ ಸಲೂನ್ ಸರಣಿ ಪ್ರಾರಂಭಿಸಿದ್ದಾರೆ.

ಈ ಸಲೂನ್ ಅನ್ನು ಕನ್ನಡ ಚಿತ್ರರಂಗದ ಖ್ಯಾತ ನಟಿ ಧನ್ಯಾ ರಾಮ್ ಕುಮಾರ್ ಮತ್ತು ಖ್ಯಾತ ನಟ ಸೂರಜ್ ಗೌಡ ಅವರು ಉದ್ಘಾಟಿಸಿದರು. ಉದ್ಘಾಟನೆಯ ನೂದಿರಾ ಯೂನಿಸೆಕ್ಸ್ ಸಲೂನ್ಸ್ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ನಾದಿರಾ ನಾಯರ್, “ಪ್ರತಿಯೊಬ್ಬರೂ ಸುಂದರವಾಗಿರುತ್ತಾರೆ. ನೂದಿರಾ ಸಲೂನ್ ವ್ಯಕ್ತಿಗಳನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುವುದಲ್ಲದೆ ವಿಶ್ವಾಸದಿಂದ ಇರುವಂತೆಯೂ ಮಾಡುತ್ತದೆ. ಪ್ರತಿಯೊಬ್ಬರೂ ಅವರ ದೇಹವನ್ನು ಪ್ರೀತಿಸಬೇಕು, ಗೌರವಿಸಬೇಕು ಮತ್ತು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಅದು ದೇವರ ಉಡುಗೊರೆ ಮತ್ತು ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಅವರಿಗೆ ನೆರವಾಗುತ್ತೇವೆ” ಎಂದರು.
ನೂದಿರಾ ಯೂನಿಸೆಕ್ಸ್ ಸಲೂನ್ ತನ್ನ ಗ್ರಾಹಕರಿಗೆ ಅಂತಾರಾಷ್ಟ್ರೀಯ ಮತ್ತು ಭಾರತೀಯ ಸ್ಪರ್ಶದ ವಿಶಿಷ್ಟ ಸೇವೆಗಳ ಸಂಯೋಜನೆ ನೀಡುತ್ತದೆ. ಸಲೂನ್ ನ ಕೋರಮಂಗಲ ಶಾಖೆಯಲ್ಲಿ 20 ಮಂದಿ ತರಬೇತಿ ಹೊಂದಿದ ಸಿಬ್ಬಂದಿ ಇದ್ದು ಅವರಿಗೆ ಬ್ಯೂಟಿ ಉದ್ಯಮದಲ್ಲಿ ಹಲವಾರು ವರ್ಷಗಳ ಅನುಭವವಿದ್ದು ಅವರು ಗ್ರಾಹಕರಿಗೆ ಅಗತ್ಯವಿರುವ ಸೊಗಸು ಮತ್ತು ಗುಣಮಟ್ಟ ನೀಡುತ್ತಾರೆ. ಮುಂಚೂಣಿಯ ಜಾಗತಿಕ ಚರ್ಮದ ಆರೈಕೆ ಮತ್ತು ಮೇಕಪ್ ಬ್ರಾಂಡ್ ಗಳನ್ನು ಬಳಸುವುದಲ್ಲದೆ ನೂದಿರಾ ಚರ್ಮ ಸ್ನೇಹಿ ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ಸೌಂದರ್ಯದ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ.

ಅಲ್ಲದೆ ಕೋರಮಂಗಲ ಶಾಖೆಯ ಮೇಕಪ್ ಅಕಾಡೆಮಿಯು ಉದಯೋನ್ಮುಖ ಬ್ಯೂಟಿಷಿಯನ್ನರಿಗೆ ವೃತ್ತಿಪರ ಮೇಕಪ್ ಕಲಾವಿದರಾಗಲು ಜ್ಞಾನ, ತಂತ್ರಗಳು ಮತ್ತು ವಿಶ್ವಾಸವನ್ನು ಮೂಡಿಸುತ್ತದೆ. “ಮೇಕಪ್ ಎನ್ನುವುದು ಒಂದು ಪೇಂಟಿಂಗ್ ಇದ್ದಂತೆ. ಅದು ವ್ಯಕ್ತಿಯ ಚರ್ಮದ ವಿಧ, ಬಣ್ಣ ಮತ್ತು ರಚನೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವರ ಸೌಂದರ್ಯವನ್ನು ಹೆಚ್ಚಿಸುವುದು. ನೂದಿರಾ ಮೇಕಪ್ ಅಕಾಡೆಮಿಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಾಮುಖ್ಯತೆ ನೀಡಲಾಗುತ್ತದೆ ಮತ್ತು ಅದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತದೆ. ನಮ್ಮ ತರಬೇತಿ ಹೊಂದಿದ ಬ್ಯೂಟಿಷಿಯನ್ನರ ಸಮೂಹವು ಸೌಂದರ್ಯದ ಕ್ಷೇತ್ರದಲ್ಲಿ ಅತ್ಯುತ್ತಮ ಪರಿಣಿತಿ ಹೊಂದಿದ್ದು ಇದರಿಂದ ಅವರು ವಿಶ್ವದಲ್ಲಿ ಎಲ್ಲಿಯೇ ಆದರೂ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡಿ ತಮ್ಮದೇ ಆದ ಹೆಗ್ಗುರುತು ಮೂಡಿಸಬಹುದು” ಎಂದರು.
ಈ ಸಲೂನ್ ಪ್ರತಿ ವೈಯಕ್ತಿಕ ಗ್ರಾಹಕನಿಗೂ ವೈಯಕ್ತಿಕಗೊಳಿಸಿದ ಮತ್ತು ವಿಶೇಷವಾಗಿ ರೂಪಿಸಿದ ಸೇವೆಗಳನ್ನು ನೀಡುವ ಮೂಲಕ ಸೌಂದರ್ಯ ಉದ್ಯಮದಲ್ಲಿ ಹೊಸ ಮೈಲಿಗಲ್ಲು ಪ್ರಾರಂಭಿಸುವ ಗುರಿ ಹೊಂದಿದೆ. “ಪ್ರತಿ ಗ್ರಾಹಕರಿಗೂ ವಿಭಿನ್ನ ರೀತಿಯ ಚಿಕಿತ್ಸೆ ಅಗತ್ಯವಾಗುತ್ತದೆ. ನಮ್ಮ ಸೇವೆಯಲ್ಲಿ ಪ್ರಮುಖ ವ್ಯತ್ಯಾಸವೆಂದರೆ ನಾವು ನಮ್ಮ ಗ್ರಾಹಕರನ್ನು ಅವರ ದೇಹ, ಚರ್ಮ ಮತ್ತು ಕೂದಲಿನ ವಿಧ ಆಧರಿಸಿ ಅವರಿಗೆ ವಿಶಿಷ್ಟ ಚಿಕಿತ್ಸೆ ನೀಡುತ್ತೇವೆ” ಎಂದು ನಾದಿರಾ ಹೇಳಿದರು.
ನಾದಿರಾ ಅವರು 2015ರಲ್ಲಿ ದೆಹಲಿಯಲ್ಲಿ ತಮ್ಮ ಮೊದಲ ಸಲೂನ್ ತೆರೆದರು. ತಮ್ಮ ಉದ್ಯಮಶೀಲತೆಯ ಕೌಶಲ್ಯಗಳಿಂದ ಅವರು ತಮ್ಮ ಉದ್ಯಮವನ್ನು ಬೆಂಗಳೂರಿನಲ್ಲಿ ವಿಸ್ತರಿಸಿದ್ದು ವೈಟ್ ಫೀಲ್ಡ್ ಮತ್ತು ಇಂದಿರಾನಗರಗಳಲ್ಲಿ ಶಾಖೆ ತೆರೆದಿದ್ದು ಭವಿಷ್ಯದಲ್ಲಿ ಅಖಿಲ ಭಾರತ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ.
ಕಂಪನಿಯ ಕುರಿತು:
ನೂದಿರಾ ಯೂನಿಸೆಕ್ಸ್ ಸಲೂನ್ ಬೆಂಗಳೂರು ಮೂಲದ ಮುಂಚೂಣಿಯ ಸಲೂನ್ ಸರಣಿಯಾಗಿದ್ದು ಕೈಗೆಟುಕುವ ದರಗಳಲ್ಲಿ ಐಷಾರಾಮಿ ಬ್ಯೂಟಿ ಚಿಕಿತ್ಸೆಗಳನ್ನು ನೀಡುತ್ತದೆ. ಈ ಸಲೂನ್ ಖ್ಯಾತ ಮೇಕಪ್ ಕಲಾವಿದೆ ಮತ್ತು ನೂದಿರಾ ಯೂನಿಸೆಕ್ಸ್ ಸಲೂನ್ಸ್ ನ ವ್ಯವಸ್ಥಾಪಕ ನಿರ್ದೇಶಕಿ ನಾದಿರಾ ನಾಯರ್ ಅವರ ಕನಸಿನ ಕೂಸಾಗಿದೆ. ಅವರಿಗೆ ಕೂದಲು, ಚರ್ಮ, ಕೈಗಳು ಮತ್ತು ಪಾದ, ಹೇರ್ ಸ್ಟೈಲಿಸ್ಟ್ ಮತ್ತು ಮೇಕಪ್ ನಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು ಅತ್ಯುತ್ತಮ ಉತ್ಪನ್ನಗಳು, ಉತ್ತಮ ಸೌಲಭ್ಯಗಳು ಮತ್ತು ವೃತ್ತಿಪರವಾಗಿ ತರಬೇತಿ ಪಡೆದ ಸಿಬ್ಬಂದಿ ಹೊಂದಿದ್ದಾರೆ. ನೂದಿರಾದ ಸಲೂನ್ ಗಳ ಸರಣಿಯು ಸೌಂದರ್ಯ ಮತ್ತು ಸ್ಟೈಲಿಂಗ್ ಸೇವೆಗಳ ಸೃಜನಶೀಲ ಸಂಯೋಜನೆ ಹೊಂದಿದ್ದು ಅಸಾಧಾರಣ ಹಿನ್ನೆಲೆಯಲ್ಲಿ ಹೊಂದಿದೆ. ಈ ಸಲೂನ್ ಬೆಂಗಳೂರಿನ ಪ್ರಮುಖ ತಾಣಗಳಲ್ಲಿ ಮೂರು ಔಟ್ ಲೆಟ್ ಗಳನ್ನು ಹೊಂದಿದೆ.

City Today News 9341997936