ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರಧಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಮಾದಿಗ, ಛಲವಾದಿ, ತ್ರಿಮತಸ್ಥ ಚರ್ಮಕಾರರು, ಅಲೆಮಾಲಿ ಸಮುದಾಯಗಳ ಬೃಹತ್‌ ಸಮಾವೇಶ!

ದಿನಾಂಕ: 11/12/2022 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಲಕ್ಷಾಂತರ ಜನ ಸಾಮಾಜಿಕ ನ್ಯಾಯಕ್ಕಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಹೋರಾಟ ಮಾಡಲಾಯಿತು. ಸರ್ಕಾರ ಈ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕಾರಣಕ್ಕೆ, ದಿನಾಂಕ: 12/12/2022 ರಂದು ಅನಿರ್ಧಿಷ್ಟ ಅವಧಿಯ ಧರಣಿ ಸತ್ಯಾಗ್ರಹವನ್ನು ಫ್ರೀಡಂ ಪಾರ್ಕ್‌ನ ಮುಂದುವರಿಸಿದ್ದು ಇಲ್ಲಯವರೆವಿಗೂ 61 ದಿನ ಮುಗಿದಿದ್ದು, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಮಾಡದ ಪರಿಶಿಷ್ಟ ಜಾತಿಗಳನ್ನು ನಿರ್ಲಕ್ಷಿಸಿದೆ.

ಆದ್ದರಿಂದ ಸರ್ಕಾರದ ವಿರುದ್ಧ ದಿನಾಂಕ: 14/02/2023 ರಂದು ಬೃಹತ್ ಸಮಾವೇಶವನ್ನು ಮಾದಿಗ, ಛಲವಾದಿ, ತ್ರಿಮತಸ್ಥ ಚರ್ಮಕಾರರು, ಅಲೆಮಾರಿ ಸಮುದಾಯಗಳು ಆಯೋಜಿಸಿದ್ದು ನಮ್ಮ ಹಕ್ಕೊತ್ತಾಯಗಳಾದ

* ನ್ಯಾ – ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಫಾರಸ್ಸು ಮಾಡಬೇಕು ಮತ್ತು ಕೇಂದ್ರ ಸರ್ಕಾರವು ಅನುಚ್ಛೇದ 341(3) ಕೈ ಕೂಡಲೇ ತಿದ್ದುಪಡಿ ಮಾಡಬೇಕು.

* ತ್ರಿಮತಸ್ಥರಿಗೆ (ಮೋಚಿ, ಡೋಹಾರ, ಸಮಗಾರ) ಅಭಿವೃದ್ಧಿ ನಿಗಮವನ್ನು ಕೂಡಲೇ ಸ್ಥಾಪಿಸಬೇಕು.

* ಹಿಂದುಳಿದ ವರ್ಗಗಳ ಕಾಂತರಾಜ ವರದಿಯನ್ನು ಬಹಿರಂಗ ಮಾಡಿ ಯತಾವತ್ತಾಗಿ ಜಾರಿ ಮಾಡಬೇಕು.

* ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹು ಸಂಖ್ಯಾತರಾಗಿರುವ ಮಾದಿಗ ಮತ್ತು ಛಲವಾದಿಗಳ ಜನಸಂಖ್ಯೆಗೆ ತಕ್ಕಂತೆ ತಲಾ 15 ರಾಜಕೀಯ ಪ್ರಾತಿನಿಧ್ಯ ಕಟ್ಟಸಬೇಕು. ಕರ್ನಾಟಕ ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂಗೊಳಿಸಬೇಕು.

* ನ್ಯಾ. ಎ.ಜೆ.ಸದಾಶಿವ ಆಯೋಗದ ಪರ ಹೋರಾಟಗಾರರ ಮೇಲೆ ಹೂಡಿದ ರೌಡಿಶೀಟ್ ಪ್ರಕರಣಗಳನ್ನು ರದ್ದುಪಡಿಸಬೇಕು ಮತ್ತು ದಲತ ಸಂಘಟನೆಯ ಮುಖಂಡತರ ಮೇಲೆ ದಾಖಲಾದ ಎಲ್ಲಾ ಕ್ರಿಮಿನಲ್‌ ಪ್ರಕರಣಗಳನ್ನು ರದ್ದುಪಡಿಸಬೇಕು.

* ಪರಿಶಿಷ್ಟ 6+5+3+1 ಜಾತಿಗಳು ಹಂಚಿಕೆ (SCSA) ಅನುದಾನವನ್ನು ಒಳಮೀಸಲಾತಿ ಸೂತ್ರದಂತೆ ಹಂಚಿಕೆ – ಮಾಡಬೇಕು. ಮತ್ತು (SCSA) : ಅನುದಾನ ದುರುಪಯೋಗಕ್ಕೆ ಕಾರಣವಾದ 7(B), 7(C) & 7(D) ಯನ್ನು ತೆಗೆದು ಹಾಕಬೇಕು ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ವತಿಯಿಂದ ಒತ್ತಾಯಿಸಲಾಗುವುದು.

ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಆರ್.ಮೋಹನ್ ಋಆಜ್, ಎಸ್.ಮಾರಪ್ಪ ಮತ್ತು ಗುರುರಾಜ್ ಬೇಡಿಕರ್ ಹಾಜರಿದ್ದರು

City Today News – 9341997936

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ದ.ಸಂಸ, ಮತ್ತು RPI(B) ವತಿಯಿಂದ “ಬೆಳಗಾವಿ ಚಲೋ”

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ದ.ಸಂಸ, ಮತ್ತು RPI(B) ವತಿಯಿಂದ “ಬೆಳಗಾವಿ ಚಲೋ” ಹಮ್ಮಿಕೊಂಡಿದೆ.

101 ಪರಿಶಿಷ್ಟ ಜಾತಿಗಳಿಗೆ ನೀಡುತ್ತಿರುವ ಮೀಸಲಾತಿ ಈ ಜಾತಿಗಳ ಮಧ್ಯೆ ಸಮನಾಗಿ ಹಂಚಿಕೆ ಆಗಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿಗಳ ಜನರ ಅಸಹನೆ, ಅಸಮಧಾನ ಉಂಟಾಗಿ ಕಳೆದ 30 ವರ್ಷಗಳಿಂದ ಪರಿಶಿಷ್ಟ ಮೀಸಲಾತಿಗಾಗಿ ಒತ್ತಾಯಿಸಿ ತೀವ್ರ ಹೋರಾಟ ನಡೆಯುತ್ತಿದೆ.

ರಾಜ್ಯ ಸರ್ಕಾರ ಚಳುವಳಿಗಾರರೊಂದಿಗೆ ಚರ್ಚಿಸಿ ಪರಿಶಿಷ್ಟ ಮೀಸಲಾತಿ ವರ್ಗೀರಕಣಕ್ಕಾಗಿ 2005 ರಲ್ಲಿ ನಿ.ನ್ಯಾ.ಎ.ಜೆ. ಸದಾಶಿವ ಆಯೋಗ ರಚಿಸಿತು. ಆಯೋಗ 2012ರಲ್ಲಿ ರ್ಸಾರಕ್ಕೆ ವರದಿ ಸಲ್ಲಿಸಿತು. ಇಲ್ಲಿಗೆ 17ವರ್ಷ ಕಳೆದರೂ ಆಯೋಗದ ವರದಿಯನ್ನು ಸರ್ಕಾರ ಅಂಗೀಕರಿಸಿಲ್ಲ ಹಾಗೂ ಅನುಷ್ಠಾನಗೊಳಿಸಿಲ್ಲ. ಚುನಾವಣೆ ಸಂದರ್ಭದಲ್ಲಿ 2004ರಲ್ಲಿ ಜೆ.ಡಿ.ಎಸ್‌. 2008 ರಲ್ಲಿ ಬಿಜೆಪಿ ಹಾಗೂ 2013 ರಲ್ಲಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಗಳಲ್ಲಿ ಸೇರಿಸಿ ಸದಾಶಿವ ಆಯೋಗ ಜಾರಿಗೊಳಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೂ ಬಂದು ಪರಿಶಿಷ್ಟ ಜನಾಂಗಕ್ಕೆ ಮೋಸ ಮಾಡಿವೆ.

ಆದ್ದರಿಂದ 101 ಪರಿಶಿಷ್ಟ ಜಾತಿಗಳಲ್ಲಿ ತೀರ ಹಿದುಳಿದಿರುವ ಮಾದಿಗ ಮತ್ತು ಮಾದಿಗ ಸಂಬಂಧಿತ ಮಾತಂಗ, ಸಮಗಾರ, ಮೋಚಿ, ಮಚಗಾ ಮಾದರ, ಡೋಹರ ಮುಂತಾದ ಮಾದಿಗ ಸಂಬಂಧಿತ 49 ಅಸ್ಪೃಶ್ಯ ಜಾತಿಗಳಿಗೆ ಬಹಳ ಅನ್ಯಾಯವಾಗಿದೆ. ಅಲ್ಲದೆ ಭೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳು ಸಹ ಹಿಂದುಳಿದಿದ್ದು ಈ ಜಾತಿಯ ಬಂಧುಗಳ ಅಭಿವೃದ್ಧಿಗೆ ಸದಾಶಿವ ಆಯೋಗದಲ್ಲಿ ಶೇ.3 ರಷ್ಟು ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದೆ. ಆದರೆ ಮೀಸಲಾತಿ, ಪಟ್ಟಿಯಿಂದಲೇ ಕೈಬಿಡಲಾಗಿದೆ ಎಂಬುದು ಕಪೋಲ ಕಲ್ಪಿತವಾಗಿದೆ. ಇದು ಪರಿಶಿಷ್ಟರ ಏಕತೆ ಮತ್ತು ಸಮನ್ವಯತೆಗೆ ಧಕ್ಕೆಯಾಗಿರುತ್ತದೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿನ ಕೆಲವು ರಾಜಕೀಯ ಪಟ್ಟಭದ್ರ ಹಿತಶಕ್ತಿಗಳು ಸಾಮಾಜಿಕ ನ್ಯಾಯಕ್ಕಾಗಿ ಕೊಡಮಾಡಿದ ಮೀಸಲಾತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಸಂವಿಧಾನದ ಆಶಯನ್ನು ಭಗ್ನಗೊಳಿಸಿವೆ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಪರಿಕಲ್ಪನೆಗೆ ತಿಲಾಂಜಲಿ ಇಟ್ಟು ಸರ್ವಾಧಿಕಾರಿ ಧೋರಣೆ ತಾಳಿವೆ.

ರಾಜ್ಯ ಸರ್ಕಾರ ಚಳವಳಿಗಾರರ ಮೇಲೆ ಬಲಪ್ರಯೋಗ ಮಾಡಿ ಲಾಠಿಚಾರ್ಜ್ ಮಾಡಿ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಹಾಕಿ ಪರಿಶಿಷ್ಟರ ಹೋರಾಟವನ್ನು ದಮನ ಮಾಡುವ ಹುನ್ನಾರ ನಡೆಸಿವೆ.

ರಾಜ್ಯ ಮತ್ತು ಕೇಂದ್ರ ಸರ್ಕಾರ ಇದೇ ರೀತಿ ದಲಿತ ವಿರೋಧಿ ನೀತಿ ಮುಂದುವರಿಸಿದಲ್ಲಿ ಮತ್ತು ಪರಿಶಿಷ್ಟರ ಒಳ ಮೀಸಲಾತಿ ನೀಡದಿದ್ದಲ್ಲಿ, ಮುಂಬರುವ 2023 ವಿಧಾನಸಭೆ ಚುನಾವಣೆ ಹಾಗೂ 2024 ರಲ್ಲಿ ಜರುಗುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ತೀರ ಸೋಲು ಅನುಭವಿಸುವುದರಲ್ಲಿ ಅನುಮಾನವಿಲ್ಲ. ಅದೇ ರೀತಿ ಬಹುಜನರಿಗೆ ಸುಳ್ಳು ಭವಸೆ ನೀಡಿ ಓಟ್ ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್ ಧೂಳಿಪಟವಾಗಲಿದೆ.

ದ.ಸಂ.ಸ. ಮತ್ತು RPI(B) ದಿನಾಂಕ:20.12.2022ರಂದು ಬೆಳಗಾವಿ ಚಲೋ ನಡೆಸಿ ಬೆಳಗಾವಿಯ “ರಾಣಿ ಚನ್ನಮ್ಮ ವೃತ್ತದಿಂದ ಸುವರ್ಣಸೌಧದವರೆಗೆ” ಪರಿಶಿಷ್ಟರ ಒಳಮೀಸಲಾತಿ ಜಾರಿಗಾಗಿ ಸಾಮಾಜಿಕ ನ್ಯಾಯ ಸಂಕಲ್ಪ ಕ್ಯಾಲಿ” ನಡೆಸಲಾಗುವುದು, ಈ ಬೃಹತ್‌ ಪ್ರತಿಭಟನೆಯಲ್ಲಿ ರಾಜ್ಯದ 31 ಜಿಲ್ಲೆಗಳಿಂದ ಸಹಸ್ರಾರು ಜನರೂ ಆಗಮಿಸಿ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ಹಾಗೂ ಹೋರಾಟಗಾರರಿಗೆ ಮುಕ್ತ ಆಹ್ವಾನ ನೀಡಿದೆ. ಸದಾಶಿವ ಆಯೋಗದ ಜಾರಿಗೊಳಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು.

ಹಕ್ಕೊತ್ತಾಯಗಳು

ಬೆಳಗಾವಿಯಲ್ಲಿ ಡಿಸೆಂಬರ್ ನಿ.ನ್ಯಾ.ಎ.ಜೆ.ಸದಾಶಿವ 1980 ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಆಯೋಗದ ವರದಿ ಮಂಡಿಸಿ ಕೂಡಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿ. • ಕೇಂದ್ರ ಸರ್ಕಾರವು ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ಸಂವಿಧಾನದ ಅನುಚ್ಛೇದ

341(3)ಕ್ಕೆ ತಿದ್ದುಪಡಿ ತರಲಿ, • ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಶೇ.17 ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.7ರಷ್ಟು ಮೀಸಲಾತಿ ಹೆಚ್ಚಿಸಿರುವುದನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಒಪ್ಪಿ ಕೂಡಲೇ ಅನುಷ್ಟಾನಗೊಳಿಸಬೇಕು. ಪರಿಶಿಷ್ಟರ ಭೂಮಿ ಪರಭಾರೆ ಕಾಯ್ದೆ (PTCL ಕಾಯ್ದೆಗೆ ತಿದ್ದುಪಡಿ ತರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಹಣಕ್ಕೆ ಕನ್ನಹಾಕಲು ಅವಕಾಶವಿರುವ SCSP/TSP ಕಾಯ್ದೆಯ ಕ್ಲಾಸ್ 7D ಯನ್ನು ರದ್ದು ಮಾಡಲಿ ಎಂದು ಎನ್ ಮೂರ್ತಿ ರಾಷ್ಟ್ರೀಯ ಅಧ್ಯಕ್ಷರು RPI(B) ಹಾಗೂ ರಾಜ್ಯಾಧ್ಯಕ್ಷರು ದ.ಸಂ.ಸ ಎಂದು ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದರು.

City Today News – 9341997936

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ವಿಳಂಬ ಧೋರಣೆಯನ್ನು ಖಂಡಿಸಿ ದಿನಾಂಕ : 03-07-2022 ರಂದು “ಚಲೋ ಹೈದ್ರಾಬಾದ್ “

ಕರ್ನಾಟಕ ರಾಜ್ಯದಲ್ಲಿ ನಿರಂತರವಾಗಿ 25 ವರ್ಷಗಳಿಂದ ಭಾರತ ಸಂವಿಧಾನದ ಮೂಲ ಆಶಯ ಸರ್ವರಿಗೂ ಸಮಪಾಲು , ಸಮಬಾಳು ಎಂಬುದಾಗಿದೆ . ಸಂವಿಧಾನ 39 ನೇ ವಿಧಿಯಲ್ಲಿ ಬಾಬಾ ಸಾಹೇಬ್ ಡಾ . ಬಿ.ಆರ್ . ಅಂಬೇಡ್ಕರ್ ರವರು ತಿಳಿಸಿದ ಹಾಗೆ ಭೌತಿಕ ಸಂಪತ್ತನ್ನು ಬಡತನ ಮತ್ತು ನಿರುದ್ಯೋಗ ಹೋಗಲಾಡಿಸಿ ಪ್ರತಿಯೊಬ್ಬ ನಾಗಲೀಕರಿಗೂ ಮೂಲಭೂತ ಸೌಕರ್ಯವನ್ನು ನೀಡುವುದರ ಜೊತೆಗೆ ಆರ್ಥಿಕ , ಸಾಮಾಜಿಕ , ಶೈಕ್ಷಣಿಕ ಮಟ್ಟದಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಬೇಕೆಂಬ ಹಂಬಲದಲ್ಲಿ ಭಾರತದ ಜನಸಂಖ್ಯೆಯಲ್ಲಿ ಆದಾರದ ಮೇಲೆ ಅಗ್ರಗಣ್ಯ ಸ್ಥಾನದಲ್ಲಿರುವ ಮಾದಿಗ ಮತ್ತು ಮಾದಿಗ ಸಂಬಂದಿತ ಇನ್ನೂ ತುಲಿತಕ್ಕೆ ಒಳಗಾಗಿರುವ ಜನಾಂಗಕ್ಕೆ ಮೀಸಲಾತಿಯಲ್ಲಿ ಒಳಮೀಸಲಾತಿ ಪಾಲನ್ನು ಕೊಡಿಸಲೇಬೇಕೆಂದು ಕಂಕಣ ಕಟ್ಟ ನಮ್ಮ ಮಾದಿಗ ದಂಡೋರ MRPS ಸಂಸ್ಥಾಪಕ ರಾಷ್ಟ್ರೀಯ ನಾಯಕರು ಅಭಿನವ ಅಂಬೇಡ್ಕರ್ ಶ್ರೀ ಮಂದಕೃಷ್ಣ ಮಾದಿಗರವರು ಕರ್ನಾಟಕ ರಾಜ್ಯದಲ್ಲಿ ದಿನಾಂಕ : 13-10-1997ರಲ್ಲ ಮಾದಿಗ ದಂಡೋರ ಸಂಘಟನೆಯೊಂದಿಗೆ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಮಾದಿಗ ಜನಾಂಗದ ಅತ್ಮಗೌರವಕ್ಕೆ ಸಾಕ್ಷಿಯಾದರು .
ಇದರ ಪ್ರತಿಫಲ ಜಂಟಿ ಆಂಧ್ರಪ್ರದೇಶ ನ್ಯಾಯಮೂರ್ತಿ ರಾಮಚಂದ್ರರಾಜು ಆಯೋಗ , ಕೇಂದ್ರ ಉಷಾ ಮೆಹ್ರ ಆಯೋಗ , ತಮಿಳುನಾಡು ಜನಾರ್ಧನ ಆಯೋಗ , ಮಹಾರಾಷ್ಟ್ರ ಲಾಹೋಜ ಸಾಲ್ವೆ ಆಯೋಗ , ಉತ್ತರ ಪ್ರದೇಶ ಹುಕ್ಕುಂಸಿಂಗ್ ಆಯೋಗ , ಪಂಜಾಬ್ ಗುರ್ನೋಸಾ ಸಿಂಗ್ ಆಯೋಗ , ಈ ಆಯೋಗದ ವರದಿಗಳು ಪ್ರತಿ ರಾಜ್ಯದ ವರ್ಗಿಕರಣ ಪ್ರಸ್ತಾಪವನ್ನು ಸಲ್ಲಿಸಿದರೂ ಸಹಾ ಒಂಭತ್ತು ವರ್ಷಗಳು ಅಧಿಕಾರದಲ್ಲಿರುವ ಬಿ.ಜೆ.ಪಿ ಸರ್ಕಾರ ನಿರ್ಲಕ್ಷ ಮಾಡಿಕೊಂಡು ಬಂದಿರುತ್ತದೆ . ಆದುದರಿಂದ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರದ ದುರಾಡಲಿತದಿಂದ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಮಾದಿಗ ದಂಡೋರ , ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ದಿನಾಂಕ : 02-07-2022 ರಂದು ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ತಡೆ ಚಳುವಲಿಯ ಮೂಲಕ ಸಂಪೂರ್ಣ ಬಂದ್ ಕರೆ ನೀಡಿರುವ ರಾಷ್ಟ್ರೀಯ ನಾಯಕರು ಶ್ರೀ ಮಂದಕೃಷ್ಣ ಮಾದಿಗ ರವರು ಆದೇಶವನ್ನು ನೀಡಿರುತ್ತಾರೆ .

ಇದರ ಸಲುವಾಗಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಜಿ . ನರಸಪ್ಪರವರ ನಾಯಕತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಹಳ್ಳಿ ಹಟ್ಟಗಳಿಂದ ಮಾಡಿಗ ದಂಡೋರ ಪದಾಧಿಕಾರಿಗಳಿಂದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ವಿಳಂಬ ಧೋರಣೆಯನ್ನು ಖಂಡಿಸಿ ದಿನಾಂಕ : 03-07-2022 ರಂದು ಚಲೋ ಹೈದ್ರಾಬಾದ್ – ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯದಲ್ಲಿರುವ ಮಾದಿಗರು , ರಾಜ್ಯ ಪದಾಧಿಕಾರಿಗಳು , ಜಿಲ್ಲಾ ಪದಾಧಿಕಾರಿಗಳು , ತಾಲ್ಲೂಕು ಪದಾಧಿಕಾರಿಗಳು , ಹೋಬಳ ಪದಾಧಿಕಾರಿಗಳು , ಗ್ರಾಮ ಪದಾಧಿಕಾರಿಗಳು , ಮಹಿಳಾ ಪದಾಧಿಕಾರಿಗಳು , ಯುವಸೇನಾ ಪದಾಧಿಕಾರಿಗಳು , ವಿದ್ಯಾರ್ಥಿ ಘಟಕ ಪದಾಧಿಕಾರಿಗಳು , ಕಾರ್ಮಿಕ ಘಟಕ ಪದಾಧಿಕಾರಿಗಳು , ಬುದ್ಧಿಜೀವಿಗಳು , ಚಿಂತಕರು , ಸ್ವಾಭಿಮಾನ ಹೋರಾಟಗಾರರು , ಬಹುಸಂಖ್ಯೆಯಲ್ಲಿ ಭಾಗವಹಿಸಿ ರಸ್ತೆ ತಡೆ ಬಂದ್‌ನ್ನು ಯಶಸ್ವಿಗೊಲಿಸಬೇಕೆಂದು ರಾಜ್ಯಸಮಿತಿ ಕೋರಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಎಂ ಶ್ರೀನಿವಾಸ್ – ಎಂ.ಆರ್.ಪಿ.ಎಸ್ ವತಿಯಿಂದ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕೆ.ಬಿ.ನರಸಿಂಹ, ದಾಸ್.ಸಿ, ಪ್ರಸಾಧ್, ರಂಗಣ್ಣ ಡೇವಿಡ್ ಮತ್ತು ನಾರಾಯಣಮ್ಮ ಉಪಸ್ತಿತರಿದ್ದರು

City Today News

9341997936