
ನಮ್ಮ ಒಕ್ಕೂಟದ ಮೂಲಕ ತಮ್ಮಲ್ಲಿ ನಿವೇದನೆ ಮಾಡಿಕೊಳ್ಳುವುದೆನೆಂದರೆ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ವಿದ್ಯಾಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳ ಬಹು ವರ್ಷಗಳ
ಈ ಕೆಳಕಂಡ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಸರಕಾರದಿಂದ ಮಂಜೂರಾತಿ ನೀಡಿ ಕ್ರಮವಹಿಸುವ ಕುರಿತು.
1. 1995-96ರ ರಿಂದ 2004-05ರ ವರೆಗೆ ಪ.ಜಾ/ಪ.ಪಂ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ಶಾಲಾ ಕಾಲೇಜುಗಳಿಗೆ ಸಹಾಯಾನುದಾನಕ್ಕೆ ಒಳಪಡಿಸಲು ಸರ್ಕಾರ ಆದೇಶಿಸಬೇಕು.
2. ಪ.ಜಾ./ ಪ.ಪಂ ಆಡಳಿತ ಮಂಡಳಿಗೆ ಮೊದಲು 100 ಕ್ಕೆ 5% ಶೇಕಡಾವಾರದಂತೆ ಎಂ.ಜಿ.ಟಿ. ಅನುದಾನ ಕೊಡುತ್ತಿದ್ದರು ಅದನ್ನು ಅಪರ ಆಯುಕ್ತರ ಹಂತದಲ್ಲೇ ರದ್ದುಗೊಳಿಸಿರುವುದರಿಂದ ಪುನಃ ಆಡಳಿತ ಮಂಡಳಿಗೆ ಎಂ.ಜಿ.ಟಿ. ನೀಡಲು ಸರ್ಕಾರವು ಮಂಜೂರಾತಿಗೆ ಆದೇಶ ನೀಡಬೇಕು.
3. ಸರ್ಕಾರದ ಆದೇಶ ಸಂಖ್ಯೆ:ಇಡಿ267 ໖໖: 2007, 2:12/10/2007 ಹಿಂಪಡೆದು ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಬೇಕು.
4. ಅಕ್ಷರದಾಸೋಹ ಯೋಜನೆ ಅಡಿಯಲ್ಲಿ ಮಧ್ಯಾಹ್ನದ ಬಿಸಿ ಊಟ ತಯ್ಯಾರಿಸುತ್ತಿರುವ ಮುಖ್ಯ ಅಡುಗೆಯವರಿಗೆ ರೂ. 3700/- ಹಾಗೂ ಅಡುಗೆ ಸಹಾಯಕರುಗಳಿಗೆ ರೂ. 3600/- ವೇತನ ಸರ್ಕಾರವು ನೀಡುತ್ತಾ ಬರುತ್ತಿರುವರು ಇದರಿಂದ ಅವರುಗಳ ಕುಟುಂಬ ಆರ್ಥಿಕ ನಿರ್ವಹಣೆಗೆ ಕಡಿಮೆಯಾಗಿದೆ ಆದಕಾರಣ ಮುಖ್ಯ ಅಡುಗೆಯವರಿಗೆ ಹಾಗೂ ಅಡುಗೆ ಸಹಾಯಕರುಗಳಿಗೆ ಕನಿಷ್ಟ ರೂ. 8,000/- ರಿಂದ ರೂ. 10,000/- ವೇತನ ಹೆಚ್ಚಿಸಿ ಆರ್ಥಿಕ ನಿರ್ವಹಣೆ ಸುಧಾಹರಣೆಗೆ ಸಹಕರಿಸುವಂತೆ ಸರ್ಕಾರಕ್ಕೆ ಒತ್ತಾಯ.
5. ಪ.ಜಾ./ಪ.ಪಂ. ವಿದ್ಯಾಸಂಸ್ಥೆಗಳು ನಡೆಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಖಾಸಗಿ ವಸತಿ ನಿಲಯಗಳಿಗೆ ನಿಲಯಾರ್ಥಿಗಳ ಸಹಾಯದಾನ ಒಬ್ಬ ನಿಲಯಾರ್ಥಿಗೆ ರೂ. 1150/-ರಂತೆ ಸರ್ಕಾರ ನಿಗದಿಪಡಿಸಿದ್ದು ಇದನ್ನು ಕನಿಷ್ಟ ರೂ. 2000/- ರಿಂದ ರೂ. 2500/- ವರೆಗೆ ಪ್ರತಿ ನಿಲಯಾರ್ಥಿಗೆ ಹೆಚ್ಚಳ ಮಾಡಬೇಕು ಸರ್ಕಾರದ ವಸತಿ ನಿಲಯಗಳಲ್ಲಿ ಓದುತ್ತಿರುವ ನಿಲಯಾರ್ಥಿಗಳಗೆ ನೀಡುವ ಸೌಲಭ್ಯಗಳನ್ನು ಖಾಸಗಿ ವಸತಿ ನಿಲಯಗಳಲ್ಲಿ ಓದುವ ನಿಯಲಾರ್ಥಿಗಳಿಗೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ.
6. ಪ.ಜಾ./ ಪ.ಪಂ ವಿದ್ಯಾಸಂಸ್ಥೆಗಳು ನಡೆಸುತ್ತಿರುವ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಂಜೂರಾಗುವ ಶಿಷ್ಯವೇತನವನ್ನು ಆಯಾ ಕಾಲೇಜಿನ ಪ್ರಾಂಶುಪಾಲರ ಖಾತೆಗೆ ಸಂದಾಯ ಮಾಡುವಂತೆ ಸರ್ಕಾರಕ್ಕೆ ಒತ್ತಾಯ.
7. ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇತ್ತಿಚಿಗೆ ವರ್ಕ್ ಲೋಡ ನೀಡಲಾಗಿದ್ದು ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ತೊಂದರೆಯಾಗುತ್ತಿದೆ 2015ರ ಪೂರ್ವದಲ್ಲಿ ಇರುವಂತಹ ಸುತ್ತೋಲೆಯನ್ನು ಪುನಃ ಜಾರಿಗೊಳಿಸುವಂತೆ ಒತ್ತಾಯವನ್ನು ಒಕ್ಕೂಟದ ಅಧ್ಯಕ್ಷರಾದ ಶಂಕರ್ ಕೊಡ್ಲಾ ಹಾಗೂ ಸಾಧಸ್ಯರಾದ ಸಂಜೀವಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936

You must be logged in to post a comment.