ಗೋಲ್ಡನ್ ಪ್ಯಾಡಿ ಫೀಲ್ಡ್, ಹ್ಯಾಪಿ ರೋನ್, ಪಾರೋ ಭೂತಾನ್‌ನಲ್ಲಿ ಕವಿಗೋಷ್ಠಿ ಹಾಗೂ ಹತ್ತು ಕೃತಿಗಳ ಬಿಡುಗಡೆ

ಕಥಾಬಿಂದು ಕನ್ನಡ ಕಂಪು ಸರಣಿ-7

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಡೆದ ಪತ್ರಿಕಾ ಗೋಷ್ಠಿ

ಮುಂಬೈ, ವಾರಣಾಸಿ (ಕಾಶಿ), ಹೈದರಾಬಾದ್, ಮಲೇಶಿಯಾ, ದುಬೈ, ನೇಪಾಳ, ಇದೀಗ ಭೂತಾನ್ ದೇಶದಲ್ಲಿ ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ, ಡಾ. ದೊಡ್ಡಮಲ್ಲಯ್ಯ ಅವರ ಅಧ್ಯಕ್ಷತೆಯಲ್ಲಿ, ಅಕ್ಟೋಬರ್ 28. 10, 2024ರಂದು ಸಂಜೆ 5 ಗಂಟೆಗೆ ಗೋಲ್ಡನ್ ಪ್ಯಾಡಿ ಫೀಲ್ಡ್, ಹ್ಯಾಪಿ ರೋನ್, ಪಾರೋ ಭೂತಾನ್‌ನಲ್ಲಿ ಕವಿಗೋಷ್ಠಿ, ಹತ್ತು ಕೃತಿಗಳ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 20 ಮಂದಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಕಥಾಬಿಂದು ಭೂತಾನ್ ಎಕ್ಸಲೆನ್ಸಿ ಅವಾರ್ಡ್’ನ್ನು ನೀಡಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ಲೇಖಕ, ಕಾದಂಬರಿಕಾರ, ಪಿ. ವಿ. ಪ್ರದೀಪ್ ಕುಮಾರ್ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಡಾ. ದೊಡ್ಡಮಲ್ಲಯ್ಯ (ನಿಕಟಪೂರ್ವ ಜಿಲ್ಲಾಧ್ಯಕ್ಷರು, ಕ.ಸಾ.ಪ ಚಿತ್ರದುರ್ಗ ಜಿಲ್ಲೆ) ಶ್ರೀ ಎನ್.ವಿ ರಮೇಶ್ (ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು ಆಕಾಶವಾಣಿ) ಶ್ರೀ ಎಂ.ಸಿ. ಮೋಹನ್ (ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಕಥಾಬಿಂದು ಭೂತಾನ್ ಎಕ್ಸಲೆನ್ಸಿ ಅವಾರ್ಡ್ ಪುರಸ್ಕೃತರು) ಶ್ರೀಮತಿ ರಾಧಾಮಣಿ ಎಂ ಸಂಘಟನೆ ಕ್ಷೇತ್ರದ ಸಾಧನೆಗಾಗಿ ಕಥಾಬಂದು ಭೂತಾನ್ ಎಕ್ಸಲೆನ್ಸಿ ಅವಾರ್ಡ್ ಪುರಸ್ಕೃತರು) ಉಪಸ್ಥಿತರಿದ್ದರು.

City Today News 9341997936