
ಪಾಲಿಕೆಯಲ್ಲಿ 11 ಮಂದಿ ವೈದ್ಯರು ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಆರೋಗ್ಯ ವೈದ್ಯಾದಿಕಾರಿಯಾಗಿ ಮುಂಬಡ್ತಿ ಪಡೆದು ಸೇವೆ ಸಲ್ಲಿಸುತ್ತಿತರುವ ರವರನ್ನು ಸೇವೆಯಿಂದ ವಜಾ ಗೊಳಿಸಬೇಕೆಂದು ಅಗ್ರಹಿಸಿ ಪತ್ರಿಕಾಗೋಷ್ಠಿ ಮಾಡುವ ಬಗ್ಗೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹಾಯಕ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ (1) ಡಾ|| ವೇದವತಿ ಬಿ.ಜೆ., (2) ಡಾ|| ಸುನಿತ, (3) ಡಾ।। ಕಲಾವತಿದೇವಿ (4) ಡಾ॥ ಸಂದ್ಯ (5) ಡಾ॥ ಸುಜಾತ ಎಸ್, (6) ಡಾ|| ಅನಂತಶ್ರಿಲಕ್ಷ್ಮಿ ಟಿ., (7) ಡಾ|| ಲಕ್ಷ್ಮೀ ಪಿ.ಎಸ್., (8) ಡಾ॥ ಮಂಜುಳಾ ಎಸ್., (9) ಡಾ।।ನಯನತರಾರ ಪಾಟೀಲ್, (10) ಡಾ|| ರಾಮು ಜಿ., (11) ಡಾ|| ಸಯ್ಯದ್ ಉಮರ್ ಫಾರೂಕ್ ವೈದ್ಯರುಗಳಿಗೆ ವೇತನ ಶ್ರೇಣಿ ಆರೋಗ್ಯ ವೈದ್ಯಾಧಿಕಾರಿ ಹುದ್ದೆಗೆ ಸ್ಥಾನವನ್ನು ತುಂಬಲು ಮುಂಬಡ್ತಿಯನ್ನು ನೀಡಿರುತ್ತಾರೆ.
ಸದರಿ ಇವರುಗಳು ನೊಂದಾಣಿಯಾಗಿರುವ (KMC) ಕರ್ನಾಟಕ ವೈದ್ಯಕೀಯ ಮಂಡಳಿ ವತಿಯಿಂದ ಪಡೆದಿರುವ ಶಿಕ್ಷಣದ MPH / DPH ಪದವಿಯು ಮಾನ್ಯತೆ ಇಲ್ಲದೆ ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ವಿಶ್ವವಿದ್ಯಾಲಯದಿಂದ ಪಡೆದಿರುವಂತಹ ಶಿಕ್ಷಣಕ್ಕೆ ಪ್ರಮಾಣ ಪತ್ರವನ್ನು ನೀಡಿರುತ್ತಾರೆ. ಅಲ್ಲಿ ಪದ್ಮಶ್ರೀ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಎಂದು ನಮೂದಿಸಿರುತ್ತದೆ. ಇದು ವೈದ್ಯಕೀಯ ಕಾಲೇಜ್ ಇರುವುದಿಲ್ಲ.
ಈ ಮೇಲೆ ಸೂಚಿಸಿರುವ 11 ಮಂದಿ ವೈದ್ಯರು MPH / DPH ನಕಲಿ ದಾಖಲೆಗಳನ್ನು ನೀಡಿ ಆರೋಗ್ಯ ವೈದ್ಯಾಧಿಕಾರಿಗಳ ಹುದ್ದೆಗೆ C&R ನಿಯಮಗಳನ್ನು ಉಲ್ಲಂಘನೆ ಮಾಡಿ ನಿಯಮಗಳ ವಿರುದ್ಧ ಹಾಗೂ ಕಾನೂನು ಬಾಹಿರವಾಗಿ ಮುಂಬಡ್ತಿಯನ್ನು ಪಡೆದುಕೊಂಡಿರುತ್ತಾರೆ. ಈ 11 ಮಂದಿ ವೈದ್ಯರು ಮಾಡಿರುವಂತಹ ತರಬೇತಿ ಶಿಕ್ಷಣವು ಅಧಿಕೃತ ‘ಪದವಿ’ ಎಂದು ಪಾಲಿಕೆಯ ಆಡಳಿತ ಇಲಾಖೆಯು ತಪ್ಪಾಗಿ ಗ್ರಹಿಸಿಕೊಂಡು ಅವರಿಗೆ ಮುಂಬಡ್ತಿಯನ್ನು ನೀಡಲು ಶಿಫಾರಸ್ಸು ಮಾಡಿರುತ್ತಾರೆ.
MPH / DPH ಪದವಿಯು ಮಾನ್ಯತೆ ಇದೆಯೋ/ಇಲ್ಲವೋ ಎಂದು ಖಾತರಿ ಪಡೆಸಿಕೊಳ್ಳಬೇಕದ ದಾಖಲೆಗಳನ್ನು ಸಹ ಪರಿಶೀಲಿಸಿಕೊಳ್ಳದೆ ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿರುವಂತಹ ಶಿಕ್ಷಣಕ್ಕೆ ಪ್ರಮಾಣ ಪತ್ರವನ್ನು ನೀಡಿರುತ್ತಾರೆ.
ವೈದ್ಯರುಗಳಿಗೆ ವೇತನ ಶ್ರೇಣಿ ಆರೋಗ್ಯ ವೈದ್ಯಾಧಿಕಾರಿ ಹುದ್ದೆಗೆ ಮುಂಬಡ್ತಿಯ ನೀಡಿರುವ ವಿಚಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಯೋಗೇಶ್ ಪಾಲಿಕೆಯ ಆಡಳಿತ ಅಧಿಕಾರಿ ಮಂಜುನಾಥ ಸ್ವಾಮಿ, ಮ್ಯಾನೇಜರ್ ನಾಗರಾಜ, ಕೇಸ್ ವರ್ಕರ್ ಮಧನ್, ನಗರಾಭಿವೃದ್ಧಿ ಇಲಾಖೆ ಶಿವಕುಮಾರ್ ಮತ್ತು ತುಕರಾಂ ಹಾಗೂ ಮಧುಚಂದ್ರ ತೇಜಸ್ವಿನಿ ರವರುಗಳು ವೈದ್ಯರುಗಳೊಂದಿಗೆ ಶಾಮಿಲಾಗಿ C&R ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರವನ್ನು ಮತ್ತು ಪಾಲಿಕೆಯನ್ನು ದಿಕ್ಕು ತಪ್ಪಿಸಿದವರ ವಿರುದ್ಧ ಕ್ರಮ ಜರುಗಿಸಿ ಮುಂಬಡ್ತಿ ಪಡೆದಿರುವ ವೈದ್ಯರುಗಳನ್ನು ನಿಯಮ ಅನುಸಾರ ಸೇವೆಯಿಂದ ವಜಾಗೊಳಿಸಿ ಸರ್ಕಾರ ಇವರಿಗೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆದು ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಲೋಕಾಯುಕ್ತರಿಂದ ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ನಿರ್ಲಕ್ಷೆವಹಿಸಿದ್ದಲ್ಲಿ ಇವರ ವಿರುದ್ಧ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾದಿಗ ದಂಡೋರ MRPS ಮಾದಿಗ ಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ದಲಿತ ಸಂಗರ್ಷ ಸಮಿತಿ (ಸಂಯೋಜಕ) ವತಿಯಿಂದ ತ್ರಿಲೋಕ್ ಚಂದರ್ – ಅಧ್ಯಕ್ಷರು, ಬೆಂಗಳೂರು ನಗರ, ಸಿ. ಜಗದೀಶ್ – ವಿಭಾಗಿಯ ಸಂಘಟನ ಸಂಚಾಲಕರು ಮತ್ತು ಮಂಟೇಶ್ ಕತ್ತಿ- ರಾಜ್ಯ ವಕ್ತಾರರು ಮಾದಿಗ ದಂಡೋರ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936

You must be logged in to post a comment.