• ₹2/- ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 549- 577 ರೂ ಬೆಲೆ ಶ್ರೇಣಿ (“ಈಕ್ವಿಟಿ ಷೇರುಗಳು”)
• ಬಿಡ್/ಆಫರ್ ಆರಂಭಿಕ ದಿನಾಂಕ – ಶುಕ್ರವಾರ, ನವೆಂಬರ್ 14, 2025 ಮತ್ತು ಬಿಡ್/ಆಫರ್ ಮುಕ್ತಾಯ ದಿನಾಂಕ – ಮಂಗಳವಾರ, ನವೆಂಬರ್ 18, 2025.
• ಕನಿಷ್ಠ ಬಿಡ್ ಲಾಟ್ 25 ಈಕ್ವಿಟಿ ಷೇರುಗಳು ಮತ್ತು ನಂತರ 25 ಈಕ್ವಿಟಿ ಷೇರುಗಳ ಗುಣಕಗಳಲ್ಲಿ

ಬೆಂಗಳೂರು, ನವೆಂಬರ್ 13, 2025: ತನ್ನ ಐಪಿಓಗಾಗಿ, ಕ್ಯಾಪಿಲರಿ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ (“ಕಂಪನಿ”) ₹ 2/- ಮುಖಬೆಲೆಯ ಈಕ್ವಿಟಿ ಷೇರಿಗೆ 549- 577ರೂ ಬೆಲೆ ಶ್ರೇಣಿ ನಿಗದಿಪಡಿಸಿದೆ.
ಈ ಐಪಿಒ, ₹ 2/- ಮುಖಬೆಲೆಯ ಈಕ್ವಿಟಿ ಷೇರುಗಳ ಹೊಸ ಬಿಡುಗಡೆಯಾಗಿದ್ದು, ಒಟ್ಟು ₹ 3450.00 ಮಿಲಿಯನ್ ಮೌಲ್ಯದ ಈಕ್ವಿಟಿ ಷೇರುಗಳಾಗಿದ್ದು 92,28,796 ಈಕ್ವಿಟಿ ಷೇರುಗಳು ಆಫರ್ ಫಾರ್ ಸೇಲ್ ಆಗಿವೆ.
ಹೊಸ ಷೇರುಗಳ ಬಿಡುಗಡೆಯಿಂದ ಬರುವ ₹ 1,430.00 ಮಿಲಿಯನ್ ವರೆಗಿನ ನಿವ್ವಳ ಆದಾಯವು ಕ್ಲೌಡ್ ಮೂಲಸೌಕರ್ಯ ವೆಚ್ಚಗಳಿಗೆ ಹಣಕಾಸಿಗಾಗಿ ಬಳಕೆ, ₹ 715.81 ಮಿಲಿಯನ್ ವರೆಗೆ ಕಂಪನಿಯ ಉತ್ಪನ್ನ ಗಳು ಮತ್ತು ವೇದಿಕೆಯ ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು, ₹ 103.42 ಮಿಲಿಯನ್ ವರೆಗೆ ವ್ಯವಹಾರಕ್ಕಾಗಿ ಕಂಪ್ಯೂಟರ್ ಖರೀದಿಯಲ್ಲಿ ಹೂಡಿಕೆ ಮಾಡಲು ಮತ್ತು ಉಳಿದ ಹಣವನ್ನು ಗುರುತಿಸಲಾಗದ ಆಸ್ತಿಗಳ ಸ್ವಾಧೀನಗಳು ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶ ಗಳ ಮೂಲಕ ಅಜೈವಿಕ ಬೆಳವಣಿಗೆಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ (ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಮತ್ತು ಗುರುತಿಸಲಾಗದ ಸ್ವಾಧೀನಗಳು ಮತ್ತು ಇತರ ಕಾರ್ಯತಂತ್ರದ ಉಪಕ್ರಮ ಗಳಿಗಾಗಿ ಬಳಸಬೇಕಾದ ಮೊತ್ತವು ಒಟ್ಟಾರೆಯಾಗಿ ಒಟ್ಟು ಆದಾಯದ 35% ಮೀರಬಾರದು. ಅದರಲ್ಲಿ (i) ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಅಥವಾ (ii) ಗುರುತಿಸಲಾಗದ ಸ್ವಾಧೀನಗಳಿಗೆ ಬಳಸಬೇಕಾದ ಮೊತ್ತವು ಒಟ್ಟು ಆದಾಯದ 25% ಮೀರಬಾರದು. ಇದಲ್ಲದೆ, ಗುರುತಿಸಲಾಗದ ಸ್ವಾಧೀನ ಗಳು ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳ ಮೂಲಕ ಅಜೈವಿಕ ಬೆಳವಣಿಗೆಗೆ ಹಣಕಾಸು ಒದಗಿಸುವ ನಿವ್ವಳ ಆದಾಯದ ಬಳಕೆ, ಕಂಪನಿಯು ಹೊಸ ಷೇರು ವಿತರಣೆಯಿಂದ ಬರುವ ಆದಾಯದ 50% ಕ್ಕಿಂತ ಹೆಚ್ಚಿನದನ್ನು ಯಾವುದೇ ವೆಚ್ಚಕ್ಕೆ (ಗುರುತಿಸಲಾಗದ ಸ್ವಾಧೀನಗಳಿಗೆ ಹಣಕಾಸು ಒದಗಿಸುವುದು ಸೇರಿದಂತೆ) ಬಳಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಬೇಕು.
ಕಂಪನಿಯು ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಲೌಡ್-ಸ್ಥಳೀಯ ʼಸಾಫ್ಟ್‌ವೇರ್-ಆಸ್-ಎ-ಸರ್ವಿಸ್ (SaaS)ʼ ಉತ್ಪನ್ನಗಳು ಮತ್ತು ಪರಿಹಾರಗಳ ನೀಡುವ ಸಾಫ್ಟ್‌ವೇರ್ ಉತ್ಪನ್ನ ಕಂಪನಿಯಾಗಿದೆ. ಈ ಕಂಪನಿ ಮುಖ್ಯ ವಾಗಿ ಉದ್ಯಮ, ಜಾಗತಿಕವಾಗಿ ಗ್ರಾಹಕರಿಗೆ ತನ್ನ ಗ್ರಾಹಕ ಮತ್ತು ಚಾನೆಲ್ ಪಾಲುದಾರರ ನಿಷ್ಠೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೆಪ್ಟೆಂಬರ್ 2025 ರ ಹೊತ್ತಿಗೆ, ಅದರ ಜತೆಗಾರ ಗುಂಪಿನೊಂದಿಗೆ ಆಫರ್ʼಗಳ ವಿಸ್ತಾರವನ್ನು ಆಧರಿಸಿ, ಕಂಪನಿಯು ತನ್ನ ನಿಷ್ಠೆ ಮತ್ತು ಸಂಪರ್ಕ ನಿರ್ವಹಣೆಯಲ್ಲಿ ಜಾಗತಿಕ ನಾಯಕರಲ್ಲಿ ಒಬ್ಬರಾಗಿರುವುದಾಗಿ ತೋರಿಸುತ್ತದೆ. (ಮೂಲ: ಜಿನ್ನೋವ್ ವರದಿ)
ಲಾಯಲ್ಟಿ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಎಂಡ್-ಟು-ಎಂಡ್ ಲಾಯಲ್ಟಿ ಪರಿಹಾರಗಳ ನೀಡುವ ಕೆಲವೇ ಕೆಲವು ಕಂಪನಿಗಳಲ್ಲೊಂದು. ಸುಧಾರಿತ ಲಾಯಲ್ಟಿ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್ (ಲಾಯಲ್ಟಿ+), ಕನೆಕ್ಟೆಡ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರ್ಮ್ (ಎಂಗೇಜ್+), ಪ್ರಿಡಿಕ್ಟಿವ್ ಅನಾಲಿ ಟಿಕ್ಸ್ ಪ್ಲಾಟ್‌ಫಾರ್ಮ್ (ಇನ್‌ಸೈಟ್ಸ್+), ರಿವಾರ್ಡ್ಸ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್ (ರಿವಾರ್ಡ್ಸ್+) ಮತ್ತು ಗ್ರಾಹಕ ಡೇಟಾ ಪ್ಲಾಟ್‌ಫಾರ್ಮ್ (CDP) ಸೇರಿದಂತೆ ಅದರ ವೈವಿಧ್ಯಮಯ ಉತ್ಪನ್ನ ಸೂಟ್ ತನ್ನ ಗ್ರಾಹಕ ರಿಗೆ ಎಂಡ್-ಟು-ಎಂಡ್ ಲಾಯಲ್ಟಿ ಕಾರ್ಯಕ್ರಮಗಳ ನಡೆಸಲು, ಗ್ರಾಹಕರ ಸಮಗ್ರ ಅಭಿಪ್ರಾಯ ಪಡೆಯಲು ಮತ್ತು ಗ್ರಾಹಕರಿಗೆ ನೈಜ-ಸಮಯದ ಓಮ್ನಿ-ಚಾನೆಲ್, ವೈಯಕ್ತೀಕರಿಸಿದ ಮತ್ತು ಸ್ಥಿರ ಅನುಭವ ನೀಡುವ ಏಕೀಕೃತ, ಕ್ರಾಸ್-ಚಾನೆಲ್ ತಂತ್ರಗಳನ್ನು ನೀಡಲು ಅನುವು ಮಾಡಿಕೊಡುತ್ತದೆ. ಸೆಪ್ಟೆಂಬರ್ 30, 2025 ರ ಹೊತ್ತಿಗೆ, ಕಂಪನಿಯ ನವೀನ ಪರಿಹಾರಗಳನ್ನು ಬಳಸಿಕೊಂಡು ಗ್ರಾಹಕ ಮೌಲ್ಯ ನಿರ್ಮಿಸುವ ಗುರಿಯನ್ನು ಹೊಂದಿರುವ ಜತೆಗೆ, 47 ದೇಶಗಳಲ್ಲಿ 410 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಬೆಂಬಲಿಸುತ್ತದೆ.

ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ನಡೆದ ವಹಿವಾಟುಗಳಿಂದ ಕಂಪನಿ ಯ ಏಕೀಕೃತ ಆದಾಯ ₹ 3,592.18 ಮಿಲಿಯನ್ ಆಗಿದ್ದು, ಇದೇ ವೇಳೆಗೆ ಕಳೆದ ವರ್ಷದ ಸೆಪ್ಟೆಂಬರ್ 30, 2024 ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ₹ 2,871.77 ಮಿಲಿಯನ್ ಆಗಿತ್ತು. ಒಟ್ಟಿನಲ್ಲಿ ಕಂಪನಿಯ ವಹಿವಾಟಿನಿಂದ ಆದಾಯ ಪ್ರಸಕ್ತ ಹಣಕಾಸು ವರ್ಷದಲಿ (FY25) ₹ 5,982.59 ಮಿಲಿಯನ್ ಆಗಿದೆ. ಇದು ಹಣಕಾಸು ವರ್ಷದಲಿ (FY24) ₹ 5,251.00 ಮಿಲಿಯನ್ ಮತ್ತು ಹಣಕಾಸು ವರ್ಷ( FY23) ದಲ್ಲಿ ₹ 2,553.72 ಮಿಲಿಯನ್ ಆಗಿತ್ತು.
ಕಳೆದ ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ನಡೆದ ವಹಿವಾಟುಗಳಿಂದ ಕಂಪನಿಯ ಏಕೀಕೃತ ಆದಾಯ ₹ 3,592.18 ಮಿಲಿಯನ್ ಆಗಿದ್ದು, ಸೆಪ್ಟೆಂಬರ್ 30, 2024ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ₹ 2,871.77 ಮಿಲಿಯನ್ ಆಗಿತ್ತು.

ಜೆಎಂ ಫೈನಾನ್ಷಿಯಲ್ ಲಿಮಿಟೆಡ್, ಐಐಎಫ್‌ಎಲ್ ಕ್ಯಾಪಿಟಲ್ ಸರ್ವೀಸಸ್ ಲಿಮಿಟೆಡ್ (ಹಿಂದೆ ಐಐಎಫ್‌ಎಲ್ ಸೆಕ್ಯುರಿಟೀಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಮತ್ತು ನೊಮುರಾ ಫೈನಾನ್ಷಿಯಲ್ ಅಡ್ವೈಸರಿ ಅಂಡ್ ಸೆಕ್ಯುರಿಟೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್ ಆಗಿವೆ; ಮತ್ತು ಎಂಯುಎಫ್‌ಜಿ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹಿಂದೆ ಲಿಂಕ್ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್) ರಿಜಿಸ್ಟ್ರಾರ್ ಆಗಿದೆ.
ಈ ಆಫರ್ ಅನ್ನು ಬುಕ್-ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ನೀಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನಿವ್ವಳ ಕೊಡುಗೆಯ 75% ಕ್ಕಿಂತ ಹೆಚ್ಚಿನದನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಹಂಚಲಾಗುವುದಿಲ್ಲ ಮತ್ತು ನಿವ್ವಳ ಕೊಡುಗೆಯ 15% ಕ್ಕಿಂತ ಹೆಚ್ಚಿನದನ್ನು ಸಾಂಸ್ಥಿಕವಲ್ಲದ ಬಿಡ್ಡರ್‌ಗಳಿಗೆ ಹಂಚಲಾಗುವುದಿಲ್ಲ ಮತ್ತು ನಿವ್ವಳ ಕೊಡುಗೆಯ 10% ಕ್ಕಿಂತ ಹೆಚ್ಚಿನದನ್ನು ಮತ್ತು ಚಿಲ್ಲರೆ ವೈಯಕ್ತಿಕ ಬಿಡ್ಡರ್‌ಗಳಿಗೆ ಹಂಚಲಾಗುವುದಿಲ್ಲ ಹಾಗೂ SEBI ICDR ನಿಯಮಗಳಿಗೆ ಅನುಸಾರವಾಗಿ ಆಫರ್ ನಲ್ಲಿ ತಿಳಿಸಲಾದ ಬೆಲೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅರ್ಹ ಬಿಡ್‌ಗಳನ್ನು ಸ್ವೀಕರಿಸುವುದು ಒಳಪಟ್ಟಿರುತ್ತದೆ.
City Today News 9341997936

You must be logged in to post a comment.