ರಾಜ್ಯದಲ್ಲಿ ಶರಣ ಸಂಸ್ಕೃತಿಯ ಬೆಳವಣಿಗೆಗೆ ಸದಾ ಮುಂದಿರುವ ಬಸವ ವೇದಿಕೆ(ರಿ) ಈ ವರ್ಷವೂ ರಾಜ್ಯಮಟ್ಟದ “ಬಸವ ಜಯಂತಿ” ಮತ್ತು ಪ್ರತಿಷ್ಠಿತ “ಬಸವಶ್ರೀ” ಹಾಗೂ “ವಚನ ಸಾಹಿತ್ಯಶ್ರೀ” ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜನೆ

ಬೆಂಗಳೂರು, ಏಪ್ರಿಲ್ 26:
ರಾಜ್ಯದಲ್ಲಿ ಶರಣ ಸಂಸ್ಕೃತಿಯ ಬೆಳವಣಿಗೆಗೆ ಸದಾ ಮುಂದಿರುವ ಬಸವ ವೇದಿಕೆ(ರಿ) ಈ ವರ್ಷವೂ ರಾಜ್ಯಮಟ್ಟದ “ಬಸವ ಜಯಂತಿ” ಮತ್ತು ಪ್ರತಿಷ್ಠಿತ “ಬಸವಶ್ರೀ” ಹಾಗೂ “ವಚನ ಸಾಹಿತ್ಯಶ್ರೀ” ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಿದೆ.

ಮೇ 3, ಶನಿವಾರ ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ, ಆದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮವನ್ನು ಗೃಹ ಸಚಿವ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಉದ್ಘಾಟಿಸಲಿದ್ದು, “ಬಸವಶ್ರೀ” ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಬಸವರಾಜ ಎಸ್. ಬೊಮ್ಮಾಯಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ “ವಚನ ಸಾಹಿತ್ಯಶ್ರೀ” ಪ್ರಶಸ್ತಿಯನ್ನು ನೀಡಲಿದ್ದಾರೆ. ಬೃಹತ್ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ “ಬಸವ ಜ್ಯೋತಿ” ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ಬೆಳಿಗ್ಗೆ 10 ಗಂಟೆಗೆ ಖ್ಯಾತ ವಚನ ಗಾಯಕಿ ಎಂ.ಡಿ. ಪಲ್ಲವಿ ವಚನ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.

ಈ ವರ್ಷ, ನಾಡೋಜ ಗೊ. ರು. ಚೆನ್ನಬಸಪ್ಪ ಅವರಿಗೆ “ಬಸವಶ್ರೀ” ಪ್ರಶಸ್ತಿಯನ್ನು, ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಫ.ಗು. ಹಳಕಟ್ಟಿ ವಚನ ಪಿತಾಮಹ ಸಂಶೋಧನಾ ಕೇಂದ್ರಕ್ಕೆ “ವಚನ ಸಾಹಿತ್ಯಶ್ರೀ” ಪ್ರಶಸ್ತಿಯನ್ನು ಮತ್ತು ವಚನ ಸಂಗೀತದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಎಂ.ಡಿ. ಪಲ್ಲವಿ ಅವರಿಗೆ “ವಚನ ಸಂಗೀತ ಪ್ರಶಸ್ತಿ” ನೀಡಲಾಗುತ್ತಿದೆ.

ಈ ಕುರಿತು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಸವ ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ ಮಾಹಿತಿ ನೀಡಿದರು. ಸಮಾರಂಭದ ಆಹ್ವಾನ ಪತ್ರಿಕೆ ಹಾಗೂ ಪ್ರಶಸ್ತಿ ಪುರಸ್ಕೃತರ ಪರಿಚಯ ಹಾಗೂ ಭಾವಚಿತ್ರಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಬಸವ ವೇದಿಕೆ ಈವರೆಗೆ 27 ಹಿರಿಯ ಸಾಧಕರಿಗೆ “ಬಸವಶ್ರೀ” ಪ್ರಶಸ್ತಿ ನೀಡಿ ಗೌರವಿಸಿದ್ದು, ಈ ಬಾರಿಯ ಸಮಾರಂಭವೂ ಅದೇ ಪರಂಪರೆಯನ್ನು ಮುಂದುವರಿಸುತ್ತಿದೆ.

City Today News 9341997936