
ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕೆಳಗಿನ ವಿಷಯಗಳನ್ನು ಡಾ. ಯೂನಾಸ್ (ಜೊನ್ಸ್) ಕೆಪಿಸಿಸಿ ಉಪಾಧ್ಯಕ್ಷರು ಮಾನವ ಹಕ್ಕುಗಳ ವಿಭಾಗ, ರವರಿಂದ ಪ್ರಸ್ತಾಪಿಸಿಲಾಯಿತು.

ಇಂದು ದೇಶದ ಚುಕ್ಕಾಣಿಯನ್ನು ಹಿಡಿಯುವ ಒಕ್ಕೂಟ ವ್ಯವಸ್ಥೆಯ ಚುನಾವಣೆಗೆ ಒಂದು ದಿನ ಬಾಕಿ ಇದೆ.
ರಾಜ್ಯ ಸರ್ಕಾರದ ಗ್ಯಾರಂಟಿಗಳು ಮತ್ತು ಭಾರತ ಮಟ್ಟದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನೇತೃತ್ವದಲ್ಲಿ
1. ಪ್ರತಿಯೊಬ್ಬ ವಿದ್ಯಾವಂತ ಯುವಕನಿಗೆ ಮೊದಲ ಉದ್ಯೋಗದ ಗ್ಯಾರಂಟಿ.
2. ಸ್ವಾತಂತ್ರ್ಯ ಬಂದಾಗಿನಿಂದ ರೈತರ ಸಾಲಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರ ಎಮ್‌ಎಸ್‌ಪಿಗೆ ಕಾನೂನು ಸ್ಥಾನಮಾನ.
3. ಜಾತಿಗಣತಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಸಮುದಾಯ ಪರಿಗಣನೆ.
4. ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿವರ್ಷ 1 ಲಕ್ಷ ರೂಪಾಯಿಗಳು.
5. ನರೇಗಾ ಸೇರಿದಂತೆ ರಾಷ್ಟ್ರೀಯ ಕನಿಷ್ಟ ವೇತನ ದಿನಕ್ಕೆ 400 ರೂಪಾಯಿಗಳು.

6. ಬಿಜೆಪಿಯ ದುರಾಡಳಿತದಿಂದ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಿಂದುಳಿದಿದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರಿಗೆ ಸೂಕ್ತ ಕಾನೂನು ವ್ಯವಸ್ಥೆ ಜಾರಿಗೆ ತರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ.
7. ಒಟ್ಟಾರೆ ಇಂದು ದೇಶದಲ್ಲಿ ಬೆಲೆ ಏರಿಕೆ, ಕೋಮುದಳ್ಳುರಿ, ಸ್ತ್ರೀಯರಿಗೆ ಭದ್ರತೆ ಹಾಗೂ ಮಣಿಪುರದಲ್ಲಿ ನಡೆಯುತ್ತಿರುವ ದುರಂತದ ವಿಷಯಗಳನ್ನು ಪ್ರಸ್ತಾಪಿಸಿದ ಡಾ. ಯೂನಾಸ್ (ಜೊನ್ಸ್) ಕೆಪಿಸಿಸಿ ಉಪಾಧ್ಯಕ್ಷರು ಮಾನವ ಹಕ್ಕುಗಳ ವಿಭಾಗ, ರವರು ದೇಶದಲ್ಲಿ ನೆಮ್ಮದಿ ಹಾಗೂ ಕೋಮುಸೌಹಾರ್ದತೆ ನೆಲೆಸಲು ಕಾಂಗ್ರೆಸ್ ಪಕ್ಷಕ್ಕೆ ಅಮೂಲ್ಯವಾದ ಮತವನ್ನು ಕರುಣಿಸಬೇಕಾಗಿ ಸಾರ್ವಜನಿಕರಲ್ಲಿ ಬೇಡಿಕೆಯಿಟ್ಟರು.ಪತ್ರಿಕಾ ಗೋಷ್ಠಿಯಲ್ಲಿ ಸಿ.ಕೆ. ರವಿಚಂದ್ರ,ಚುನಾವಣಾ ಕೋಆರ್ಡಿನೇಟರ್ ಮತ್ತು ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
City Today News 9341997936

You must be logged in to post a comment.