ಬೆಂಗಳೂರು ಮಹಾನಗರದ ಜ್ವಲಂತ ಸಮಸ್ಯೆಯಾಗಿರುವ ನಿರುದ್ಯೋಗ ಸಮಸ್ಯೆಯನ್ನು ಸಣ್ಣ ಪ್ರಮಾಣದಲ್ಲಿಯಾದರೂ ಬಗೆಹರಿಸಬೇಕೆಂಬ ದೃಷ್ಟಿಯಿಂದ “ಬೃಹತ್ ಉದ್ಯೋಗ ಮೇಳ”ವನ್ನು ದಿನಾಂಕ 17/08/2024 ರ ಶನಿವಾರದಂದು ಆಯೋಜಿಸಲಾಗಿದೆ.

ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಸಮೀಪ ಇರುವ Carmel ಶಾಲೆಯ ಪಕ್ಕದ “ಪುಟ್ಟಲಿಂಗಯ್ಯ ಆಟದ ಮೈದಾನ” ಮತ್ತು Carmel ಶಾಲೆಯ ಸಭಾಂಗಣದಲ್ಲಿ ಈ “ಬೃಹತ್ ಉದ್ಯೋಗ ಮೇಳ”ವನ್ನು ಆಯೋಜಿಸಲಾಗಿದ್ದು, ದಿನಾಂಕ 17/08/2024 ರ ಶನಿವಾರದಂದು ಬೆಳಿಗ್ಗೆ 09 ರಿಂದ ಸಂಜೆ 05 ರವರೆಗೆ ನಡೆಯುವ ಸದರಿ “ಬೃಹತ್ ಉದ್ಯೋಗ ಮೇಳ”ದಲ್ಲಿ 150 ಕ್ಕೂ ಹೆಚ್ಚು Corporate Company ಗಳು ಮತ್ತು MNC Company ಗಳು ಭಾಗವಹಿಸುತ್ತಿದ್ದು, ಸುಮಾರು 3,000 ಕ್ಕೂ ಹೆಚ್ಚು ಮಂದಿ ನಿರುದ್ಯೋಗಿ ಯುವಕ / ಯುವತಿಯರಿಗೆ ಸ್ಥಳದಲ್ಲಿಯೇ “ನೇಮಕಾತಿ ಆದೇಶ” (Appointment Order)ಗಳನ್ನು ನೀಡಲಾಗುತ್ತದೆ.

SSLC, ದ್ವಿತೀಯ ಪಿಯುಸಿ ಸೇರಿದಂತೆ ಎಲ್ಲ ವಿಧದ ಪದವಿ, ಸ್ನಾತಕೋತ್ತರ ಪದವಿಗಳನ್ನು ಪೂರೈಸಿ ಉತ್ತೀರ್ಣರಾಗಿರುವ ಅಥವಾ ಅನುತ್ತೀರ್ಣರಾಗಿರುವ, ಐಟಿಐ ತರಬೇತಿ, Diploma ವ್ಯಾಸಂಗ ಮತ್ತು ಎಂಜಿನಿಯರಿಂಗ್ ಪದವಿ ವ್ಯಾಸಂಗಗಳನ್ನು ಪೂರೈಸಿರುವ ಯುವಕ / ಯುವತಿಯರಿಗೆ ಈ “ಬೃಹತ್ ಉದ್ಯೋಗ ಮೇಳ”ದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಆಸಕ್ತ ಯುವಕ / ಯುವತಿಯರು 9844159891, 9108636275 ಮತ್ತು 9902277401 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬಹುದಾಗಿರುತ್ತದೆ. ನೋಂದಾವಣೆಗೆ 10/08/2024 ಕೊನೆಯ ದಿನವಾಗಿರುತ್ತದೆ.
MLR Family ಯ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಈ “ಬೃಹತ್ ಉದ್ಯೋಗ ಮೇಳ”ವನ್ನು ಶ್ರೀಮತಿ. ಸುಧಾಮೂರ್ತಿ ಯವರು ಮತ್ತು ಶ್ರೀಮತಿ. ಅಶ್ವಿನಿ ಪುನೀತ್ ರಾಜ್‌ಕುಮಾರ್ ರವರು ಉದ್ಘಾಟಿಸುತ್ತಿದ್ದು, ಸುಮಾರು 100 ಕ್ಕೂ ಹೆಚ್ಚು ಕಂಪನಿಗಳ ಮುಖ್ಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ ಎಂದು ರಮೇಶ್ ಎನ್. ಆರ್. ಆಡಳಿತ ಪಕ್ಷದ ಮಾಜಿ ನಾಯಕರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಅಧ್ಯಕ್ಷರು, ಭ್ರಷ್ಟಾಚಾರ ವಿರೋಧಿ ವೇದಿಕೆ (ರಿ) ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News 9341997936

You must be logged in to post a comment.