ಬೆಂಗಳೂರಿನ ಜಯನಗರ 5ನೇ ಬಡಾವಣೆಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ” ಶ್ರೀ ಸತ್ಯನಾರಾಯಣ ವ್ರತಪೂಜೆ”

” ಶ್ರೀ ಸತ್ಯನಾರಾಯಣ ವ್ರತಪೂಜೆ”
ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ
ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ  ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್‌. ಕೆ. ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ “ಪೌರ್ಣಮಿ” ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆಯನ್ನು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ಶ್ರೀ ರಾಘವೇಂದ್ರ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಮತ್ತು ಸೇವಾ ಕರ್ತೃಗಳು ಈ ಸತ್ಯನಾರಾಯಣ ವ್ರತದ  ಪೂಜೆಯ ಸಂಕಲ್ಪವನ್ನು ಮಾಡಿ ವ್ರತದ ಪೂಜೆಯಲ್ಲಿ  ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ  ಪಾತ್ರರಾದರು. ಹಾಗೂ  ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ ಮತ್ತು ವಿಶೇಷ ಉತ್ಸವಗಳು ನೆರವೇರಿತು.

City Today News 9341997936

ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ
ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಪರಮಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ  ಹಿರಿಯ ವ್ಯವಸ್ಥಾಪಕರಾದ ಆರ್ .ಕೆ.ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ, ಡಾ|| ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯರು ಶ್ರೀ ಗುರು ರಾಘವೇಂದ್ರ ವೈಭವ ರಾಯರ “ಜೀವನ ಚರಿತ್ರೆಯ” ಪ್ರವಚನದ  ಹಾಗೂ  ಭಾರತ ನೃತ್ಯ ಸಂಗೀತ ಅಕಾಡೆಮಿ ಯ ವಿದ್ಯಾರ್ಥಿಗಳಿಂದ “ಭರತನಾಟ್ಯ”ಕಾರ್ಯಕ್ರಮವನ್ನು ಶ್ರೀಮತಿ ಶುಭಾರಾಣಿ ಬೋಳಾರ್ ಇವರ ನಿರ್ದೇಶನದಲ್ಲಿ ನಡೆಯುವುದು.

City Today News 9341997936