• ಕಲಾ ಪ್ರದರ್ಶನಗಳು, ನೃತ್ಯ, ನಾಟಕ ಪ್ರದರ್ಶನಗಳು, ಛಾಯಾಗ್ರಹಣ, ಮತ್ತು ಪ್ರಮುಖ ತಜ್ಞರಿಂದ ಪ್ರಾಯೋಗಿಕ ಕಾರ್ಯಾಗಾರಗಳು ಮೂರು ದಿನಗಳ ಈ ಕಲಾ ಸಂಭ್ರಮದಲ್ಲಿ ಮೇಳೈಸಲಿವೆ
• ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಶಿಕ್ಷಣದಲ್ಲಿ ಪ್ರದರ್ಶನ ಮತ್ತು ದೃಶ್ಯ ಕಲೆಗಳ ಪರಿವರ್ತಕ ಶಕ್ತಿಯನ್ನು ಆರ್ಟಿವರ್ಸ್ ಎತ್ತಿ ತೋರಿಸುತ್ತದೆ

ಬೆಂಗಳೂರು, ಸೆಪ್ಟೆಂಬರ್ 30, 2024: ಮಕ್ಕಳಿಗಾಗಿ ಭಾರತದ ಅತಿದೊಡ್ಡ ಕಲಾ ಉತ್ಸವಗಳಲ್ಲಿ ಒಂದಾಗಿರುವ ಬಹು ನಿರೀಕ್ಷಿತ ‘ಆರ್ಟಿವರ್ಸ್ 2024’ (‘ArtiVerse 2024’) ಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಮೂರು ದಿನಗಳ ಸಂಭ್ರಮವು ವಿವಿಧ ವಯೋಮಾನದ ಯುವ ಕಲಾವಿದರನ್ನು ಒಂದೇ ಸೂರಿನಡಿ ಸೇರಿಸುತ್ತದೆ ಮತ್ತು ಅವರ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿ, ಸಂಭ್ರಮಿಸಲು ಅನುವು ಮಾಡಿಕೊಡುತ್ತದೆ. ಪ್ರದರ್ಶನ ಕಲೆಗಳು, ಅಡುಗೆ, ಜವಳಿ, ಕುಂಬಾರಿಕೆ ಮತ್ತು ಸಾಹಿತ್ಯ ಕಾರ್ಯಾಗಾರಗಳು ಮುಂತಾದ ವಿವಿಧ ವಿಭಾಗಗಳೊಂದಿಗೆ, ಸ್ಪರ್ಧಿಗಳಿಗೆ ಅನೇಕ ರೀತಿಯ ಸೃಜನಶೀಲ ಅಭಿವ್ಯಕ್ತಿಯನ್ನು ಅನ್ವೇಷಿಸಲು ಆರ್ಟಿವರ್ಸ್ ಅವಕಾಶವನ್ನು ಒದಗಿಸುತ್ತದೆ. ಸೃಜನಶೀಲತೆ ಮತ್ತು ವಿಶಿಷ್ಟ ಕೌಶಲ್ಯಗಳನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಸ್ಪರ್ಧೆಗಳು ಮತ್ತು ಚಟುವಟಿಕೆಗಳಲ್ಲಿ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆರ್ಟಿವರ್ಸ್ ಅನ್ನು ಡಾ. ಮಧುರಿ ಸಾಗಲೇ, ಪ್ರದರ್ಶನ ಮತ್ತು ದೃಶ್ಯಕಲಾ ವಿಭಾಗದ ಮುಖ್ಯಸ್ಥೆ, ಹರ್ಷ್ ಗುಪ್ತಾ, ಆರ್ಟಿವರ್ಸ್ ವಿಭಾಗದ ಮುಖ್ಯಸ್ಥ, ಮಂಜುಳಾ ಬಿ, ವಲಯ ವ್ಯಾಪಾರ ಮುಖ್ಯಸ್ಥೆ ಮತ್ತು ಲಿಶಾ ಫ್ಲಾರೆನ್ಸ್, ಕಡುಗೋಡಿ ಶಾಖೆಯ ಪ್ರಾಂಶುಪಾಲರು, ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆಯವರು ಉದ್ಘಾಟಿಸಿದರು.
K12 ಟೆಕ್ನೋ ಸರ್ವೀಸಸ್‌ನ ಪ್ರದರ್ಶನ ಮತ್ತು ದೃಶ್ಯ ಕಲೆಗಳ ಮುಖ್ಯಸ್ಥರಾದ ಡಾ. ಮಾಧುರಿ ಸಾಗಲೆ ಅವರು ಸ್ಪರ್ಧೆಯ ಕುರಿತು ಮಾತನಾಡಿ, “ಆರ್ಟಿವರ್ಸ್ 2024 ವಿದ್ಯಾರ್ಥಿಗಳಿಗೆ ಕುಂಬಾರಿಕೆ ಮತ್ತು ಜವಳಿಯಿಂದ ಆರಂಭಿಸಿ ಪ್ರದರ್ಶನ ಮತ್ತು ದೃಶ್ಯ ಕಲೆಗಳವರೆಗೆ ವಿವಿಧ ಕಲಾ ಪ್ರಕಾರಗಳಲ್ಲಿ ತಲ್ಲೀನಗೊಳಿಸುವ ಅನುಭವಗಳನ್ನು ಒದಗಿಸುತ್ತದೆ. ಈ ಪ್ರಾಯೋಗಿತ ಚಟುವಟಿಕೆಗಳು ಸೃಜನಶೀಲತೆ, ಪರಾನುಭೂತಿ, ಸಾಂಸ್ಕೃತಿಕ ಅರಿವು ಮತ್ತು ಭಾವನಾತ್ಮಕ ತೀವ್ರತೆಯನ್ನು ಬೆಳೆಸುತ್ತವೆ. ಈ ಕಾರ್ಯಕ್ರಮವು ಅಗತ್ಯ ಜೀವನ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ, ಸೃಜನಶೀಲ ಮತ್ತು ಸಹಯೋಗದ ಮನಸ್ಥಿತಿಯೊಂದಿಗೆ ಸವಾಲುಗಳನ್ನು ಎದುರಿಸಲು ಅವರನ್ನು ಪ್ರೋತ್ಸಾಹಿಸುತ್ತದೆ. ಅವರ ಕಲಾತ್ಮಕ ಪ್ರಯಾಣದ ನಿರಂತರ ವಿಕಾಸಕ್ಕೆ ಸಾಕ್ಷಿಯಾಗಲು ನಾವು ಉತ್ಸುಕರಾಗಿದ್ದೇವೆ” ಎಂದರು.

ಆತಿಥೇಯ ಶಾಲಾ ಪ್ರತಿನಿಧಿ, ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್, ಕಾಡುಗೋಡಿ ಕ್ಯಾಂಪಸ್‌ನ ಪ್ರಾಂಶುಪಾಲರಾದ ಕು. ಲಿಶಾ ಫ್ಲಾರೆನ್ಸ್ ಅವರು ಈ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, “ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಭಾವನಾತ್ಮಕ ಜಾಣ್ಮೆಯನ್ನು ಉತ್ತೇಜಿಸುವಲ್ಲಿ ಕಲೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆರ್ಟಿವರ್ಸ್ ಮಾದರಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೊಸ ದೃಷ್ಟಿಕೋನಗಳನ್ನು ಅನ್ವೇಷಿಸಲು, ಆತ್ಮವಿಶ್ವಾಸವನ್ನು ಬೆಳೆಸಲು ಮತ್ತು ಶೈಕ್ಷಣಿಕ ಮತ್ತು ವೈಯಕ್ತಿಕ ಯಶಸ್ಸಿಗೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತವೆ. ಭಾಗವಹಿಸಿ ಬೆಂಬಲ ನೀಡಿದ ಎಲ್ಲ ಪೋಷಕರು, ಶಿಕ್ಷಕರು ಮತ್ತು ಸ್ವಯಂಸೇವಕರಿಗೆ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ನಾವು ಗಮನಿಸಿದ ಉತ್ಸಾಹವು, ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಕಲೆಯ ಎಂತಹ ಪ್ರಭಾವ ಬೀರಬಲ್ಲದು ಎಂಬುದಕ್ಕೆ ಪ್ರಬಲ ಸಾಕ್ಷಿಯಾಗಿದೆ” ಎಂದು ನುಡಿದರು.
K12 ಟೆಕ್ನೋ ಸರ್ವೀಸಸ್, ಆರ್ಟಿವರ್ಸ್ ಮುಖ್ಯಸ್ಥರಾದ ಹರ್ಷ ಗುಪ್ತಾ ಅವರು ಪ್ರತಿಕ್ರಿಯಿಸಿ, “ಆರ್ಟಿವರ್ಸ್ 2024 ವಿದ್ಯಾರ್ಥಿಗಳ ಅಪರಿಮಿತ ಸೃಜನಶೀಲತೆಯನ್ನು ಸಂಭ್ರಮಿಸುತ್ತದೆ, ಅವರಿಗೆ ತಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು, ಆತ್ಮವಿಶ್ವಾಸವನ್ನು ಬೆಳೆಸಲು ಮತ್ತು ಕಲೆಯ ಮೂಲಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಪ್ರತಿಭಾ ಪ್ರದರ್ಶನ ಮಾತ್ರವಲ್ಲದೆ, ಈ ಕಾರ್ಯಕ್ರಮವು ಸಕಲರ ಯೋಗಕ್ಷೇಮವನ್ನು ಪೋಷಿಸುತ್ತದೆ, ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಸೃಜನಶೀಲ ಪರಿಶೋಧನೆ ಮತ್ತು ಸಹಕಾರಿ ಅನುಭವಗಳ ಮೂಲಕ ನಾವೆಲ್ಲರೂ ಒಂದು ಎಂಬ ಪ್ರಜ್ಞೆಯನ್ನು ಬೆಳೆಸುತ್ತದೆ” ಎಂದು ಆಶಿಸಿದರು.
ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಹೊಸ ಕಲಾತ್ಮಕ ಮಾರ್ಗಗಳನ್ನು ಅನ್ವೇಷಿಸಲು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುವ ಮೂಲಕ ಸೃಜನಶೀಲತೆಯನ್ನು ಬೆಳಗಿಸುವುದು ಆರ್ಟಿವರ್ಸ್ 2024ರ ಉದ್ದೇಶವಾಗಿದೆ. ಕಲಾತ್ಮಕ ಅಭಿವ್ಯಕ್ತಿಯ ಸಂತೋಷ ಮತ್ತು ಮಹತ್ವವನ್ನು ಆಚರಿಸುವಾಗ ಸಹಯೋಗದ ಕಲಾ ಅನುಭವಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಸಮುದಾಯದ ಪ್ರಜ್ಞೆಯನ್ನು ಬೆಳೆಸಿ, ಸಂಪರ್ಕಗಳನ್ನು ನಿರ್ಮಿಸುತ್ತದೆ. ಕಲಾ ಜಗತ್ತಿನ ಅಗಾಧ ವೈಶಾಲ್ಯವನ್ನು ಆನಂದಿಸಲು ಕಲ್ಪನೆ ಮತ್ತು ಜ್ಞಾನವು ಒಟ್ಟಿಗೆ ಸೇರುವ ಮೂರು ದಿನಗಳ ಕಲಾ ಸಂಭ್ರಮವನ್ನು ಕಣ್ತುಂಬಿಕೊಳ್ಳಿ. ಆರ್ಟಿವರ್ಸ್ ಕಾರ್ಯಕ್ರಮವನ್ನು ಭಾರತದ ಪ್ರಮುಖ ಎಡ್ ಟೆಕ್ ಕಂಪನಿ-K12 ಟೆಕ್ನೋ ಸರ್ವೀಸಸ್ ಪರಿಕಲ್ಪನೆ ಮಾಡಿ, ಆಯೋಜಿಸಿದೆ.
ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಿ: https://in.bookmyshow.com/events/artiverse-biggest-art-fest-for-kids/ET00411884?webview=true
City Today News 9341997936

You must be logged in to post a comment.