
ರಾಜ್ಯ ಸರ್ಕಾರ ಮಾಡಿರುವ PTCL ತಿದ್ದುಪಡಿ ಕಾಯ್ದೆಗೆ ಸವಾಲೊಡ್ಡಿರುವ ಶೋಷಿತ ಸಮುದಾಯಗಳ ವಿರೋಧಿ, ಕಡುಭ್ರಷ್ಟ, ಲಂಚಕೋರ ದುರಹಂಕಾರಿ ಹಿಟ್ಲರ್ ಮನಸ್ಥಿತಿ ಹೊಂದಿರುವ ಬಿಲ್ಡರ್‌ಗಳ, ಭೂಮಾಲಿಕರ ಪರವಾಗಿ ಆದೇಶಗಳನ್ನು ಮಾಡುತ್ತಿರುವ ಬೆಂಗಳೂರು ದಕ್ಷಿಣ AC ರಜಿನಿಕಾಂತ್ ರನ್ನು ಅಮಾನತ್ತುಗೊಳಿಸಿ. ಇವರ ಆಸ್ತಿಯನ್ನು ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ಮಾಡಿಸಿ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ. ಮಾನ್ಯ ಮುಖ್ಯಮಂತ್ರಿಗಳಿಗೆ, ಮಂತ್ರಿಗಳಿಗೆ ಶಾಸಕರಿಗೆ ಮನವಿ ಮತ್ತು ನಿರಂತರ ಪ್ರತಿಭಟನೆ.
1978-79ರಲ್ಲಿ PTCL ಕಾಯ್ದೆ ಜಾರಿಗೆ ಬಂದ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜನರಿಗೆ ಮಂಜೂರಾಗಿರುವ ಜಮೀನುಗಳನ್ನು ಪರಭಾರೆ ಮಾಡಲು ಸರ್ಕಾರದ ಪೂರ್ವಾನುಮತಿ ಅತ್ಯವಶ್ಯಕ ಎಂಬ ಷರತ್ತು ಇದೆ. ಕಾಯ್ದೆ ಉಲ್ಲಂಘಿಸಿ ಭೂಮಿ ಪರಭಾರೆ ಆಗಿದ್ದಲ್ಲಿ ಮರುಮಂಜೂರಾತಿ ಕೋರಿ ಮೂಲ ಮಂಜೂರುದಾರರು ಅಥವಾ ಅವರ ವಾರಸುದಾರರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿಲ್ಲ.
ನೆಕ್ಕಂಟಿ ರಾಮಲಕ್ಷ್ಮೀ V/s ಕರ್ನಾಟಕ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ “ಸಮುಚಿತ ಸಮಯದೊಳಗೆ” ಅರ್ಜಿ ಸಲ್ಲಿಸಬೇಕೆಂದು 2017ರ ಅಕ್ಟೋಬರ್ 26ರಲ್ಲಿ ಆದೇಶ ಮಾಡಿದ್ದು ಇದಾದ ಬಳಿಕ PTCL ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಉಪವಿಭಾಗಾಧಿಕಾರಿಗಳ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಿಸಿದ್ದ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿಯವರ ವಿರುದ್ಧವಾಗಿ ಸಾವಿರಾರು ಪ್ರಕರಣಗಳು ಆದೇಶವಾಗಿರುವುದನ್ನು ಖಂಡಿಸಿ ಕಾಲಮಿತಿಯನ್ನು ರದ್ದುಪಡಿಸಲು PTCLಕಾಯ್ದೆಗೆ ತಿದ್ದುಪಡಿ ಆದೇಶ ಮಾಡುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ನಿರಂತರವಾಗಿ ಧರಣಿ ನಡೆಸಲಾಗಿತ್ತು.
ದಿನಾಂಕ 15-09-2022ರಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ಮಾನ್ಯ ಸಿದ್ಧರಾಮಯ್ಯನವರು ಮತ್ತು KPCC ಕಾಯಾಧ್ಯಕ್ಷರಾಗಿದ್ದ ಸತೀಶ್ ಜಾರಕಿಹೋಳಿರವರು ಹೋರಾಟದ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ PTCL ಕಾಯ್ದೆಗೆ ಸಮಗ್ರ ತಿದ್ದುಪಡಿ ಆದೇಶ ಮಾಡುವುದಾಗಿ ಮತ್ತು ಎಲ್ಲಾ ದಲಿತ ಸಂಘಟನೆಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಎಲ್ಲಾ ದಲಿತ ಸಂಘಟನೆಗಳು ಒಗ್ಗಟ್ಟಿನಿಂದ ರಾಜ್ಯಾದ್ಯಂತ ಚುನಾವಣೆಯಲ್ಲಿ ಲಕ್ಷಾಂತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ ಕಾರಣ 2023ರಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದರು. PTCL ಕಾಯ್ದೆಗೆ ತಿದ್ದುಪಡಿ ಮಾಡಿ ಕಾಯ್ದೆಯನ್ನು ವಿಧಾನ ಸಭೆಯಲ್ಲಿ ಮಾನ್ಯ ಕಂದಾಯ ಸಚಿವರಾದ ಕೃಷ್ಣಾಭೈರೇಗೌಡರು ಮಂಡಿಸಿ ದಿನಾಂಕ 21-07-2023ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿ ದಲಿತ ಕುಟುಂಬಗಳಿಗೆ ಅನುಕೂಲ ಕಲ್ಪಿಸಿರುವುದು ಸ್ವಾಗತಾರ್ಹ ವಿಷಯ.
ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿ ದಿನಾಂಕ 30-06-2023ರಲ್ಲಿ ಬಂದ ರಜಿನಿಕಾಂತ್ ರವರು ಕೇವಲ 6 ತಿಂಗಳಲ್ಲೆ ಸುಮಾರು 480-500 RA ಪ್ರಕರಣಗಳನ್ನು ಆದೇಶ ಮಾಡಿದ್ದು, ಸದರಿ ಪ್ರಕರಣಗಳಲ್ಲಿ ಕ್ರಯಪತ್ರಗಳು ಆಗಿದ್ದರೂ ಸಹ ಕಾನೂನು ಉಲ್ಲಂಘಿಸಿ ಆದೇಶಗಳನ್ನು ಮಾಡಿರುತ್ತಾರೆ. ಸುಮಾರು 450 PTCL ಪ್ರಕರಣಗಳು ದಾಖಲಾಗಿದ್ದರೂ ಪ್ರಕರಣಗಳನ್ನು ನಡೆಸದೆ ನಿರ್ಲಕ್ಷ್ಯ ವಹಿಸಿದ್ದರ ವಿರುದ್ಧ ಪತ್ರಗಳನ್ನು ನೀಡಿ ಮನವಿ ಮಾಡಿದಾಗ ಸರ್ಕಾರ ಮಾಡಿರುವ PTCL ಕಾಯ್ದೆ ತಿದ್ದುಪಡಿ ಆದೇಶದಂತೆ ಮೂಲ ಮಂಜೂರಿದಾರರ ಪರವಾಗಿ ಆದೇಶ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿ ಬಡವರ, ದಲಿತರ, ಸಂಘಟನೆಯವರ ಯಾವುದೇ ಕೆಲಸಗಳನ್ನು ಮಾಡದೆ ಕಛೇರಿಯಲ್ಲಿ ಜನಸಾಮಾನ್ಯರಿಗೆ ಸಿಗದೆ ತಮ್ಮ ವೃತ್ತಿಯನ್ನು ವ್ಯಾಪಾರಿ ಮನೋಭಾವದಲ್ಲಿ ತೊಡಗಿಸಿಕೊಂಡಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳಿಗೆ ಸಾರ್ವಜನಿಕರಿಗೆ ಮತ್ತು ಸಂಘಟನೆಯವರಿಗೆ ಸ್ಪಂದಿಸುವಂತ A.C. ಗೆ ನಿರ್ದೇಶನ ನೀಡಿರುವುದನ್ನು ಲೆಕ್ಕಿಸದೆ ಅದೇ ರೀತಿ ವರ್ತಿಸುತ್ತಿರುವುದನ್ನು ಉಗ್ರವಾಗಿ PVC ಖಂಡಿಸುತ್ತೇವೆ.

ರಾಜ್ಯ ಸರ್ಕಾರ PTCL ಕಾಯ್ದೆಗೆ ತಿದ್ದುಪಡಿ ಆದೇಶ ಮಾಡಿರುವುದರಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳವರಿಗೆ ಮಂಜೂರಾದ ಜಮೀನುಗಳನ್ನು ಕಡ್ಡಾಯವಾಗಿ ಅವರಿಗೆ ಮರುಸ್ಥಾಪಿಸಬೇಕಾಗಿದ್ದರೂ ಸಹ ಕಾಯ್ದೆಯನ್ನು ರಕ್ಷಿಸಬೇಕಾದ ಉಪವಿಭಾಗಾಧಿಕಾರಿ ಕಾಯ್ದೆಯನ್ನು ಉಲ್ಲಂಘಿಸಿ ಕ್ರಯದಾರರೊಂದಿಗೆ ಶಾಮೀಲಾಗಿ ಅವರ ಪರವಾಗಿ ಆದೇಶಗಳನ್ನು ಮಾಡುವುದರ ಮೂಲಕ ಲಕ್ಷಾಂತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕುಟುಂಬಗಳನ್ನು ಬೀದಿಪಾಲು ಮಾಡುವ ಸನ್ನಿವೇಶ ಇರುವುದನ್ನು ಅತಿಗಂಭೀರವಾಗಿ ಪರಿಗಣಿಸಿ ಕಾನೂನಿನ ಭಯವಿಲ್ಲದೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿರುವ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯನ್ನು ಅಮಾನತ್ತುಗೊಳಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇವೆ.
SC/ST ಮೀಸಲಾತಿ ಕ್ಷೇತ್ರಗಳಲ್ಲಿ ಗೆದ್ದಿರುವ ಮಂತ್ರಿಗಳು, ಶಾಸಕರು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಒತ್ತಡತಂದು ಸುಪ್ರೀಂಕೋರ್ಟ್ ಮತ್ತು ಉಚ್ಚನ್ಯಾಯಾಲಯದಲ್ಲಿ ಸರ್ಕಾರದಿಂದ ಪಿಶಿಷನ್ ದಾಖಲಿಸಿ ಪರಿಶಿಷ್ಟ ಜಾತಿ/ಪ.ಪಂಗಡಗಳ ಪರವಾಗಿ ಭೂಮಿಗಳನ್ನು ಆದೇಶ ಮಾಡಿಸಬೇಕು.
ಹಕ್ಕೊತ್ತಾಯಗಳು
ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿರುವ ರಜಿನಿಕಾಂತ್ ರವರು ಸರ್ಕಾರ PTCL ಕಾಯ್ದೆಗೆ ತಿದ್ದುಪಡಿ ಆದೇಶ ಮಾಡಿದ್ದರೂ ಈ ಕಾಯ್ದೆಯನ್ನು ರಕ್ಷಿಸಬೇಕಾದ ಉಪವಿಭಾಗಾಧಿಕಾರಿಯೇ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ಬಿಲ್ಡರ್‌ಗಳ ಭೂಮಾಲೀಕರೊಂದಿಗೆ ಶಾಮೀಲಾಗಿ ಭ್ರಷ್ಟಾಚಾರದಲ್ಲಿ ತೊಡಗಿ ಅವರ ಪರವಾಗಿ ಆದೇಶಗಳನ್ನು ಮಾಡಿರುವದರಿಂದ ಇವರು ಇದೇ ಹುದ್ದೆಯಲ್ಲೇ ಮುಂದುವರೆದರೆ ಲಕ್ಷಾಂತರ ದಲಿತ ಕುಟುಂಬಗಳು ಬೀದಿಪಾಲಾಗುವ, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸನ್ನಿವೇಶ ಇರುವುದರಿಂದ ಸರ್ಕಾರ ಇವರನ್ನು ತಕ್ಷಣ ಅಮಾನತ್ತುಗೊಳಿಸಿ ಇವರ ಆಸ್ತಿಯನ್ನು ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ಮಾಡಿಸಿ ಇವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಇವರು ಹುದ್ದೆಗೆ ಬಂದ 6 ತಿಂಗಳಲ್ಲೇ ಸುಮಾರು 480-500 RA ಪ್ರಕರಣಗಳನ್ನು ಆದೇಶ ಮಾಡಿದ್ದು ಅನೇಕ ಪ್ರಕರಣಗಳಲ್ಲಿ ಕ್ರಯಪತ್ರಗಳಾಗಿದ್ದರೂ ಕಾನೂನು ಉಲ್ಲಂಘಿಸಿ ಭ್ರಷ್ಟಾಚಾರದಲ್ಲಿ ತೊಡಗಿ ಆದೇಶ ಮಾಡಿರುವದರಿಂದ ನೂರಾರು ಬಡವರಿಗೆ ತೊಂದರೆ ಆಗಿರುವುದರಿಂದ ಇವರು ಮಾಡಿರುವ ಎಲ್ಲ ಆದೇಶಗಳನ್ನು ತನಿಖೆಗೊಳಪಡಿಸಿ ಶಿಕ್ಷೆ ವಿಧಿಸಬೇಕು.
ಬೆಂಗಳೂರು ದಕ್ಷಿಣ-ಉತ್ತರ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಸಾವಿರಾರು PTCL ಪ್ರಕರಣಗಳು ದಾಖಲಾಗಿದ್ದು ಎಲ್ಲಾ ಪ್ರಕರಣಗಳನ್ನು ಶೀಘ್ರವಾಗಿ ಮೂಲಮಂಜೂರುದಾರರಿಗೆ/ವಾರಸುದಾರ ಪರವಾಗಿ ಆದೇಶಗಳನ್ನು ಮಾಡಲು ಸರ್ಕಾರ ಕಠಿಣ ನಿರ್ದೇಶನ ನೀಡಬೇಕು.
ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ PTCL ಕಾಯ್ದೆಯಡಿ ಮಾಡುವ ಆದೇಶಗಳನ್ನು ತಕ್ಷಣ ಜಾರಿಗೊಳಿಸಿ ಖಾತೆ ವರ್ಗಾವಣೆ ಮಾಡಿ ಭೂಮಿಯ ಭೌತಿಕ ಸ್ವಾಧೀನವನ್ನು ಬಿಡಿಸಿಕೊಡಬೇಕು.
PTCL ಕಾಯ್ದೆಯಡಿ ಉಚ್ಚನ್ಯಾಯಾಲಯ, ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮಾಡುವ ಆದೇಶ ಅಥವಾ ತಡೆಯಾಜ್ಞೆಯನ್ನು ಪಹಣಿಯಲ್ಲಿ ನಮೂದಿಸಲು ವರದಿಗಳನ್ನು ಪಡೆದು 1-2 ತಿಂಗಳ ಕಾಲ ಖಾತೆ ಮಾಡದೆ ನಿಧಾನ ಅನುಸರಿಸುತ್ತಿರುವ ತಾಲ್ಲೂಕು ವಿಶೇಷ ತಹಸೀಲ್ದಾರವರುಗಳಿಗೆ ಶೀಘ್ರವಾಗಿ ಜಾರಿಗೊಳಿಸುವಂತೆ ಕಠಿಣ ನಿರ್ದೇಶನ ನೀಡಬೇಕು.
ಈ ಕಾರ್ಯಕ್ರಮದಲ್ಲಿ ನೊಂದಿರುವ ಎಲ್ಲಾ ಸಾವಿರಾರು ದಲಿತ ಕುಟುಂಬಗಳು, ಶೋಷಿತ ಸಮುದಾಯಗಳು ಭಾಗವಹಿಸಿ ನಿರಂತರ ಹೋರಾಟಗಳನ್ನು ಮಾಡುವುದರ ಮೂಲಕ ಸಾವಿರ ಸಾರಿ ದಿಕ್ಕಾರಗಳನ್ನು ಹೇಳಿವುದರ ಮೂಲಕ A.C. ರಜನಿಕಾಂತ್ ರವರನ್ನು ಹುದ್ದೆಯಿಂದ ತೆಗಿಸಬೇಕು ಎಂದು ಪ್ರಜಾ ವಿಮೋಚನಾ ಚಳವಳಿ (ರಿ) ಪಿವಿಸಿ,ರಾಜ್ಯ ಸಮಿತಿ ವತಿಯಿಂದ ರಾಜ್ಯ ಸರ್ಕಾರವನ್ನು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಒತ್ತಾಯಿಸಿದರು.
City Today News 9341997936

You must be logged in to post a comment.