ಆನಂದ ಮಾರ್ಗ, ಬೆಂಗಳೂರು ವತಿಯಿಂದ ಮೂರು ದಿನಗಳ ಪ್ರಾತಕ್ಷಿಕ ಕಾರ್ಯಾಗಾರ

ಆನಂದ ಮಾರ್ಗ, ಬೆಂಗಳೂರು ವತಿಯಿಂದ ಮೂರು ದಿನಗಳ ಪ್ರಾತಕ್ಷಿಕ ಕಾರ್ಯಾಗಾರವನ್ನು ಕೇಂದ್ರ ತರಬೇತು ಸಂಸ್ಥೆಯ ಹಿರಿಯ ಅನುಭವವುಳ್ಳ  ಆಚಾರ್ಯ ಪ್ರಿಯತತೋಷಾನಂದ ಅವಧೂತರು ಫೆಬ್ರವರಿ 16, 17, ಹಾಗೂ 18ನೇ ತಾರೀಕು 2024ರಂದು ಬಿಬಿಎಂಪಿ ಸಮುದಾಯ ಭವನ 4ನೇ ಹಂತ, ಯೆಲಹಂಕ ನ್ಯೂ ಟೌನ್,ಬೆಂಗಳೂರಿನಲ್ಲಿ, ನಡೆಸಿಕೊಡುತ್ತಾ ಮೊದಲಿಗೆ ಬಾಬಾ ಅಥವಾ ಪರಮಾತ್ಮನ ದಿವ್ಯಾಮಂತ್ರವಾದ “ಬಾಬಾನಾಮ್ ಕೇವಲಮ್”ನಿಂದ ಪ್ರಾರಂಭಿಸಿ ಅವತಾರ್ ಪುರುಷ ಪರಮಪಿತ ಬಾಬಾ (ಪ್ರಭಾತ್ ರಂಜನ್ ಸರ್ಕಾರ )
ರವರ ಶ್ರೇಷ್ಠ ವಾಕ್ಯಗಳನ್ನು ನೆನಪಿಸುತ್ತಾ
ಸದಾಶಿವನ ಅನೇಕ ಕೊಡುಗೆಯನ್ನು ಮಾನವತೆಗೆ  ಕೊಟ್ಟ ಬಗೆಯನ್ನು ವಿವರಿಸಿದರು.

ಮುಂದೆ ವಿವರಿಸುತ್ತ ಮಾನವ ಜೀವ ಪರಮಾತ್ಮನ, ಪರಮ ಬ್ರಹ್ಮಣ ಅಂಶ ವಾಗಿದ್ದು ಈ ಪರಮ ಚೇತನ ಮನುಷ್ಯ ಪಶು ಪಕ್ಷಿಗಳ ಸೃಷ್ಟಟಿಗೆ ಕಾರಣಿಬೂತನಾಗಿದ್ದು ಇದರ ಶ್ರೇಷ್ಠತೆ lಯನ್ನು ನಾವೆಲ್ಲ ಅರಿತು ಕೊಳ್ಳಬೇಕೆಂದು ತಿಳಿಸಿದರು

ಇದರ ಸೂಕ್ಷ್ಮತೆ ಅರಿಯಲು ನಾವುಗಳು ಬ್ರಹ್ಮವಿಜ್ಞಾನವಾದ ಅಷ್ಟoಗಗಳಾದ ಯಮ, ನಿಯಮ, ಆಸನ ಯೋಗ ಪ್ರಾಣಯಾಮ ಧ್ಯಾನ ಧಾರಣ ಸಮಾಧಿಗಳ ಪರಿಣಿತಿ ಹೊಂದಬೇಕೆಂದು ತಿಳಿಸಿದರು

ಈ ನಿಟ್ಟಿನಲ್ಲಿ ಆನಂದಮಾರ್ಗವು ಜಾತಿ ಕುಲ ಮತ ದೇಶ ಬಾಷೆ ಲಿಂಗ ಬೇಧಗಳಿಲ್ಲದೆ ಸರ್ವರಿಗೂ ಈ ವಿಷಯಗಳನ್ನ ಕಲಿಸಿ  ಆಧ್ಯಾತ್ಮಿಕ ಧಾರ್ಮಿಕ ಸಾಮಾಜಿಕ ಆರ್ಥಿಕ್ ಸರ್ವೋತೋಮುಖ ಬೆಳವಣಿಗೆ ಉಂಟಾಗುವಂತೆ ಮಾಡುತ್ತದೆ. ಈ ಬೆಳವಣಿಗೆಯಿಂದ ಸದ್ವಿಪ್ರ ಸಮಾಜ ನಿರ್ಮಿತವಾಗುತ್ತದೆ

ವೃದ್ದಿಪರ ಸಂಪನ್ಮೂಲಗಳ ಉತ್ತಮ ಕ್ರೋಡೀಕೃತ ಸಂಪೂರ್ಣ ಸದ್ಬಳಕೆಯ ಸೂತ್ರಗಳ (prout)ಅರಿವಿನಿಂದ ಪಾಲಿ ಕೆಯಿಂದ ವಿತ್ತೀಯ ಸ್ವಾತಂತ್ರ, ಉದ್ಯೋಗ ಸೃಷ್ಟಿ , ವಿಭಾಜೀಕೃತ ವಿತ್ತಿಯ ಸ್ವತಂತ್ರ, ಏರ್ಪಟ್ಟು “ವಸುದೈವ ಕುಟುಂಬಕಮ್ ಎಂಬ ಒಟ್ಟಾರೆ, ಮನುಕುಲದ ಸಂತೋಷ,ಸಾಮರಸ್ಯ , ಸುಮಧುರ ಬಾಳ್ವೆಗೆ ತಳಹದಿಯಾಗುತ್ತದೆಂದು ತಿಳುಸಿದರು.

City Today News 9341997936