
ಬೆಂಗಳೂರು, ಜನವರಿ 7, 2024: ಸಾವಯವ ಹಾಗೂ ಸಿರಿಧಾನ್ಯಕ್ಕೆ ಇಡೀ ದೇಶಕ್ಕೆ ನಮ್ಮ ಬೆಂಗಳೂರು ರಾಜಧಾನಿ ಎಂದು ಹೇಳಬಹುದು. ಬೆಂಗಳೂರಿನಿಂದ ಆರಂಭವಾದಂತಹ ಸಾವಯವ ಚಳುವಳಿ ನಮ್ಮ ಇಡೀ ದೇಶಕ್ಕೆ ಹರಡಿದೆ.ಅದೇ ರೀತಿಯಲ್ಲಿ ನಮ್ಮ ಕರ್ನಾಟಕದಲ್ಲಿ ಆರಂಭವಾದಂತಹ ಸಿರಿಧಾನ್ಯದಲ್ಲಿನ ಚಳುವಳಿ ದೇಶ ವಿದೇಶಕ್ಕೆ ಹರಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕರ್ನಾಟಕ ಸರ್ಕಾರ ಆಯೋಜಿಸಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭ ಅರಮನೆ ಮೈದಾನದಲ್ಲಿನ ತ್ರಿಪುರಾವಾಸಿನಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ, ಕೃಷಿ ಸಚಿವರಾದ ಎನ್. ಚೆಲುವರಾಯ ಸ್ವಾಮಿ ಹಾಗೂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಮತ್ತೀತರ ಗಣ್ಯರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಚಿವ ಕೃಷ್ಣ ಬೈರೇಗೌಡ ಮಾತನಾಡುತ್ತಾ,“ಸಾವಯವ ಹಾಗೂ ಸಿರಿಧಾನ್ಯಕ್ಕೆ ಇಡೀ ದೇಶಕ್ಕೆ ನಮ್ಮ ಬೆಂಗಳೂರು ರಾಜಧಾನಿ ಎಂದು ಹೇಳಬಹುದು. ಬೆಂಗಳೂರಿನಿಂದ ಆರಂಭವಾದಂತಹ ಸಾವಯವ ಚಳುವಳಿ ನಮ್ಮ ಇಡೀ ದೇಶಕ್ಕೆ ಹರಡಿದೆ.ಅದೇ ರೀತಿಯಲ್ಲಿ ನಮ್ಮ ಕರ್ನಾಟಕದಲ್ಲಿ ಆರಂಭವಾದಂತಹ ಸಿರಿಧಾನ್ಯದಲ್ಲಿನ ಚಳುವಳಿ ದೇಶ ವಿದೇಶಕ್ಕೆ ಹರಡಿದೆ. ಬೆಂಗಳೂರನ್ನು ಮಿಲ್ಲೇಟ್ ಕ್ಯಾಪಿಟಲ್ ಎನ್ನಬಹುದು.ನಮ್ಮ ರೈತರು ಬೆಳೆದಂತಹ ಸಾವಯವ ಸಿರಿಧಾನ್ಯ ಉತ್ಪನ್ನಗಳಿಗೆ ಇವತ್ತು ಮಾರಕುಟ್ಟೆ ಸೃಷ್ಟಿಯಾಗಿ ರೈತರಿಗೂ ಲಾಭ ಸಿಗುತ್ತಿದೆ” ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಮಾತನಾಡುತ್ತಾ, ಬೆಂಗಳೂರಿನಲ್ಲಿ ಈ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ.ಇಲ್ಲಿ ಸಾಕಷ್ಟು ಸಾವಯವ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳನ್ನು ನೋಡುವ ಅವಕಾಶ ಸಿಕ್ಕಿತು.ಸಿರಿಧಾನ್ಯವನ್ನು ಹಿಂದಿನ ಕಾಲದಿಂದಲೂ ನಮ್ಮ ಪೂವರ್ಜರು ಉಪಯೋಗಿಸುತ್ತಿದ್ದರು.ಇದೊಂದು ನೈಸರ್ಗಿಕವಾದ ಉತ್ಪನ್ನವಾಗಿದೆ. ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು” ಎಂದರು.
ಸಚಿವ ಚೆಲುವರಾಯ ಸ್ವಾಮಿ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ರೈತರು ಸಾಕಷ್ಟು ಸಮಸ್ಯೆಗಳನ್ನೂ ಎದುರಿಸುತ್ತಿದ್ದರೂ ತಾವೇ ಬೆಳೆದ ಉತ್ಪನ್ನಗಳನ್ನು ರಾಜ್ಯದ ಜತೆಗೆ ಇತರೆ ರಾಜ್ಯಕ್ಕೂ ಮಾರಾಟ ಮಾಡುತ್ತಿದ್ದಾರೆ.16 ರಾಜ್ಯಗಳು ಈ ಮೇಳಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಷಯವಾಗಿದೆ. ಸಾಕಷ್ಟು ಮಾರಾಟಗಾರರು ಭಾಗವಹಿಸಿದ್ದಾರೆ. 150 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಇದೊಂದ ಅರ್ಥಪೂರ್ಣವಾದ ಅಂತರಾಷ್ಟ್ರೀಯ ಮೇಳವಾಗಿದೆ. ಕಡಿಮೆ ನೀರಿನಲ್ಲಿ, ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಈ ಸಿರಿಧಾನ್ಯ. ಆರೋಗ್ಯದ ಜೊತೆಗೆ ರೈತರಿಗೆ ಆರ್ಥಿಕ ಸಬಲೀಕರಣ ನೀಡುತ್ತದೆ. ಆರ್ಥಿಕ ಸ್ಥಿರತೆ ಸಾಧಿಸುವುದಕ್ಕೆ ಇದು ಸಹಾಯಕವಾಗುತ್ತದೆ” ಎಂದರು.

ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡುತ್ತಾ, “ನಮ್ಮ ಹಿಂದಿನವರು ದೇಹದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಏನ್ನೆಲ್ಲಾ ಆಹಾರ ಸೇವಿಸುತ್ತಿದ್ದರೋ ಈಗ ಮತ್ತೆ ಅದನ್ನು ನಾವು ಅನುಸರಿಸುವುಕ್ಕೆ ಶುರುಮಾಡಿದ್ದೇವೆ.ಅದರಲ್ಲಿ ಒಂದು ಈ ಸಿರಿಧಾನ್ಯ. ಈ ಸಮ್ಮೇಳನ ಬಹಳ ಉತ್ತಮವಾಗಿ ನಡೆದಿದೆ. ಇಡೀ ದೇಶಕ್ಕೆ ಇದು ಮಾದರಿಯಾಗಿದೆ. ಈ ಸಿರಿಧಾನ್ಯದಲ್ಲಿಯೇ ಸಾಕಷ್ಟು ವಿಟಮಿನ್ಸ್ ಗಳು ಇವೆ. ಮಾತ್ರೆಗಳನ್ನು ಸೇವಿಸುವ ಬದಲು ಇದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ” ಎಂದು ಹೇಳಿದರು.
ರಾಗಿ, ಹಾರಕ, ಸಾಮೆ,ಊದಲು, ಕೊರಲು ಹಾಗೂ ಬರಗು, ನವಣೆಯಂತಹ ವೈವಿಧ್ಯಮಯ ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ಸಿಹಿ ತಿನಿಸುಗಳು, ಕಾಡು ಜೇನು, ಜೋನಿ ಬೆಲ್ಲ, ನೈಸರ್ಗಿಕ ಬೆಲ್ಲ, ನಾಟಿ ಬೆಲ್ಲ, ಅಗಸೆ ಬೀಜ, ಸೂರ್ಯಕಾಂತಿ ಬೀಜ, ಚಿಯಾ ಸೀಡ್, ಪಾಲಿಶ್ ರಹಿತ ಧಾನ್ಯ ಚಟ್ನಿಪುಡಿ, ಉಪ್ಪಿನಕಾಯಿ, ದೇಸೀ ತಳಿಯ ಸಿರಿಧಾನ್ಯ, ಕೈಮಗ್ಗ, ಖಾದಿ, ಕರಕುಶಲ ಉತ್ಪನ್ನಗಳು ಈ ಮೇಳದಲ್ಲಿ ಲಭ್ಯವಿದ್ದವು.
ಕರ್ನಾಟಕ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಣಿಪುರ, ಬಿಹಾರ ಸೇರಿ ದೇಶದ 17 ರಾಜ್ಯಗಳಿಂದ ಸಿರಿಧಾನ್ಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಸಿರಿಧಾನ್ಯ ಮತ್ತು ಸಾವಯವ ಆಹಾರ ಮಳಿಗೆ, ಅಂತಾರಾಷ್ಟ್ರೀಯ ಮತ್ತು ಮಾರುಕಟ್ಟೆದಾರರ ಸಭೆ, ಗ್ರಾಹಕರ ಸಂಪರ್ಕ, ರೈತರ ಕಾರ್ಯಾಗಾರ ಪೆವಿಲಿಯನ್ಗಳನ್ನು ಸ್ಥಾಪಿಸಲಾಗಿದೆ. ಸಾವಯವ ಮತ್ತು ನೈಸರ್ಗಿಕ ಉತ್ಪಾದಕರು, ಸಗಟು, ಚಿಲ್ಲರೆ ವ್ಯಾಪಾರಿಗಳು, ಸ್ವಸಹಾಯ ಗುಂಪುಗಳು, ರ್ತದಾರರು ಮತ್ತು ಆಮದುದಾರರು ಸೇರಿ ವ್ಯಾಪಾರ ಮತ್ತು ಉತ್ತೇಜನ, ಜ್ಞಾನ ಹಂಚಿಕೆ ವೇದಿಕೆ, ಸಿರಿಧಾನ್ಯ ಸಮ್ಮೇಳನ, ರೈತರ ಕಾರ್ಯಾಗಾರಗಳು, ಬಿ2ಬಿ, ಖರೀದಿದಾರರು ಮತ್ತು ಮಾರಾಟಗಾರರ ಭೇಟಿ, ಗ್ರಾಹಕ ಸಂಪರ್ಕ ಕಾರ್ಯಕ್ರಮ ಮಳಿಗೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇದಲ್ಲದೇ ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆಗೆ ಒತ್ತು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ.
City Today News 9341997936

You must be logged in to post a comment.