
ಕರ್ನಾಟಕ ರಾಜ್ಯದ ಬಹುಮುಖ್ಯ ಸಮುದಾಯಗಳಲ್ಲೊಂದಾದ ಬ್ಯಾರಿ ಸಮುದಾಯದ ಜನರ ಸಾಮಾಜಿಕ ಸಂಘಟನೆಯಾಗಿದೆ ಬ್ಯಾರಿ ಸೆಂಟ್ರಲ್ ಕಮಿಟಿ ಬೆಂಗಳೂರು, ಅಂದಾಜು ಪ್ರಕಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸರಿ ಸುಮಾರು 1ಲಕ್ಷದಷ್ಟು ಬ್ಯಾರಿ ಸಮುದಾಯದ ಜನರು ಶಿಕ್ಷಣ ಉದ್ಯೋಗ, ವ್ಯವಹಾರ,ಮಾಡಿಕೊಂಡು ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ಬ್ಯಾರಿ ಸಮುದಾಯವು ಬಹುಮುಖ್ಯವಾಗಿ ವ್ಯಾಪಾರವನ್ನು ನೆಚ್ಚಿಕೊಂಡಿರುವ ಸಮುದಾಯವಾಗಿದೆ. ಬ್ಯಾರಿ ಸಮುದಾಯದ ಎಲ್ಲಾ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಮತ್ತು ಬ್ಯಾರಿ ಸಮುದಾಯದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋಣದಿಂದ ಬ್ಯಾರಿ ಸೆಂಟ್ರಲ್ ಕಮಿಟಿ ಎಂಬ ಸಂಘಟನೆಯನ್ನು ರಚಿಸಲಾಗಿದೆ. ಈಗಾಗಲೇ ಹಲವು ಸಾಮಾಜಿಕೆ ಸೇವೆಗಳನ್ನು ಸಂಘಟನೆಯು ಮಾಡುತ್ತಾ ಬಂದ್ದಿದ್ದು ಅದರಲ್ಲಿ ಪ್ರಮುಖವಾಗಿ ಇತ್ತಿಚ್ಚೆಗೆ ನಡೆದ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮತದಾರರಿಗೆ ಮತದಾನದ ಜಾಗೃತಿ ಮೂಡಿಸಿ ಪ್ರಯಾಣಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಒಂದು ಸಂಘಟನೆಯನ್ನು ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲಾ ಬ್ಯಾರಿ ಸಮುದಾಯದ ಜನರನ್ನು ತಲುಪುವ ಉದ್ದೇಶದಿಂದ ಬೃಹತ್ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ಸಂಘಟನೆಯ ಪ್ರಮುಖ ಕೆಲವು ಉದ್ದೇಶಗಳು ಈ ಕೆಳಗಿನಂತಿದೆ
1)ಬೆಂಗಳೂರಿನಲ್ಲಿರುವ ಎಲ್ಲಾ ಬ್ಯಾರಿ ಸಮುದಾಯದ ವ್ಯಕ್ತಿಗಳನ್ನು ಒಂದು ವೇಧಿಕೆಯಲ್ಲಿ ಒಟ್ಟು ಸೇರಿಸುವುದು
2)ಬ್ಯಾರಿ ಸಮುದಾಯದ ವ್ಯಕ್ತಿಗಳು ಬೆಂಗಳೂರು ಮತ್ತು ಸುತ್ತ ಮುತ್ತಲಿನ ಭಾಗಗಲ್ಲಿ ಏನಾದರು ಅವಘಡ, ಅಪಘಾತಗಳಿಗೆ ಒಳಗಾದಾಗ ತಕ್ಷಣ ನೆರವಿಗೆ ಬರುವುದು
3)ಉನ್ನತ ವ್ಯಾಸಂಗಕ್ಕೆ ಬೆಂಗಳೂರಿಗೆ ಬರುವ ಬ್ಯಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಸಹಕಾರ, ನೆರವು ಒದಗಿಸುವುದು
4) ಬೆಂಗಳೂರಿನಲ್ಲಿ ಉದ್ಯೋಗ, ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬ್ಯಾರಿಗಳು ಅನ್ಯಾಯಕ್ಕೊಳಗಾಗುವ ಸಂದರ್ಭದಲ್ಲಿ ಕಾನೂನಾತ್ಮಕ ನೆರವು ಒದಗಿಸುವುದು
5) ಬ್ಯಾರಿ ಸಮುದಾಯದ ಜನರ ಶೈಕ್ಷಣಿಕ,ಆರ್ಥಿಕ,ರಾಜಕೀಯ ಅಭಿವೃದ್ಧಿಗೆ ಶ್ರಮಿಸುವುದು.
ಈ ಮೇಲೆ ತಿಳಿಸಿದ ಎಲ್ಲಾ ಪ್ರಮುಖ ದ್ವೇಯೋದ್ದೇಶಗಳನ್ನು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಬಹಳ ಒತ್ತುಕೊಟ್ಟು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಸಂಘಟನೆಯ ಇನ್ನಷ್ಟು ಎತ್ತರಕ್ಕೆ ಬೆಳೆಸುವ ದೃಷ್ಟಿಕೋಣದಿಂದ ಬೆಂಗಳೂರಿನಾದ್ಯಂತ ಇರುವ ಬ್ಯಾರಿ ಸಮುದಾಯದ ವ್ಯಕ್ತಿಗಳನ್ನು ಒಟ್ಟುಸೇರಿಸುವ ಮತ್ತು ನಮ್ಮ ಸಂಘಟನೆಯೊಂದಿಗೆ ಗುರುತಿಸಿಕೊಳ್ಳುವ ಸಲುವಾಗಿ 2024/25 ರ ಸದಸ್ಯತ್ವ ಅಭಿಯಾನ ಜುಲೈ 1ರಿಂದ ಜುಲೈ 31 ರ ವರೆಗೆ ನಡೆಸಲು ತೀರ್ಮಾನಿಸಿದ್ದು, ಇದರ ಅಧಿಕೃತ ಪೋಸ್ಟರ್ ಈ ಪ್ರೆಸ್ ಮೀಟ್ ಮುಖಾಂತರ ಬಿಡುಗಡೆಯನ್ನು ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿದ ಶಬೀರ್ ಬ್ರಿಗೇಡ್-ಅಧ್ಯಕ್ಷರು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಮತ್ತು ಉಪಸ್ಥಿತರಿದ್ದ
ಪ್ರಧಾನ ಕಾರ್ಯದರ್ಶಿ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು-ಸಲೀಂ ಸಿ.ಎಂ, ಮತ್ತು ಸಂಶುದ್ದೀನ್ ಕುಕ್ಕಾಜೆ- ಉಪಾಧ್ಯಕ್ಷರುಗಳು, ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು, ಇರ್ಷಾದ್ ಬಜಾಲ್ ಮತ್ತು ಬಶೀರ್ಅಡ್ಯನಡ್ಕ -ಕಾರ್ಯದರ್ಶಿಗಳು,ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಮಾಡಿದರು.
City Today News 9341997936

You must be logged in to post a comment.