“ಬ್ರಿಟನ್ ಮಾಜಿ ಪ್ರಧಾನ ಮಂತ್ರಿ ಜಯನಗರದ ಗುರು ರಾಯರ ದರ್ಶನ ಪಡೆದುಕೊಂಡ ಋಷಿ ಸುನಕ್ ದಂಪತಿ”

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಶ್ರೀಮತಿ ಸುಧಾ ನಾರಾಯಣ ಮೂರ್ತಿ ದಂಪತಿಗಳು ಕುಟುಂಬ ಸಮೇತ ಹಾಗೂ ಅವರ ಅಳಿಯಂದರಾದ ಬ್ರಿಟನ್ ದೇಶದ  ಮಾಜಿ  ಪ್ರಧಾನಮಂತ್ರಿ ಋಷಿ ಸುನಕ್ ದಂಪತಿರವರು  ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಆಗಮಿಸಿ ಗುರು ರಾಯರ ದರ್ಶನ ಪಡೆದು   ಕಾರ್ತಿಕ ಮಾಸದ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ದೀಪಗಳನ್ನು ಬೆಳಗಿಸಿ  ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ  ಪ್ರಾರ್ಥನೆ ಸಲ್ಲಿಸಿದರು  ಈ ಸಂದರ್ಭದಲ್ಲಿ  ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್,  ಕೆ ವಾದಿಂದ್ರಾಚಾರ್ಯರು  ರಾಯರ ಶೇಷ ವಸ್ತ್ರ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಅರ್ಚಕ ವರ್ಗದವರು “ವೇದ ಘೋಷ ಮಂತ್ರ” ಪೂರ್ಣ ಕುಂಭ ಸ್ವಾಗತದೊಂದಿಗೆ ಸನ್ನಿಧಿಗೆ ಬರಮಾಡಿಕೊಂಡರು.

City Today News 9341997936