ಝೀರೋ-ಎಮಿಷನ್ ಯಂತ್ರ ಕಾರ್ಯಾಚರಣೆಗಳಿಗೆ ಹೊಸ ಸೇವೆಗಳನ್ನು ಒದಗಿಸುವುದರ ಮೂಲಕ ನಿರ್ಮಾಣ ಕ್ಷೇತ್ರದ ಉತ್ತಮ ಭವಿಷ್ಯ ರಚನೆ
ಇಸಿ500 50-ಟನ್ ಎಲೆಕ್ಟ್ರಿಕ್ ಎಕ್ಸ್ಕವೇಟರ್ ಗಳನ್ನು ಪರಿಚಯಿಸಲಾಗುತ್ತದೆ. ಜೊತೆಗೆ ಭವಿಷ್ಯದ ಆಲ್-ಎಲೆಕ್ಟ್ರಿಕ್ ರೋಡ್ ಕಾಂಪ್ಯಾಕ್ಟರ್, ಭಾರತದಲ್ಲಿ ಅಭಿವೃದ್ಧಿಪಡಿಸಿದ ಡಿಡಿ40 ಎಲೆಕ್ಟ್ರಿಕ್ ಮತ್ತು ಪಿಟಿ220 ಎಲೆಕ್ಟ್ರಿಕ್ ಗಳ ಪ್ರದರ್ಶನ. ಇಸಿ80 ಎಲೆಕ್ಟ್ರಿಕ್ ಅನಾವರಣಗೊಳಿಸಲಾಗಿದೆ ಮತ್ತು ಗ್ರಾಹಕರ ಪ್ರಯೋಗಗಳಿಗಾಗಿ ಎಲ್120 ಎಲೆಕ್ಟ್ರಿಕ್ ವೀಲ್ ಲೋಡರ್ ಅನ್ನು ಭಾರತಕ್ಕೆ ತರಲಾಗಿದೆ
ಒಂದು-ಸೇವೆಯಾಗಿ-ಸಲಕರಣೆ (ಈಕ್ವಿಪ್‌ಮೆಂಟ್ ಆ್ಯಸ್ ಎ ಸರ್ವೀಸ್-ಇಎಎಸ್) ಮತ್ತು ನವೀನ ಪರಿಹಾರಗಳು ಮತ್ತು ಸಮಗ್ರ ಬೆಂಬಲದ ಮೂಲಕ ಸುಲಭವಾದ ಅಳವಡಿಸಿಕೊಳ್ಳುವಿಕೆಯನ್ನು ವೇಗಗೊಳಿಸುವುದು

ಬೆಂಗಳೂರು, 12 ಡಿಸೆಂಬರ್, 2023: ವೋಲ್ವೋ ಕನ್‌ಸ್ಟ್ರಕ್ಷನ್ ಈಕ್ವಿಪ್‌ಮೆಂಟ್ (ವೋಲ್ವೋ ಸಿಇ) ಇಂಡಿಯಾ ಕಂಪನಿ ಇಂದು ದಕ್ಷಿಣ ಏಷ್ಯಾದ ಅತಿದೊಡ್ಡ ನಿರ್ಮಾಣ ಸಲಕರಣೆಗಳ ಕಾರ್ಯಕ್ರಮವಾದ ಎಕ್ಸ್‌ಕಾನ್ 2023ರಲ್ಲಿ ಭಾರತದಲ್ಲಿನ ಎಲೆಕ್ಟ್ರಿಕ್ ಯಂತ್ರಗಳ ಅತಿದೊಡ್ಡ ಪ್ರದರ್ಶನ ಮಾಡುವುದರೊಂದಿಗೆ ಸುಸ್ಥಿರತೆಯ ಗುರಿಯತ್ತ ಚಲಿಸುವ ತನ್ನ ಬದ್ಧತೆಯ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕಂಪನಿಯು ನವೀನ ಸೇವಾ ಪರಿಹಾರಗಳೊಂದಿಗೆ ಸಮಗ್ರ ಶ್ರೇಣಿಯ ಎಲೆಕ್ಟ್ರಿಕ್ ಮತ್ತು ಇತರ ಯಂತ್ರಗಳನ್ನು ಪ್ರದರ್ಶಿಸಿತು. ಗ್ರಾಹಕರನ್ನು ಸಶಕ್ತಗೊಳಿಸಲು ಮತ್ತು ಅವರ ಉತ್ಪಾದಕತೆ ಮತ್ತು ಸುಸ್ಥಿರತೆಯ ಗುರಿಗಳನ್ನು ಸಾಧಿಸಲು ಅಗತ್ಯವಾದ ಸಾಧನಗಳನ್ನು ಒದಗಿಸುವಲ್ಲಿ ಕಂಪನಿ ಅಚಲ ಬದ್ಧತೆಯನ್ನು ಪ್ರದರ್ಶಿಸಿತು.
ವೋಲ್ವೋ ಸಿಇ ಕಂಪನಿ ಗಣಿಗಾರಿಕೆ, ವಸ್ತು ನಿರ್ವಹಣೆ, ಉಕ್ಕು, ಸಿಮೆಂಟ್ ಮತ್ತು ನಗರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚು ಸಮರ್ಥನೀಯ ಕಾರ್ಯಾಚರಣೆ ನಡೆಸುವ ಮೂಲಕ ಮುನ್ನಡೆ ಪಡೆಯುತ್ತಿದೆ. 50-ಟನ್ ವರ್ಗದಲ್ಲಿ ಭಾರತದ ಮೊದಲ ಗ್ರಿಡ್-ಸಂಪರ್ಕಿತ ಎಲೆಕ್ಟ್ರಿಕ್ ಎಕ್ಸ್ಕವೇಟರ್ ಆದ ಇಸಿ500 ಎಲೆಕ್ಟ್ರಿಕ್ ಅನ್ನು ಮೊದಲ-ಬಾರಿ ವಾಣಿಜ್ಯವಾಗಿ ಪರಿಚಯಿಸುವುದರೊಂದಿಗೆ, ವೋಲ್ವೋ ಸಿಇ ಝೀರೋ-ಎಮಿಷನ್ ಗಣಿಗಾರಿಕೆ ಮತ್ತು ನಿರ್ಮಾಣ ಯಂತ್ರೋಪಕರಣಗಳ ಕಡೆಗೆ ಸಾಗುವುದರ ಮೂಲಕ ಮಹತ್ವದ ಪರಿವರ್ತನೆಯನ್ನು ಸಾಧಿಸಿದೆ. ಇದರ ಜೊತೆಗೆ, ಪ್ರಾಯೋಗಿಕವಾಗಿ ಆರಂಭಿಸಿರುವ ಎಲ್120 ಎಲೆಕ್ಟ್ರಿಕ್ ವೀಲ್ ಲೋಡರ್‌ನ ಪರಿವರ್ತಕ ಸಾಮರ್ಥ್ಯವು, ಬಂದರುಗಳು, ಗಣಿಗಳು, ಪ್ಲಾಂಟ್ ಗಳು ಮತ್ತು ಇತರ ನಿರ್ಮಾಣ ಸ್ಥಳಗಳಲ್ಲಿ ವಸ್ತು ನಿರ್ವಹಣೆಯ ಭವಿಷ್ಯದ ಒಳನೋಟವನ್ನು ನೀಡಿತು. ಇದು ಶೂನ್ಯ ಟೈಲ್‌ಪೈಪ್ ಎಮಿಷನ್, ನಿಶ್ಯಬ್ದ ಕಾರ್ಯಾಚರಣೆಗಳು ಮತ್ತು ವಿವಿಧ ಒಳಾಂಗಣ ಮತ್ತು ಹೊರಾಂಗಣ ಅಪ್ಲಿಕೇಶನ್‌ಗಳಿಗೆ ಹೆಚ್ಚು ಆರಾಮದಾಯಕ ಕೆಲಸದ ವಾತಾವರಣವನ್ನು ಒದಗಿಸುತ್ತದೆ. ಇಸಿ80 ಎಲೆಕ್ಟ್ರಿಕ್, ಈಗಾಗಲೇ ಅಸ್ತಿತ್ವದಲ್ಲಿರುವ ಕಾಂಪ್ಯಾಕ್ಟ್ ಇಸಿ55 ಎಲೆಕ್ಟ್ರಿಕ್‌ಗೆ ಹೆಚ್ಚುವರಿಯಾಗಿ, ನಗರ ನಿರ್ಮಾಣ ಮತ್ತು ಅರಣ್ಯ ಸಂಬಂಧಿ ಕೆಲಸಗಳಲ್ಲಿ ಬಳಸಲ್ಪಡುತ್ತದೆ. ಈ ನವೀನ ಯಂತ್ರವು ದೊಡ್ಡ ಬ್ಯಾಟರಿ ಹೊಂದಿದ್ದು, 6-8 ಗಂಟೆಗಳ ಕಾಲ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ, ಅದಕ್ಕಾಗಿ ಈ ಯಂತ್ರದ ಬ್ಯಾಟರಿಗೆ ಧನ್ಯವಾದ ಸಲ್ಲಿಸಬೇಕಾಗಿದೆ.
ಭಾರತ-ಅಭಿವೃದ್ಧಿಪಡಿಸಿದ ಮತ್ತು ವಿನ್ಯಾಸಗೊಳಿಸಿದ ಎಲೆಕ್ಟ್ರಿಕ್ ಕಾಂಪ್ಯಾಕ್ಟರ್‌ಗಳಾದ, ಡಿಡಿ40 ಮತ್ತು ಪಿಟಿ220 ಅನ್ನು ತಂತ್ರಜ್ಞಾನ ಪರಿಕಲ್ಪನೆಗಳಾಗಿ ಪ್ರದರ್ಶಿಸಲಾಯಿತು. ಡಿಡಿ40 ಎಲೆಕ್ಟ್ರಿಕ್ ಕಾಂಪ್ಯಾಕ್ಟರ್ ಸುಧಾರಿತ ಉಪಕರಣ, ಝೀರೋ-ಎಮಿಷನ್ ಕಾರ್ಯಾಚರಣೆ ಮತ್ತು ವಿಶ್ವಾಸಾರ್ಹ ಚಾರ್ಜಿಂಗ್ ಅನ್ನು ಹೊಂದಿದೆ, ಇದು ಬಳಕೆದಾರರಿಗೆ ಶೇ.50%ವರೆಗಿನ ಶಕ್ತಿಯ ವೆಚ್ಚದ ಕಡಿತವನ್ನು ಉಂಟು ಮಾಡುತ್ತದೆ, ಇದೇ ಸಮಯದಲ್ಲಿ ಪಿಟಿ220 ಎಲೆಕ್ಟ್ರಿಕ್ ಕಟ್ಟುನಿಟ್ಟಾದ ಎಮಿಷನ್ ನಿಯಮಗಳೊಂದಿಗೆ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಸೂಕ್ತವಾಗಿದೆ, ಸ್ವಚ್ಛ ಮತ್ತು ನಿಶ್ಯಬ್ದ ನಿರ್ಮಾಣ ಕಾರ್ಯಾಚರಣೆಗಳನ್ನು ಮಾಡಲು ನೆರವಾಗುತ್ತದೆ. ಈ ಎರಡೂ ಉತ್ಪನ್ನಗಳು ವೋಲ್ವೋ ಸಿಇಯ ಸುಧಾರಿತ ಇಂಜಿನಿಯರಿಂಗ್ ಸಾಮರ್ಥ್ಯಗಳನ್ನು ತೋರಿಸುತ್ತವೆ ಮತ್ತು ಸರ್ಕಾರದ ಆತ್ಮನಿರ್ಭರ್ ಭಾರತ್ ಯೋಚನೆಗೆ ಅನುಗುಣವಾಗಿ ಭಾರತೀಯ ಮಾರುಕಟ್ಟೆಗೆ ಸುಸ್ಥಿರ ಸ್ಥಳೀಯ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮರ್ಪಿತವಾಗಿದೆ.
“ಸಿಐಐ ಎಕ್ಸ್‌ಕಾನ್ 2023ರಲ್ಲಿ ನಿರ್ಮಾಣ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿನ ನಮ್ಮ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಲು ನಿರ್ಣಾಯಕ ವೇದಿಕೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಅರ್ತ್ ಮೂವಿಂಗ್ ಈಕ್ವಿಪ್‌ಮೆಂಟ್ ಮಾರುಕಟ್ಟೆಯಲ್ಲಿ ಯೋಜಿಸಲಾಗಿರುವ ಅಸಾಧಾರಣ ಶೇ 10-15% ಸಿಎಜಿಆರ್ ಅನ್ನು ತಲುಪುವುದನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಈ ಬೆಳವಣಿಗೆಯು ಶುದ್ಧ ತಂತ್ರಜ್ಞಾನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಸ್ಫೂರ್ತಿ ಪಡೆದಿದೆ. ಧನಾತ್ಮಕ ಬದಲಾವಣೆಗೆ ವೇಗವರ್ಧಕವಾಗುವ ವೋಲ್ವೋ ಸಿಇ ಇಂಡಿಯಾದ ಮಿಷನ್ ಜೊತೆಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ. ನಮ್ಮ ಎಕ್ಸ್ಕವೇಟರ್ ಗಳು, ಹೌಲರ್ ಗಳು, ವೀಲ್ ಲೋಡರ್‌ಗಳು ಮತ್ತು ಇತರ ಉಪಕರಣಗಳು ನಿರ್ಮಾಣ, ಗಣಿಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಸ್ತು ನಿರ್ವಹಣೆ ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸುತ್ತವೆ” ಎಂದು ವೋಲ್ವೋ ಸಿಇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಡಿಮಿಟ್ರೋವ್ ಕೃಷ್ಣನ್ ಹೇಳಿದ್ದಾರೆ. ಮಾತು ಮುಂದುವರಿಸುತ್ತಾ ಅವರು, “ನಾವು ಉತ್ಪನ್ನಗಳನ್ನು ನೀಡುವುದಕ್ಕಿಂತಲೂ ಹೆಚ್ಚಾಗಿ ವಿಭಿನ್ನವಾಗಿ ಸಾಗುತ್ತೇವೆ; ನವೀನ ವಿದ್ಯುತ್ ಪರಿಹಾರಗಳು ಮತ್ತು ಸಮಗ್ರ ಸುಸ್ಥಿರತೆಯ ಬೆಂಬಲದ ಜೊತೆಗೆ ನಾವು ಮಾದರಿ ಬದಲಾವಣೆಯನ್ನು ತರುತ್ತೇವೆ,” ಎಂದು ಹೇಳಿದರು.
ವೋಲ್ವೋ ಸಿಇ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಗೆ ಖ್ಯಾತಿ ಪಡೆದಿರುವ ಅವರ ಚಾಂಪಿಯನ್ ಆದ 20-ಟನ್ ಇಸಿ210ಡಿ ಎಕ್ಸ್ಕವೇಟರ್ ಅನ್ನೂ ಪ್ರದರ್ಶಿಸಿತು. ಎಲೆಕ್ಟ್ರಿಕ್ ಆವಿಷ್ಕಾರದ ಹೊರತಾಗಿ, ವೋಲ್ವೋ ಸಿಇ ಹೊಸ ಯುಗದ ಸೇವಾ ಪರಿಹಾರಗಳೊಂದಿಗೆ ಗ್ರಾಹಕರ ಯಶಸ್ಸನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಎತ್ತಿ ತೋರಿಸುತ್ತಿದೆ, ಈ ಪರಿಹಾರಗಳಲ್ಲಿ ಸೇವೆಯಾಗಿ ಸಲಕರಣೆಗಳು(ಈಕ್ವಿಪ್‌ಮೆಂಟ್ ಆ್ಯಸ್ ಎ ಸರ್ವೀಸ್-ಇಎಎಸ್), ಉತ್ಪಾದಕತೆ ಮತ್ತು ಅಪ್‌ಟೈಮ್ ಸೇವೆಗಳು ಸೇರಿವೆ. ಇಎಎಸ್ ವ್ಯಾಪಾರ ಮಾದರಿಯು ಮೌಲ್ಯವರ್ಧಿತ ಆರೋಹಣೀಯ ಸೇವೆಯಾಗಿದ್ದು, ಅದು ದಕ್ಷತೆ ಕ್ರಮಗಳ ಜೊತೆಗೆ ಅತ್ಯಾಧುನಿಕ ಉಪಕರಣಗಳನ್ನು ಸೇರಿಸುತ್ತದೆ ಮತ್ತು ಹೆಚ್ಚಿನ ಬಂಡವಾಳ ವೆಚ್ಚಗಳು, ನುರಿತ ಮಾನವಶಕ್ತಿ ಮತ್ತು ತಂತ್ರಜ್ಞಾನದ ನವೀಕರಣಗಳ ಕುರಿತಾದ ಆತಂಕವನ್ನು ಕಳೆಯುವ ಮೂಲಕ ಗ್ರಾಹಕರ ವ್ಯಾಪಾರ ಸಾಮರ್ಥ್ಯವನ್ನು ತೆರೆಯುತ್ತದೆ, ಆದ್ದರಿಂದ ವಿದ್ಯುತ್ ಯಂತ್ರಗಳಿಗೆ ಬದಲಾವಣೆ ಹೊಂದುವುದನ್ನು ಸುಲಭಗೊಳಿಸುತ್ತದೆ.
ಇದಲ್ಲದೆ, ವೋಲ್ವೋ ಸಿಇ ಇಂಡಿಯಾ ಗ್ರಾಹಕರನ್ನು ಅವರ ಪ್ರಯಾಣದ ಉದ್ದಕ್ಕೂ ಬೆಂಬಲಿಸಲು ಉತ್ಪಾದಕತೆಯ ಸೇವೆಗಳ ಸಂಪೂರ್ಣ ಸೆಟ್ ಅನ್ನು ಒದಗಿಸುತ್ತದೆ. ಅವುಗಳಲ್ಲಿ ಆಪರೇಟರ್ ಸಿಮ್ಯುಲೇಟರ್‌ಗಳು, ಸ್ಮಾರ್ಟ್ ಅಸಿಸ್ಟ್ ಪರಿಹಾರಗಳು, ಮೆಶಿನ್ ಕಾನ್ಫಿಗರೇಶನ್ ಮತ್ತು ತರಬೇತಿ ಒಳಗೊಂಡಿವೆ. ಸ್ವಯಂಚಾಲಿತ ಯಂತ್ರ ಮೇಲ್ವಿಚಾರಣೆ ಮತ್ತು ರಿಯಲ್-ಟೈಮ್ ತಾಂತ್ರಿಕ ಬೆಂಬಲದಂತಹ ಅದರ ಅಪ್‌ಟೈಮ್ ಸೇವೆಗಳ ಪ್ರಯೋಜನಗಳನ್ನು ಕೂಡ ಗ್ರಾಹಕರು ಪಡೆಯುತ್ತಾರೆ. ವೋಲ್ವೋ ಸಿಇ ಗ್ರಾಹಕರು ಪರಿಣಿತ ತಂತ್ರಜ್ಞರು, ನೈಜ ಭಾಗಗಳು ಮತ್ತು ಮರುಉತ್ಪಾದಿತ ಘಟಕಗಳ ಲಭ್ಯತೆಯನ್ನು ಹೊಂದಿದ್ದಾರೆ, ಇದು ಗರಿಷ್ಠ ಅಪ್ ಟೈಮ್ ಮತ್ತು ಭರವಸೆಯನ್ನು ಒದಗಿಸುತ್ತದೆ.
ನಮ್ಮ ಉದ್ಯಮದ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಎಲೆಕ್ಟ್ರಿಕ್ ಯಂತ್ರಗಳ ಜೊತೆಗೆ ವೋಲ್ವೋ ನಿರ್ಮಾಣ ಸಲಕರಣೆಗಳು ಮುನ್ನಡೆ ಸಾಧಿಸಿವೆ. ಅವರ ಸೇವೆಗಳು ಗ್ರಾಹಕರಿಗೆ ತಮ್ಮ ವ್ಯವಹಾರಗಳಲ್ಲಿ ಸುಧಾರಿತ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಸಾಧಿಸಲು ಸಹಾಯ ಮಾಡುವುದರ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ನಮಗೆ ತಿಳಿದಿರುವಂತೆ ನಿರ್ಮಾಣ ಸಲಕರಣೆಗಳ ಉದ್ಯಮವನ್ನು ಒಂದು ಸಮಯದಲ್ಲಿ ಹಂತ ಹಂತವಾಗಿ ಪರಿವರ್ತಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://www.volvoce.com/india/en-in/
City Today News 9341997936

You must be logged in to post a comment.