
ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾವಿ ಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರ “ಜನ್ಮದಿನೋತ್ಸವ”ದ ಅಂಗವಾಗಿ ಪರಮಪೂಜ್ಯ ಶ್ರೀ 1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಚಾರ್ಯರ ನೇತೃತ್ವದಲ್ಲಿ ವಿಶೇಷವಾಗಿ ಶ್ರೀ ಹಯವದನೋಪನಿಷತ್ ಪರಿಷತ್ ಇವರ ಸಹಯೋಗದೊಂದಿಗೆ ಹಯವದನಾಂಕಿತ 108 ಹಾಡುಗಳ ಶ್ರೀಹರಿ ಭಜನೆ ಕಾರ್ಯಕ್ರಮಗಳು ವಿವಿಧ ಭಜನಾ ಮಂಡಳಿಗಳ ಸದಸ್ಯರುಗಳಿಂದ ಮತ್ತು ಸಿಬ್ಬಂದಿಗಳ ಸಹಕಾರದಿಂದ ನೆರವೇರಿತು ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದರು. ಈ ಕಾರ್ಯಕ್ರಮ ಉತ್ಸವದಲ್ಲಿ ಭಕ್ತಾದಿಗಳು ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
City Today News 9341997936

You must be logged in to post a comment.