ಭೂಗಳ್ಳರಿಂದ ನನಗೆ ಜೀವ ಭಯವಿದ್ದು ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲಿ ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗುವ ಸಂಭವವಿದೆ – ಕೆ. ಮುನೇಗೌಡ ಪ್ರಗತಿಪರ ರೈತರು

ಬೆಂಗಳೂರು ಉತ್ತರ ತಾಲ್ಲೂಕು, ನಾಗಶೆಟ್ಟಿಹಳ್ಳಿ ಮತ್ತು ಭೂಪಸಂದ್ರ ಗ್ರಾಮದ ಸಾವಿರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಭೂಗಳ್ಳರು, ಕೊಲೆಗಡುಕರು. ಅಂಡರ್‌ವರ್ಲ್ಡ್ ಡಾನ್‌ಗಳು, ರೌಡಿಗಳು, ಕಂದಾಯ ಅಧಿಕಾರಿಗಳು ಮತ್ತು ಇತರರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಒತ್ತುವರಿ ಮಾಡಿಕೊಂಡಿರುತ್ತಾರೆ. ಈ ಪ್ರಕರಣದ ಬಗ್ಗೆ ಅಡಗೂರು ಎಚ್. ವಿಶ್ವನಾಥ್ ರವರು ಗೃಹಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಯವರಿಗೆ. ಜನರಲ್ ಅಡ್ವಕೇಟ್ ರವರಿಗೆ, ಕಾನೂನು ಅಪರ ಕಾರ್ಯದರ್ಶಿಗಳಿಗೆ, ಪ್ರಧಾನ ಕಾರ್ಯದರ್ಶಿಗಳಿಗೆ, ರಾಜ್ಯಪಾಲರಿಗೆ ದೂರು ನೀಡಿ, ಈ ಭೂಗಳ್ಳರಿಂದ 72 ವರ್ಷ ವಯಸ್ಸಾದ ಪ್ರಗತಿಪರ ರೈತನಾದ ನನಗೆ ಜೀವ ಭಯವಿರುವುದರಿಂದ ಪೊಲೀಸ್ ರಕ್ಷಣೆ ಕೊಡಬೇಕೆಂದು ಕೋರಿಕೊಂಡಿರುತ್ತಾರೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ದೂರು ನೀಡಿ ಸಿ.ಸಿ. ನಂಬರ್ 26843/2016, ಜೈಲಿಗೆ ಕಳುಹಿಸಿ ಜೈಲಿನಲ್ಲಿ ನನ್ನ ಕೊಲೆ ಯತ್ನ ನಡೆದಿರುತ್ತದೆ ಎಂದು ಹೆಚ್. ವಿಶ್ವನಾಥ್ ರವರು ದೂರು ನೀಡಿರುತ್ತಾರೆ. ಇವರುಗಳು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾರೆ. ತಾವುಗಳು ನಿಮ್ಮ ಹಿಂಬರಹದಲ್ಲಿ ದಿನಾಂಕ 07.12.2024 ರಂದು ತಲೆ ಮರೆಸಿಕೊಂಡಿರುವವರನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು  ತಿಳಿಸಿರುತ್ತಾರೆ.

ಮೇಲ್ಕಾಣಿಸಿದ ಭೂಗಳ್ಳರಿಂದ ನನಗೆ ಜೀವ ಭಯವಿದ್ದು ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲಿ ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗುವ ಸಂಭವವಿರುವುದರಿಂದ ನನಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಕೆ. ಮುನೇಗೌಡ ಪ್ರಗತಿಪರ ರೈತರು ತಿಳಿಸಿದರು.

City Today News 9341997936