“ಮಂತ್ರಾಲಯ ಶ್ರೀಗಳಿಂದ ಜಯನಗರ ರಾಯರ ಮಠದಲ್ಲಿ ಶ್ರೀಮನ್ ಮೂಲ ರಾಮಚಂದ್ರ ದೇವರ ಪೂಜೆ”

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಪರಮಪೂಜ್ಯರ ಅಧ್ಯಕ್ಷತೆಯಲ್ಲಿ ಮಂತ್ರಾಲಯದ ಶ್ರೀ “ಗುರುಸಾರ್ವಭೌಮ”  ವಿದ್ಯಾಪೀಠದ ವಿದ್ಯಾರ್ಥಿಗಳಿಗೆ “ಶಾಸ್ತ್ರೀಯ ಪರೀಕ್ಷೆ”ಯನ್ನು ಬೆಂಗಳೂರು ನಗರದ ಪವಮಾನಪುರ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯ ಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಘನ ಅಧ್ಯಕ್ಷತೆಯಲ್ಲಿ ಶೀಗಳ ಪೂರ್ವಾಶ್ರಮದ ತಂದೆಯವರಾದ ಪಂಡಿತ ಕೇಸರಿ ರಾಜಾ ಎಸ್. ಗಿರಿ ಆಚಾರ್ಯರ  ಉಪಸ್ಥಿತಿಯಲ್ಲಿ ವಿಶೇಷ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಪರೀಕ್ಷೆಯ ಕಾರ್ಯಕ್ರಮವು ನೆರವೇರಿತು. ಈ ಪರೀಕ್ಷಾ ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚಿನ ವಿದ್ವಾಂಸರಿಂದ ಶಾಸ್ತ್ರ ಪರೀಕ್ಷೆಯನ್ನು ನಡೆಸಿ  ವಿದ್ಯಾರ್ಥಿಗಳ ಪರೀಕ್ಷೆಯನ್ನು  ಕಂಡು ಸಂತೋಷ ವ್ಯಕ್ತಪಡಿಸುತ್ತಾ ವಿದ್ಯಾ ಮಠ ಶ್ರೀ ರಾಯರ ಮಠದ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಿದ ಶ್ರೀ ಶ್ರೀ ಪಾದರನ್ನು ಅಭಿನಂದಿಸಿ ಗೌರವಿಸಿ ಸನ್ಮಾನಿಸಿ ನಮಸ್ಕರಸಿದರು. ನಂತರ ಪರಮಪೂಜ್ಯ ಶ್ರೀಪಾದರು ಈ ದಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಶ್ರೀಮನ್ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಬಂಗಾರದ ಮೂಲ ಪಾದುಕೆಗಳಿಗೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೂ ಮಹಾ ಮಂಗಳಾರತಿಯನ್ನು ನೆರವೇರಿಸಿ, ಭಕ್ತರಿಗೆ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು.

City Today News 9341997936