
ಬೆಂಗಳೂರು, ಫೆಬ್ರವರಿ 2025: ಸಾಮಾಜಿಕ ಸಾಮರಸ್ಯವು ಅಪಾಯದಲ್ಲಿರುವ ಮತ್ತು ದ್ವೇಷದ ರಾಜಕೀಯ ಮುಂದುವರಿದಿರುವ ಪೈಪೋಟಿಯ ಸಂದರ್ಭದಲ್ಲಿ, “ಬೆಂಗಳೂರು ಪ್ರೀತಿ ಉತ್ಸವ 2025” ಪ್ರೀತಿಯ ಪರಿವರ್ತಕ ಶಕ್ತಿಯನ್ನು ಸಂಭ್ರಮಿಸುವ ವೇದಿಕೆಯಾಗಿ ರೂಪುಗೊಂಡಿದೆ. ಈ ವಿಶೇಷ ಉತ್ಸವವು ಸಂಗೀತ, ಕವನ, ಪ್ರದರ್ಶನ, ಮತ್ತು ಸಂವಾದದ ಮೂಲಕ ಪ್ರೀತಿ ಮತ್ತು ಪ್ರತಿರೋಧವನ್ನು ಆಚರಿಸುತ್ತದೆ.
ಈ ಹಬ್ಬದಲ್ಲಿ ಕಲಾವಿದರು, ಕಾರ್ಯಕರ್ತರು, ಚಿಂತಕರು ಮತ್ತು ಸಂಗೀತಗಾರರು ಒಗ್ಗೂಡುತ್ತಾ, ಪ್ರೀತಿಯನ್ನು ಮಾನವೀಯತೆಯ ಸಂಕೇತವಾಗಿ ಮತ್ತು ಪ್ರತಿರೋಧದ ಶಕ್ತಿಯಾಗಿ ಪರಿಗಣಿಸುವ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ದಾದಾಪೀರ್ ಜೈಮನ್, ಅಕೈ ಪದ್ಮಶಾಲಿ, ರೂಮಿ ಹರೀಶ್ ಹಾಗೂ ಸೌಮ್ಯಾ ಎ. ಅವರು ಉತ್ಸವದ ಮಹತ್ವವನ್ನು ಹಂಚಿಕೊಂಡರು.
ಹಬ್ಬದ ಮುಖ್ಯಾಂಶಗಳು:
ಕಾಶ್ಮೀರಿ ಸೂಫಿ ಸಂಗೀತ ಸಂಜೆ: ಸೂಫಿ ಪರಂಪರೆಯ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಗುಣಪಡಿಸುವಿಕೆಯನ್ನು ಅನಾವರಣಗೊಳಿಸುವ ಸಂಗೀತ ಅನುಭವ.
ವಿಶೇಷ ಉಪನ್ಯಾಸ – “ಪ್ರೀತಿ ಮತ್ತು ಸಂವಿಧಾನ”: ವಕೀಲ ಮತ್ತು ಬರಹಗಾರ ಅರವಿಂದ್ ನರೇನ್, ಬಾಬಾಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಆಧರಿಸಿ ಸಂವಿಧಾನ ಮತ್ತು ಪ್ರೀತಿಯ ರಾಜಕೀಯದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ.
ಚರ್ಚೆಗಳು: ಬರಹಗಾರರು, ಪ್ರಕಾಶಕರು ಮತ್ತು ಚಿಂತಕರು ಕರ್ನಾಟಕದ ಪ್ರಸ್ತುತ ಹಾಗೂ ಭವಿಷ್ಯದ ಬಗ್ಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
“ಬಿಕ್ಕಟ್ಟು” ನಾಟಕ: ಕ್ಷಿಯರ್ ಮತ್ತು ಟ್ರಾನ್ಸ್ ಸಮುದಾಯದ ಇತಿಹಾಸ, ರಾಜಕೀಯ, ಮತ್ತು ಹೋರಾಟವನ್ನು ಪ್ರತಿಬಿಂಬಿಸುವ ವಿಶೇಷ ನಾಟಕ.
ಪ್ರತಿರೋಧದ ಹಾಡುಗಳು ಮತ್ತು ಕವನ ಸಂಜೆ: ಪ್ರಖ್ಯಾತ ರಂಗಭೂಮಿ ತಂಡ ಪ್ರೀತಿಯ ಪ್ರತಿರೋಧದ ಹಾಡುಗಳನ್ನು ಪ್ರಸ್ತುತಪಡಿಸುವ ಜೊತೆಗೆ, ಇಪ್ಪತ್ತು ಕವಿಗಳು ತಮ್ಮ ಕವನಗಳ ಮೂಲಕ ಪ್ರೀತಿಯ ತಾತ್ತ್ವಿಕತೆಯನ್ನು ಅನಾವರಣಗೊಳಿಸುತ್ತಾರೆ.
ಈ ಪ್ರಥಮ ಆವೃತ್ತಿಯ ಉತ್ಸವವನ್ನು ಮಾರಿವಾಲಾ ಹೆಲ್ತ್ ಇನಿಶಿಯೇಟಿವ್, ಮಾರಾ, ಆಲ್ಮರ್ನೇಟಿವ್ ಲಾ ಫೋರಂ, ಮತ್ತು ಸ್ಪೇಸ್ ಫಾರ್ ಡ್ರೀಮ್ಸ್ ಬೆಂಬಲಿಸುತ್ತಿವೆ. ಬೆಂಗಳೂರು ಪ್ರೀತಿ ಉತ್ಸವ 2025 ಪ್ರೀತಿಯ ರಾಜಕೀಯವನ್ನು ರೂಪಿಸಲು ಮತ್ತು ಕಲೆಯ ಮೂಲಕ ಪ್ರತಿರೋಧದ ನವ ರೂಪವನ್ನು ತಲುಪಿಸಲು ಪಯಣಿಸುತ್ತಿದೆ.
City Today News 9341997936

You must be logged in to post a comment.