
ಪರಿವರ್ತನಾ ಸೋಶಿಯಲ್ ಸರ್ವಿಸ್ ಸೊಸೈಟಿ, ಸುಂಕದಕಟ್ಟೆ, ಬೆಂಗಳೂರು ಎಂಬ ಸಂಸ್ಥೆಯು ಮಧ್ಯಪಾನ ಮತ್ತು ಮಾದಕ ವ್ಯಾಸನ ತಡೆಗಟ್ಟುವಿಕೆ ಮತ್ತು ಪುನರ್ವಸತಿ ಕೇಂದ್ರವಾಗಿದ್ದು 2016 ರಿಂದ ಕೆಲಸವನ್ನು ವಹಿಸುತ್ತಿದ್ದ ಒಂದು ಸಂಸ್ಥೆಯಾಗಿದೆ.
ಅಲ್ಲಿದ್ದಂತಹ ಓರ್ವ ವ್ಯಕ್ತಿಯ ಸುಳ್ಳು ಕಂಪ್ಲೇಂಟ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ ನಿಗೆ ಕಳಿಸಿದ್ದು ಆ ಕಂಪ್ಲೇಂಟಿನ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಅವರ ಸಿಬ್ಬಂದಿ ವರ್ಗದವರು 7ನೇ ನವಂಬರ್ 2023 ರಂದು ಅಚಾನಕ್ಕಾಗಿ ಪರಿವರ್ತನಾ ಸೋಶಿಯಲ್ ಸರ್ವಿಸ್ ಸೊಸೈಟಿಗೆ ಬಂದು ಆ ಸಂಸ್ಥೆಯನ್ನು ಮುಚ್ಚುವಂತೆ ದಿಢೀರನೆ ಆದೇಶ ನೀಡಿ ಅಲ್ಲಿ ಇದ್ದಂತಹ ಎಲ್ಲಾ ಪೇಷಂಟ್ಗಳನ್ನು ಹೊರಗೆ ಹಾಕುವಂತೆ ಆದೇಶ ಮಾಡಿ ಸೀಲ್ ಮಾಡಿದ್ದರು.

ಈ ರೀತಿಯಾಗಿ ಅಚಾನಕ್ಕಾಗಿ ಬಂದು ಸೀಲ್ ಹಾಕಿದ ಕಾರಣ ಸಂಸ್ಥೆಯ ಪದಾಧಿಕಾರಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಲು ಹತ್ತಿ ಈ ಒಂದು ಕಾರ್ಯವನ್ನು ಚಾಲೆಂಜ್ ಮಾಡಿ ಹೈಕೋರ್ಟಿನಿಂದ ಮರು ಕಾರ್ಯರೂಪಕ್ಕೆ ಬರುವಂತೆ ಆದೇಶವನ್ನು ಇದೇ ತಿಂಗಳಿನ ಎಂಟನೇ ತಾರೀಕು ಪಡೆದಿದ್ದಾರೆ.
ಈ ಸಮಯದಲ್ಲೇ ಇಂದು ದಿನಾಂಕ 18 ಮಾರ್ಚ್ 2024 ಡಿಸ್ಟ್ರಿಕ್ ಮೆಂಟಲ್ ಹೆಲ್ತ್ ಆಫೀಸರ್ ಆದಂತಹ ಡಾ. ನಾಗರಾಜ್ ರವರು ಮತ್ತು ಅವರ ಸಿಬ್ಬಂದಿ ಬಂದು ಅವರು ಹಾಕಿದ್ದಂತ ಸೀಲನ್ನು ತೆಗೆದು ಸಂಸ್ಥೆಯ ಪದಾಧಿಕಾರಿಗಳಿಗೆ ಸಂಸ್ಥೆಯನ್ನು ಒಪ್ಪಿಸಿದ್ದಾರೆ.
ಆದೇಶವನ್ನು ಕೊಟ್ಟಂತಹ ಕರ್ನಾಟಕ ಹೈಕೋರ್ಟಿಗೆ ನಮ್ಮ ಧನ್ಯವಾದಗಳು ಎಂದು ಶ್ರೀನಿವಾಸ್ ಆರ್
ಸಂಸ್ಥಾಪಕರು
ಪರಿವರ್ತನಾ ಸೋಶಿಯಲ್ ಸರ್ವಿಸ್ ಸೊಸೈಟಿ ಸುಂಕದಕಟ್ಟೆ ಬೆಂಗಳೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
City Today News 9341997936

You must be logged in to post a comment.