ಮನುಜ್ಯೋತಿ ಆಶ್ರಮದಿಂದ ಇದೇ 11ರಂದು ವಿಮೋಚನಾ ರಹಸ್ಯ ಪುಸ್ತಕ ಬಿಡುಗಡೆ.

ಮನು ಜ್ಯೋತಿ ಆಶ್ರಮವತಿಯಿಂದ‌ “ವಿಮೋಚನೆಯ ರಹಸ್ಯ” ಎಂಬ ಪುಸ್ತಕ ಬಿಡುಗಡೆ ಸಮಾರಂಭ ಇದೇ 11ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಆಶ್ರಮದ ಸಂಚಾಲಕ ಗಣೇಶ್ ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಮನುಜ್ಯೋತಿ ಆಶ್ರಮದ ದೇವಾಸೀರ್ ಲಾರಿ ಎಂಬುವವರು ಬರೆದಿರುವ ವಿಮೋಚನಾ ರಹಸ್ಯ ಎಂಬ ಪುಸ್ತಕವನ್ನು ಬರೆದಿದ್ದಾರೆ.ಮನುಷ್ಯ ಅನೇಕ ಗೊಂದಲಗಳಿಂದ ಹೊರ ಬರಬೇಕಾದರೆ ಹೇಗೆ ಎಂಬ ಬಗ್ಗೆ ಈ ಪುಸ್ತಕದ ಸಾರಾಂಶದಲ್ಲಿದೆ.ಮನು ಕುಲದಲ್ಲಿರುವ ಎಲ್ಲ ದೇವರು, ಧರ್ಮ ಒಂದೇ ಆಗಿದೆ ಎಂಬ ಸಂದೇಶಗಳನ್ನು ಸಾರುವ ಉದ್ದೇಶವನ್ನು ಈ ಆಶ್ರಮ ಹೊಂದಿದೆ ಎಂದು ಹೇಳಿದರು.

ಪಾಲರಾಜ್ ಮಾತನಾಡಿ, ಮನು ಜ್ಯೋತಿ ಪುಸ್ತಕ ಸಮಾರಂಭ ಬೆಂಗಳೂರಿನ ಅಲಸೂರಿನ ಜಿಮ್ ಖಾನ್ ಕ್ಲಬ್ ನಲ್ಲಿ ಬಿಡುಗಡೆ ಗೊಳಿಸಲಾಗುವುದು, ಆಶ್ರಮದ ಮುಖ್ಯಸ್ಥರಾದ ಲಿಯೋ ಸಿ ಲಾರಿ,ಆಶ್ರಮದ ನಿರ್ಮಾಪಕರಾದ ಲಹರಿ ಕೃಷ್ಣ,ಶಾಸಕರಾದ ಬೈರತಿ ಬಸವರಾಜ್, ಹಿರಿಯ ಅಧಿಕಾರಿ ಸಂಗಮೇಶ್ ಉಪಾಸೆ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

City Today News 9341997936