
13-02-2023ರಂದು ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿ.ಜೆ.ಪಿ ಮಹಾ ಶಕ್ತಿಕೇಂದ್ರದ ಸಾರ್ವಜನಿಕ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ|| ಸಿ. ಅಶ್ವಥ್‌ನಾರಾಯಣ ರವರು ಸರ್ವರನ್ನು ಸಮಾನವಾಗಿ ಕಾಣುವ ಅಗ್ರಗಣ್ಯ ವ್ಯಕ್ತಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು ಟಿಪ್ಪು ಸುಲ್ತಾನ್‌ರವರಿಗೆ ಹೋಲಿಕೆ ಮಾಡಿ ಅಂದು ಟಿಪ್ಪು ಸುಲ್ತಾನನ್ನು ಹುರೀಗೌಡ ಮತ್ತು ನಂಜೇಗೌಡರವರು ಹೊಡೆದು ಕೊಲೆ ಮಾಡಿದ ರೀತಿಯಲ್ಲಿ ಇಂದು ಸಿದ್ದರಾಮಯ್ಯರವರನ್ನು ಹೊಡೆದು ಹಾಕಬೇಕೆಂದು ಸಾರ್ವಜನಿಕವಾಗಿ ತಮ್ಮ ಪಕ್ಷದ ಕಾರ್ಯಕರ್ತ ರಿಗೆ ಹಾಗೂ ಸಾರ್ವಜನಿಕರಿಗೆ ಪ್ರಚೋದನೆಯನ್ನು ನೀಡಿ ಮತ್ತು ಇವರನ್ನು ಮುಗಿಸಿ ಬಿಡಬೇಕು ಎಂದು ಹೇಳಿರುವ ಹೇಳಿಕೆಯು ಬಾಅಷವಾಗಿದೆ. ಈ ಹೇಳಕೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ಮತ್ತು ಕರ್ನಾಟಕ ರಾಜ್ಯ ಹಿಂದುಳದ ಜಾತಿಗಳ ಒಕ್ಕೂಟ ಹಾಗೂ ಅಪಾರ ಸಿದ್ದರಾಮಯ್ಯ ರವರ ಅಭಿಮಾನಿಗಳು ತೀವ್ರವಾಗಿ ಖಂಡಿಸುತ್ತೇವೆ.
ಈ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚಿಸುವ ವೇಳೆ ಡಾ|| ಸಿ. ಅಶ್ವಥ್‌ನಾರಾಯಣರವರು ಈ ವಿಚಾರವಾಗಿ ಮಾನ್ಯ ಸಿದ್ದರಾಮಯ್ಯರವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇನೆ ನಾನು ಯಾವುದೇ ವೈಯಕ್ತಿಕ ಉದ್ದೇಶದಿಂದ ನೀಡಿದ ಹೇಳಿಕೆಯಲ್ಲ ಕೇವಲ ರಾಜಕೀಯ ಉದ್ದೇಶದಿಂದ ನೀಡಿರುವ ಹೇಳಿಕೆ ಎಂದು ಹೇಳದ್ದಾರೆ. ಆದರೆ ಡಾ|| ಸಿ. ಅಶ್ವಥ್‌ನಾರಾಯಣರವರು ಬೆಷರತ್ ಅಗಿ ಸಾರ್ವಜನಿಕವಾಗಿ ಮಾನ್ಯ ಶ್ರೀ ಸಿದ್ದರಾಮಯ್ಯರವರ ಬಳಿ ಕ್ಷಮೆ ಕೇಳಬೇಕು ಹಾಗೂ ಈ ಕೂಡಲೇ ತಮ್ಮ ಸಚಿವ ಮಾಡುತ್ತೇವೆ. ನೀಡಬೇಕೆಂದು ಒತ್ತಾಯ
ಮಾನ್ಯ ಮುಖ್ಯಮಂತ್ರಿಗಳು ಡಾ|| ಸಿ. ಅಶ್ವಥ್‌ನಾರಾಯಣರವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಇವರ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಹಾಗೂ ದಿನಾಂಕ:20-02-2023ರಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 10-00 ಗಂಟೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ. ವೆಂಕಟೇಶ್‌ಮೂರ್ತಿ- ಪ್ರಧಾನ ಕಾರ್ಯದರ್ಶಿ Ex Mayor ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News – 9341997936

You must be logged in to post a comment.